‘ಸಂಸದೀಯ ಪ್ರಜಾಪ್ರಭುತ್ವದಿಂದ ನಾಯಕತ್ವವು ಅಧ್ಯಕ್ಷೀಯ ಮಾದರಿಯತ್ತ ಸಾಗುತ್ತಿದೆ’ – ಈ ವಿಶ್ಲೇಷಣೆಯನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರೇ ಪ್ರೇರಣೆಯಾಗಿದ್ದಾರೆ. 35 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷವು ಅಭೂತಪೂರ್ವವಾದ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ. 1984ರಲ್ಲಿ ರಾಜಕೀಯ ಪಯಣ ಆರಂಭಿಸಿದ್ದ ಪಕ್ಷ ಪಡೆದುಕೊಂಡಿದ್ದು 2 ಸ್ಥಾನಗಳನ್ನು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅಗಲುವಿಕೆಯ ಬಳಿಕ ನಡೆದ ಚುನಾವಣೆಯಾದ ಕಾರಣ ಅದು ಅಸಾಧಾರಣ ಚುನಾವಣೆಯಾಗಿತ್ತು. ಭಾವನಾತ್ಮಕ ಅಲೆಯಿಂದಾಗಿ ಕಾಂಗ್ರೆಸ್ 404 ಸ್ಥಾನಗಳನ್ನು ಪಡೆದುಕೊಂಡಿತ್ತು. ಶೇ.49.1ರಷ್ಟು ಮತ ಹಂಚಿಕೆ ಗಳಿಸಿತ್ತು. ಒಟ್ಟಾರೆಯಾಗಿ, 2014ರವರೆಗೆ ಕಾಂಗ್ರೆಸ್ ಭಾರತದ ಅತೀದೊಡ್ಡ ಪಕ್ಷವಾಗಿತ್ತು. ದೇಶದ ಎಲ್ಲಾ ಕಡೆಯು ಅದರ ಅಸ್ತಿತ್ವ ಇತ್ತು. 1996, 1998 ಮತ್ತು 1999ರಲ್ಲೂ ಬಿಜೆಪಿಗೆ ಕಾಂಗ್ರೆಸ್ಗಿಂತ ಹೆಚ್ಚಿನ ಸ್ಥಾನಗಳು ದೊರೆತರೂ, ಕಾಂಗ್ರೆಸ್ ಎಲ್ಲಾ ಕಡೆಯೂ ಪ್ರಸ್ತುತ ಇದ್ದ ಕಾರಣ ಅದರ ಮತ ಹಂಚಿಕೆ ಹೆಚ್ಚಾಗಿಯೇ ಇತ್ತು. 2014ರಲ್ಲಿ ಕಾಂಗ್ರೆಸ್ ತೀವ್ರ ಮಟ್ಟಕ್ಕೆ ಕುಸಿದು ಹೋಯಿತು. ಅದರ ಸ್ಥಾನಗಳು ಮತ್ತು ಮತ ಹಂಚಿಕೆ ಎರಡೂ ಕುಸಿಯಿತು. 2019ರಲ್ಲಿ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅದರ ಮತ ಹಂಚಿಕೆ ಕುಸಿತ ಕಂಡಿದೆ. 12ಕ್ಕೂ ಅಧಿಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದು ಒಂದೇ ಒಂದು ಸ್ಥಾನವನ್ನು ಪಡೆದುಕೊಂಡಿಲ್ಲ.
