ನವದೆಹಲಿ: ಭಾರತದ ಪ್ಲಾಗ್ ಮ್ಯಾನ್ ಎಂದೇ ಖ್ಯಾತರಾಗಿರುವ ಸ್ವಚ್ಛತಾ ಹೀರೋ ರಿಪು ದಮನ್ ಬೆವ್ಲಿ ಅವರನ್ನು ಭಾರತದ ಪ್ಲಾಗ್ಗಿಂಗ್ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಈ ಬಗ್ಗೆ ಘೋಷಣೆಯನ್ನು ಮಾಡಿದ್ದಾರೆ.
ಅಕ್ಟೋಬರ್ 2 ರಂದು ಆರಂಭಗೊಂಡ ಫಿಟ್ ಇಂಡಿಯಾ ಪ್ಲಾಗ್ಗಿಂಗ್ ರನ್ ಇಂದು ದೆಹಲಿಯ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಕೊನೆಗೊಂಡಿತು. ದೇಶದ ಒಟ್ಟು 50 ನಗರಗಳನ್ನು ಇದು ತಲುಪಿತ್ತು.
#Plogging is a combination of jogging with picking up litter. It provides fitness as well as cleanliness ( #SwachhBharat + #FitIndiaMovement ). I’m happy that our sportspersons, volunteers of #NYKS #NSS and large numbers of citizens are doing it as visualized by @narendramodi ji https://t.co/Dd56YqpKMw pic.twitter.com/R3io3l1jy7
— Kiren Rijiju (@KirenRijiju) December 5, 2019
ಸಚಿವರು ದೇಶವ್ಯಾಪಿಯಾಗಿ ಪ್ಲಾಗಿಂಗ್ ಅಂಬಾಸಿಡರ್ ಮಿಷನ್ ಅನ್ನು ಪ್ರಾರಂಭಿಸಿದ್ದಾರೆ, ಇದರಡಿಯಲ್ಲಿ ತಮ್ಮ ನಗರಗಳನ್ನು, ಪಟ್ಟಣಗಳನ್ನು ಅಥವಾ ಜಿಲ್ಲೆಗಳನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ನಿರತರಾಗಿರುವ ಜನರನ್ನು ತಮ್ಮ ಪ್ರದೇಶದ ಪ್ಲಾಗಿಂಗ್ ರಾಯಭಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದೆ.
ಜಾಗಿಂಗ್ ಮಾಡುತ್ತಾ ಕಸ ಹೆಕ್ಕುವ ಪ್ರಕ್ರಿಯೆಯನ್ನು ಪ್ಲಾಗ್ ರನ್ ಎಂದು ಕರೆಯಲಾಗುತ್ತದೆ. ಫಿಟ್ ಆಗಿಡುವಲ್ಲಿಯೂ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ.
ಸ್ವಚ್ಛತೆ ಮತ್ತು ಫಿಟ್ನೆಸ್ ಸಂಯೋಜಿಸುವ ವಿಭಿನ್ನ ಕಾರ್ಯದ ಭಾಗವಾಗಿ ಕೇಂದ್ರ ಸರ್ಕಾರವು ಪ್ಲಾಗಿಂಗ್ ಅನ್ನು ಆರಂಭಿಸಿದೆ.
ಬೆವ್ಲಿ ಅವರು ಭಾರತವನ್ನು ಕಸ ಮುಕ್ತ ರಾಷ್ಟ್ರವನ್ನಾಗಿ ಪರಿವರ್ತಿಸುವ ಮಹತ್ವದ ಕನಸಿನೊಂದಿಗೆ 2017ರಿಂದ ಫಿಟ್ ಇಂಡಿಯಾ ಪ್ಲಾಗ್ಗಿಂಗ್ ರನ್ ಅನ್ನು ಪ್ರಾರಂಭಿಸಿದ್ದರು. ಅವರು ಮತ್ತು ಅವರ ತಂಡ ಇದುವರೆಗೆ ಒಂದು ಸಾವಿರ ಕಿಲೋ ಮೀಟರ್ ವ್ಯಾಪ್ತಿಯ 50 ನಗರಗಳನ್ನು ಎರಡು ತಿಂಗಳಲ್ಲಿ ಸ್ವಚ್ಛಗೊಳಿಸಿದೆ. 2.7 ಟನ್ ತ್ಯಾಜ್ಯವನ್ನು ಅವರು ಹೊರತೆಗೆದಿದ್ದಾರೆ. ಅವರ ಈ ಸಾಧನೆಗಾಗಿ ಅವರನ್ನು ಭಾರತದ ಪ್ಲಾಗಿಂಗ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.