ನವದೆಹಲಿ : ದೆಹಲಿ ಮತ್ತು ಕಾತ್ರ ನಡುವೆ ಸಂಚರಿಸಲಿರುವ ಎರಡನೇ ಅತ್ಯಾಧುನಿಕ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು ನವದೆಹಲಿ ಜಂಕ್ಷನ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭ ರೈಲ್ವೆ ಸಚಿವ ಪಿಯುಷ್ ಗೋಯಲ್, ಕೇಂದ್ರ ಸಚಿವರಾದ ಹರ್ಷ ವರ್ಧನ್, ಜಿತೇಂದ್ರ ಸಿಂಗ್ ಹಾಗೂ ಭಾರತೀಯ ರೈಲ್ವೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನವರಾತ್ರಿ ಸಮಯದಲ್ಲಿ ಮಾತಾ ವೈಷ್ಣೋ ದೇವಿಯ ದೇಗುಲಕ್ಕೆ ಭೇಟಿ ನೀಡಲಿರುವ ಯಾತ್ರಾರ್ಥಿಗಳಿಗೆ ವಿಶೇಷ ಉಡುಗೊರೆಯಾಗಿ ಭಾರತೀಯ ರೈಲ್ವೆಯು ತನ್ನ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ನವದೆಹಲಿ ಮತ್ತು ಕಾತ್ರ ನಡುವೆ ಪ್ರಾರಂಭಿಸಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ದೆಹಲಿ ಮತ್ತು ಕಾತ್ರ ನಡುವಿನ ಪ್ರಸ್ತುತ ಪ್ರಯಾಣಕ್ಕೆ ತಗಲುವ ಸಮಯವನ್ನು 12 ಗಂಟೆಗಳಿಂದ ಕೇವಲ 8 ಕ್ಕೆ ಇಳಿಸಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, 2014 ರಲ್ಲಿ ಮೋದಿಯವರು ಪ್ರಧಾನಿಯಾದ ನಂತರ, ಎಲ್ಲಾ ಪ್ರಯಾಣಿಕರು ದೇಶದೆಲ್ಲೆಡೆ ಇರುವ ಯಾತ್ರಾ ಸ್ಥಳಗಳಿಗೆ ಸುಗಮವಾಗಿ ಮತ್ತು ಸುಲಭವಾಗಿ ತಲುಪಬೇಕು ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
ಇಂದು ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗಲಿದೆ, ಇದರಿಂದಾಗಿ ವೈಷ್ಣೋ ದೇವಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಆರಂಭ ಮಾಡಿದಂತಾಗಿದೆ.
ಫೆಬ್ರವರಿ 17 ರಂದು ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ದೆಹಲಿಯಿಂದ ವಾರಣಾಸಿಗೆ ಪ್ರಾರಂಭಿಸಲಾಯಿತು. ಭಾರತದಲ್ಲಿ ಕ್ರಮೇಣ ಹೆಚ್ಚಿನ ವೇಗದ ರೈಲುಗಳ ಸಂಖ್ಯೆಯನ್ನು ವೃದ್ಧಿಸುವ ಯೋಜನೆಗೆ ಕಲ್ಪನೆಯನ್ನು ರೈಲ್ವೆ ಇಲಾಖೆಗೆ ಪ್ರಧಾನಿ ಮೋದಿಯವರು ನೀಡಿದರು.
ಭಾರತದ್ದಲ್ಲಷ್ಟೇ ಅಲ್ಲ, ಇಡೀ ಪ್ರಪಂಚದಲ್ಲಿ ಜೀವನದ ದೃಷ್ಟಿಕೋನವನ್ನು ಬದಲಾಯಿಸುವಂತೆ ಮಾಡಿದ ಮಹಾನ್ ವ್ಯಕ್ತಿ ಗಾಂಧೀಜಿ. ಇಂದು ಅವರ ಚಿಂತನೆಯೊಂದನ್ನು ನಾವಿಂದು ಸಾಕಾರಗೊಳಿಸಿದ್ದೇವೆ. ಸ್ವದೇಶೀ ನಿರ್ಮಿತ ರೈಲು ಗಾಡಿಯೊಂದು ಇಂದು ದೆಹಲಿಯಿಂದ ಮಾತಾ ವೈಷ್ಣೋದೇವಿಯ ಸನ್ನಿಧಾನದವರೆಗೆ ಸಂಚರಿಸುತ್ತಿದೆ ಎಂದು ಗರ್ವದಿಂದ ಹೇಳುತ್ತಿದ್ದೇನೆ.
ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ನರೇಂದ್ರ ಮೋದಿ ಅವರು ಕಾಶ್ಮೀರವನ್ನು ಭಾರತದೊಂದಿಗೆ ಶಾಶ್ವತವಾಗಿ ಸಂಪರ್ಕಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದು ನಿಜ ಏಕೆಂದರೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಇದೊಂದು ಸಮಸ್ಯೆಯಾಗಿತ್ತು. ಆ ಸಮಸ್ಯೆಯನ್ನು ಪ್ರಧಾನಿ ಮೋದಿ ಜಿ ತೆಗೆದುಹಾಕಿದ್ದಾರೆ ಎಂದರು.
ವೈಷ್ಣೋ ದೇವಿ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಭಕ್ತಾದಿಗಳಿಗೆ ಈ ರೈಲಿನಿಂದ ಸಾಕಷ್ಟು ಪ್ರಯೋಜನವಾಗಲಿದೆ. ಎರಡನೆಯ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದ್ದು, ಮೊದಲನೆಯದಕ್ಕಿಂತ ಹೆಚ್ಚಿನ ಸುಧಾರಣೆಗಳೊಂದಿಗೆ ಕಾರ್ಯಾರಂಭ ಮಾಡಲಿದೆ. ಹೆಚ್ಚು ಆರಾಮದಾಯಕ ಆಸನಗಳು ಮತ್ತು ದೊಡ್ಡದಾದ ಪ್ಯಾಂಟ್ರಿಯನ್ನು ಇದು ಹೊಂದಿದೆ.
ಈ ರೈಲು ಅಂಬಾಲಾ, ಲುಧಿಯಾನ ಮತ್ತು ಜಮ್ಮುಗಳಲ್ಲಿ ಕೇವಲ ಮೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ದೆಹಲಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಪ್ರಯಾಣವನ್ನು ಪೂರ್ಣಗೊಳಿಸಲಿದೆ. ವಾಪಾಸ್ ಬರುವಾಗ ಮಧ್ಯಾಹ್ನ 3 ಗಂಟೆಗೆ ಕತ್ರಾದಿಂದ ಹೊರಟು 11 ಗಂಟೆಯ ಹೊತ್ತಿಗೆ ದೆಹಲಿಯನ್ನು ತಲುಪಲಿದೆ. ನಾಳೆಯಿಂದ ಅಧಿಕೃತವಾಗಿ ಚಲಿಸಲಿದೆ.
ಈ ರೈಲು ಕೇವಲ 8 ಗಂಟೆಗಳಲ್ಲಿ 655 ಕಿ.ಮೀ ತಲುಪಲಿದೆ. 16 ಬೋಗಿಗಳನ್ನು ಹೊಂದಿದ್ದು, ಅದರಲ್ಲಿ 1128 ಆಸನಗಳನ್ನು ನೀಡಲಾಗಿದೆ. ಇದರಲ್ಲಿ 14 ಬೋಗಿಗಳು ಜನರಲ್ ಚೇರ್ ಆಗಿದ್ದು, ಅದರಲ್ಲಿ 936 ಆಸನಗಳು ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.