ಈ ಬಾರಿಯ ಚುನಾವಣೆ ಎಲ್ಲಾ ವಿಷಯದಲ್ಲೂ ಅತ್ಯಂತ ವಿಭಿನ್ನವಾಗಿದೆ. 35 ವರ್ಷಗಳ ಬಳಿಕ ಪಕ್ಷವೊಂದು ಎರಡನೆಯ ಅವಧಿಗೆ ಸಂಪೂರ್ಣ ಬಹುಮತ ಪಡೆದುಕೊಂಡು ಅಧಿಕಾರದ ಗದ್ದುಗೆಯನ್ನು ಏರುತ್ತಿದೆ. ಇಂತಹ ಸನ್ನಿವೇಶ ಕಂಡು ಬಂದಿದ್ದು ಕೊನೆಯ ಬಾರಿಗೆ 1971ರಲ್ಲಿ. ಭಾರತದ ಸಂಸದೀಯ ಚುನಾವಣೆಯ ಇತಿಹಾಸದಲ್ಲೇ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದೆ. ಶೇ. 67 ರಷ್ಟು ಜನರು ಮತದಾನವನ್ನು ಮಾಡಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಗುಜರಾತಿನಂತಹ ರಾಜ್ಯಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದೆ. ಅದರಲ್ಲೂ ಮಹಿಳಾ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದಾರೆ, ಮಹಿಳಾ ಮತ್ತು ಪುರುಷ ಮತದಾರರ ನಡುವೆ 2009ರಲ್ಲಿ ಇದ್ದ ಶೇ. 9 ರಷ್ಟು ಅಂತರ 2019ರಲ್ಲಿ ಶೇ.0.4ಕ್ಕೆ ಇಳಿಕೆಯಾಗಿದೆ. ಬಿಹಾರದಲ್ಲಿ ಪುರುಷರಿಗಿಂತ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ. ಅಲ್ಲದೇ, ಇದೇ ಮೊದಲ ಬಾರಿಗೆ ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿದ ಚುನಾವಣೆ ಇದಾಗಿದೆ. ಈ ಚುನಾವಣೆಯಲ್ಲಿ, ವಂಶಾಡಳಿತವನ್ನು ಜನರು ನಿರ್ದಯವಾಗಿ ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ, ಜ್ಯೋತಿರಾದಿತ್ಯ ಸಿಂಧ್ಯ, ಕೆ. ಕವಿತ ಮುಂತಾದವರ ಸೋಲು ಜನರಿಗೆ ಕೆಲಸ ಮಾಡುವವರು ಮಾತ್ರ ಬೇಕಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಚುನಾವಣೆಯ ದೊಡ್ಡ ಸಂಗತಿಯೆಂದರೆ, ಯುಪಿಯಲ್ಲಿ ಸಮಾಜವಾದಿ-ಬಹುಜನ ಸಮಾಜವಾದಿ- ಆರ್ಎಲ್ಡಿ ಮೈತ್ರಿಗಾದ ಸೋಲು. ಕೇವಲ ಜಾತಿ ಸಮೀಕರಣದೊಂದಿಗೆ ರಚನೆಗೊಂಡ ಈ ಮೈತ್ರಿಯನ್ನು ಜನ ತಿರಸ್ಕರಿಸಿದ್ದಾರೆ.
