ನವದೆಹಲಿ: ಪ್ರಸ್ತುತ ವಾರ್ಷಿಕ 11,000 ಕೋಟಿ ರೂಪಾಯಿಯಷ್ಟು ಇರುವ ದೇಶೀಯ ರಕ್ಷಣಾ ರಫ್ತು, 2024ರ ವೇಳೆಗೆ 35,000 ಕೋಟಿ ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸೇನಾಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶುಕ್ರವಾರ ಹೇಳಿದ್ದಾರೆ.
ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ವಿದೇಶಿ ರಕ್ಷಣಾ ಲಗತ್ತುಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ರಾವತ್, ರಕ್ಷಣಾ ಉತ್ಪಾದನೆಯ ದೇಶೀಕರಣದ ನೀತಿಗೆ ಭಾರತ ಬದ್ಧವಾಗಿದೆ ಎಂದು ಹೇಳಿದರು. ಈ ಸಮಾವೇಶದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಕೂಡ ಭಾಗವಹಿಸಿದ್ದರು.
“ನಾವು ನಮ್ಮ ರಕ್ಷಣಾ ಪಡೆಗಳನ್ನು ಶಸ್ತ್ರಸಜ್ಜಿತಗೊಳಿಸಲು ಮಾತ್ರ ನಾವು ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುತ್ತಿಲ್ಲ, ನಾವು ಕ್ರಮೇಣ ರಫ್ತು ಆಧಾರಿತ ರಕ್ಷಣಾ ಉದ್ಯಮವಾಗುತ್ತ ದಾಪುಗಾಲಿಡಲು ಬಯಸುತ್ತಿದ್ದೇವೆ ಎಂಬ ಭರವಸೆಯನ್ನು ನಿಮಗೆ ನೀಡಲು ಬಯಸುತ್ತೇವೆ. ಪ್ರಸ್ತುತ, ವಾರ್ಷಿಕವಾಗಿ 11,000 ಕೋಟಿ ರೂ.ಗಳ ವ್ಯಾಪ್ತಿಯಲ್ಲಿರುವ ನಮ್ಮ ರಕ್ಷಣಾ ರಫ್ತು ಇನ್ನಷ್ಟು ಸಾಧಿಸಲು ಸಿದ್ಧವಾಗಿದೆ. 2024 ರ ಹೊತ್ತಿಗೆ ಅಂದಾಜು 35,000 ಕೋಟಿ ರೂಪಾಯಿಯವರೆಗೆ ನಮ್ಮ ರಕ್ಷಣಾ ರಫ್ತು ತಲುಪಲಿದೆ “ಎಂದು ರಾವತ್ ಹೇಳಿದ್ದಾರೆ.
ಸರ್ಕಾರಿ ರಕ್ಷಣಾ ಕೈಗಾರಿಕೆಗಳು ಮಾತ್ರವಲ್ಲದೇ ಹಲವಾರು ಖಾಸಗಿ ರಕ್ಷಣಾ ಸಂಸ್ಥೆಗಳು ಸಹ ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಸಮಾವೇಶದ ಸಂದರ್ಭದಲ್ಲಿ, ಸುಮಾರು 22 ಖಾಸಗಿ ರಕ್ಷಣಾ ಸಂಸ್ಥೆಗಳು ಒಗ್ಗೂಡಿ ದೇಶೀಯ ರಕ್ಷಣಾ ಸಲಕರಣೆ ರಫ್ತುದಾರರ ಸಂಘ (ಐಡಿಇಇಎ)ವನ್ನು ಪ್ರಾರಂಭಿಸಲಿವೆ.
“ಅನಿಶ್ಚಿತ ಮತ್ತು ಸಂಕೀರ್ಣ ಜಗತ್ತಿನಲ್ಲಿ ನಮ್ಮ ಭದ್ರತಾ ಹಾದಿಯಲ್ಲಿರುವ ಸವಾಲುಗಳನ್ನು ಎದುರಿಸಲು ನಾವು ತಯಾರಿಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ರಕ್ಷಣಾ ಪಡೆಗಳ ಅಗತ್ಯತೆಗಳನ್ನು ಪೂರೈಸಲು ನಾವು ನಮ್ಮ ರಕ್ಷಣಾ ಕೈಗಾರಿಕೆಗಳತ್ತ ಎದುರು ನೋಡುತ್ತೇವೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಶಕ್ತಿ ತುಂಬಲು ವಿವಿಧ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ನಾವು ದೇಶೀಕರಣದ ನೀತಿಗೆ ಆಳವಾಗಿ ಬದ್ಧರಾಗಿದ್ದೇವೆ “ಎಂದು ರಾವತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.