ಬಿಜೆಪಿಯ ಉದಯದೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಸವಾಲುಗಳು ಎದುರಾದವು. ಬಿಜೆಪಿ ಬೆಳವಣಿಗೆ ಕಾಂಗ್ರೆಸ್ ವಿನಾಶಕ್ಕೆ ಮುನ್ನುಡಿ ಬರೆಯಿತು. 2004 ಮತ್ತು 2009ರ ಚುನಾವಣೆಯನ್ನು ಹೊರತುಪಡಿಸಿ ಮತ್ತೆ ಎಲ್ಲಾ ಸಂದರ್ಭದಲ್ಲೂ ಬಿಜೆಪಿ ಬೆಳವಣಿಗೆಯನ್ನೇ ಕಾಣುತ್ತಾ ಬರುತ್ತಿದೆ. 2009ರಲ್ಲಿ ಕಾಂಗ್ರೆಸ್ ಶೇ. 10 ರಷ್ಟು ಪರ್ಸಟೇಂಜ್ ಪಾಯಿಂಟ್ ಗಳಿಸಿದೆ, ಇದರಿಂದಾಗಿ ಬಿಜೆಪಿಯಿಂದ 99 ಸ್ಥಾನಗಳನ್ನು ಅದು ಹೆಚ್ಚಿಗೆ ಗಳಿಸಿತು. 2004ರಲ್ಲಿ ಅತ್ಯಂತ ನಿಕಟವಾದ ಸ್ಪರ್ಧೆ ಇತ್ತು. ಇಲ್ಲಿ ಕಾಂಗ್ರೆಸ್ 4 ಪರ್ಸಟೇಂಜ್ ಪಾಯಿಂಟ್ ಗಳಿಸಿತ್ತು, ಆದರೆ ಬಿಜೆಪಿಗಿಂತ ಕೇವಲ 7 ಸ್ಥಾನವಷ್ಟೇ ಹೆಚ್ಚಿಗೆ ಗಳಿಸಿತ್ತು. 145 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಮೈತ್ರಿಗಳೊಂದಿಗೆ ಸರ್ಕಾರ ರಚನೆ ಮಾಡಲು ಶಕ್ತವಾಯಿತು. ಯುಪಿಎ-1 ಪೂರ್ಣ ಅವಧಿಯನ್ನು ಪೂರ್ಣಗೊಳಿಸಿತು, ಇದರೊಂದಿಗೆ ಕಾಂಗ್ರೆಸ್ ಮೈತ್ರಿ ರಾಜಕೀಯದ ಕಲೆಯನ್ನೂ ಕಲಿತುಕೊಂಡಿತು. ಬಿಜೆಪಿಯು ಭಾರತೀಯ ರಾಜಕಾರಣದಲ್ಲಿ ಸ್ಪರ್ಧಾತ್ಮಕ ಪರಿಸರವನ್ನು ನಿರ್ಮಾಣ ಮಾಡಲು ಯಶಸ್ವಿಯಾಯಿತು.
ಎಐಟಿಎಂಸಿ, ಎಸ್ಪಿ, ದ್ರಾವಿಡಿಯನ್ ಪಕ್ಷಗಳನ್ನು ಹೊಂದಿರುವ ಭಾರತ ಬಹುಪಕ್ಷೀಯ ಪ್ರಜಾಪ್ರಭುತ್ವವಾಗಿದೆ. 1996 (ಶೇ. 49.1), 2004ರಲ್ಲಿ (48.7) 2009ರಲ್ಲಿ (ಶೇ.47.4) ರನ್ನು ಹೊರತುಪಡಿಸಿ ಉಳಿದೆಲ್ಲಾ ಸಂದರ್ಭದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಒಟ್ಟು ಮತ ಹಂಚಿಕೆ ಸ್ಥಿರವಾಗಿ ಶೇ. 50 ಕ್ಕಿಂತಲೂ ಹೆಚ್ಚಿದೆ. ಹಲವು ವರ್ಷಗಳಿಂದ ಒಟ್ಟು ಸ್ಥಾನ ಹಂಚಿಕೆ ಶೇ. 50 ಕ್ಕಿಂತಲೂ ಹೆಚ್ಚು, ಅಂಕಿ-ಅಂಶಗಳು ಭಾರತೀಯ ರಾಜಕೀಯದಲ್ಲಿ ಎರಡೂ ಪಕ್ಷಗಳ ಮಹತ್ವವನ್ನು ಹೇಳುತ್ತವೆ, ಪ್ರತಿ ಮತ ಹಂಚಿಕೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಸರಾಸರಿ ಸ್ಥಾನ ವರ್ಷಗಳಿಂದ ಕ್ರಮವಾಗಿ 5.2 ಮತ್ತು 6.6. ಇದು ಬಿಜೆಪಿ ಕೇಂದ್ರಿತ ಮತ ಹಂಚಿಕೆಯನ್ನು ವಿವರಿಸುತ್ತದೆ. 2014 ಮತ್ತು 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಹಂಚಿಕೆ ಶೇ.20ಕ್ಕೆ ಇಳಿದಿದೆ. ಬಿಜೆಪಿ ಶೇ.30ರ ಗಡಿ ದಾಟಿದೆ. ಕೆಳಗಿನ ರೇಖಾಚಿತ್ರ 1984 ರಿಂದ 2019ರವರೆಗೆ ಮತ ಹಂಚಿಕೆ ಮತ್ತು ಬಿಜೆಪಿಗೆ, ಕಾಂಗ್ರೆಸ್ ಪಕ್ಷಕ್ಕೆ ಬದಲಾದ ಮತ ಹಂಚಿಕೆಯನ್ನು ತೋರಿಸುತ್ತದೆ. ಎಡ ಅಕ್ಷಗಳು ಪಕ್ಷಗಳಿಗೆ ಮತ ಹಂಚಿಕೆಯನ್ನು ಸೂಚಿಸುತ್ತದೆ, ಆದರೆ ಬಲ ಅಕ್ಷವು ಮತಗಳ ಪರಿವರ್ತನೆ ತೋರಿಸುತ್ತದೆ. ಬಿಜೆಪಿಯ ಮತ ಹಂಚಿಕೆಯು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತದೆ ಮತ್ತು ಕಾಂಗ್ರೆಸ್ ಕುಸಿತ ಕಾಣುತ್ತಿದೆ. 1984 ರಲ್ಲಿ ಬಿಜೆಪಿ ಪ್ರಾರಂಭ ವಿನಮ್ರದಿಂದ ಕೂಡಿದೆ ಮತ್ತು ಅದೇ ಚುನಾವಣೆಯಲ್ಲಿ, ಕಾಂಗ್ರೆಸ್ ತನ್ನ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದೆ. ಉದ್ಭವಿಸುವ ಪ್ರಶ್ನೆಯೆಂದರೆ, 2019 ಬಿಜೆಪಿಗೆ ಅತ್ಯುತ್ತಮವೋ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟದೋ? ಬಿಜೆಪಿ ದಿಗ್ವಿಜಯ ಮುಂದುವರೆಯುತ್ತದೆಯೇ? ಕಾಂಗ್ರೆಸ್ ಇಲ್ಲಿಂದ ಹಿಂತಿರುಗಬಹುದೆ?
ಕಾಂಗ್ರೆಸ್ ತಕ್ಷಣ ಪುನಶ್ಚೇತನಗೊಳ್ಳಬೇಕಾದರೆ, ಅದು ತೀವ್ರವಾಗಿ ಬದಲಾಗಬೇಕಿದೆ. ತುರ್ತಾಗಿ ತಿದ್ದುಪಡಿ ಅಗತ್ಯವಿರುವ ಮೂರು ಪ್ರಮುಖ ಅಂಶಗಳಿವೆ. ಮೊದಲು, ರಾಹುಲ್ ಗಾಂಧಿಯವರು ತಮ್ಮ ಸಂವಹನವನ್ನು ಸುಧಾರಿಸಬೇಕು, ಅವರು ಸಂದೇಶದಲ್ಲಿ ನಿರ್ದಿಷ್ಟವಾಗಿರಲು ಪ್ರಯತ್ನಿಸಬೇಕು ಮತ್ತು ತಮ್ಮ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಬೇಕು, ವಿರೋಧಿಗಳ ವಿರುದ್ಧ ಕಟು ಆರೋಪಗಳನ್ನು ಮಾಡುವಲ್ಲಿ ಅವರು ಸೋತು ಹೋಗಿದ್ದಾರೆ. ಎರಡನೆಯದಾಗಿ, ಕಾಂಗ್ರೆಸ್ ತನ್ನ ಪಕ್ಷದ ರಚನೆಯನ್ನು ಬೂತ್ ಮಟ್ಟದಿಂದಲೇ ಮರು ನಿರ್ಮಿಸುವ ಅಗತ್ಯವಿದೆ. ಮೂರನೆಯದು, ಪರಿಶ್ರಮ- ಇದಕ್ಕೆ ಪರ್ಯಾಯವಾದುದು ಬೇರೊಂದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.