News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ನ 8 ಶಾಸಕರು ಇಂದು ಬಿಜೆಪಿಗೆ ಸೇರ್ಪಡೆ

ಲಕ್ನೋ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಗುರುವಾರ ಲಕ್ನೋದಲ್ಲಿ 3 ಎಸ್‌ಪಿ, 2 ಬಿಎಸ್‌ಪಿ, 3 ಕಾಂಗ್ರೆಸ್‌ನ ಒಟ್ಟು 8 ಜನ ಶಾಸಕರು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು....

Read More

ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸಿದವರಿಗೆ ಬಹುಮಾನ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಬುಧವಾರ ವ್ಯಾನ್ ಒಂದರ ಅಡಿಗೆ ಬಿದ್ದು ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲೇ ಅಸುನೀಗಿದ್ದಾರೆ. ಆ ವ್ಯಕ್ತಿ ವಿಲವಿಲ ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ. ಈ ಭೀಕರ ಘಟನೆ ಜನರ ಅಮಾನವೀಯತೆಯ ದರ್ಶನವನ್ನು...

Read More

ಜಗತ್ತಿನ ಯಾವ ಶಕ್ತಿಗೂ ಕಾಶ್ಮೀರವನ್ನು ಭಾರತದಿಂದ ಕಸಿಯಲು ಸಾಧ್ಯವಿಲ್ಲ

ನವದೆಹಲಿ : ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಸಂಸತ್ ಬುಧವಾರ ಕಾಶ್ಮೀರಿಗರಲ್ಲಿ ಮನವಿ ಮಾಡಿದೆ. ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳು ಸೇರಿದಂತೆ ಇತರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ಹೇಳಿಕೊಂಡಿದೆ. ಇನ್ನೊಂದೆಡೆ ಕಾಶ್ಮೀರದಲ್ಲಿನ ಅಶಾಂತಿಗೆ ಬಗ್ಗೆ ಮಾತನಾಡಿರುವ ಗೃಹಸಚಿವ...

Read More

ಸಿಯಾಚಿನ್­ಗೆ ತೆರಳಿ ಯೋಧರಿಗೆ ರಾಖಿ ಕಟ್ಟಿ ಸ್ವಾತಂತ್ರ್ಯೋತ್ಸವ ಆಚರಿಸಲಿರುವ ಸ್ಮೃತಿ

ನವದೆಹಲಿ: 70 ನೇ ಸ್ವಾತಂತ್ರ್ಯೊತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್­ಗೆ ತೆರಳಿ ಅಲ್ಲಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದಾರೆ.  ದೇಶದ ಎಲ್ಲಾ ಜನರ ಪರವಾಗಿ ಯೋಧರಿಗೆ ಕೃತಜ್ಞತೆ ಸಲ್ಲಿಸುವ...

Read More

ಮೋದಿ, ಪುಟಿನ್, ಜಯಾರಿಂದ ನ್ಯೂಕ್ಲಿಯರ್ ಘಟಕ ಲೋಕಾರ್ಪಣೆ

ಚೆನ್ನೈ : ತಮಿಳುನಾಡಿನಲ್ಲಿ ಸ್ಥಾಪಿತಗೊಂಡಿರುವ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನ ಘಟಕವನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸಿಎಂ ಜಯಲಲಿತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಕೂಡಂಕುಲಂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌ನಲ್ಲಿ...

Read More

ಸ್ವಾತಂತ್ರ್ಯೋತ್ಸವ ವಾರದಲ್ಲಿ ರಾಷ್ಟ್ರೀಯ ಸ್ಮಾರಕಗಳಲ್ಲಿ ಸೆಲ್ಫಿಗೆ ನಿರ್ಬಂಧ

ನವದೆಹಲಿ: ಸ್ವಾತಂತ್ರ್ಯೋತ್ಸವ ವಾರದಲ್ಲಿ ರಾಷ್ಟ್ರೀಯ ಸ್ಮಾರಕಗಳಲ್ಲಿ ಸೆಲ್ಫಿಗಳನ್ನು ಕ್ಲಿಕ್ಕಿಸುವುದಕ್ಕೆ ಪ್ರವಾಸೋದ್ಯಮ ಸಚಿವಾಲಯ ನಿರ್ಬಂಧ ಹೇರಿದೆ. ಆಗಸ್ಟ್ 12-18ರ ವರೆಗೆ ದೇಶದ ಎಲ್ಲ ಪ್ರಮುಖ ಸ್ಮಾರಕಗಳ ಮುಂದೆ ಪ್ರವಾಸಿಗರು ಸೆಲ್ಫೀ ತೆಗೆಯದಂತೆ ನಿರ್ಬಂಧ ಹೇರಲು ಪ್ರವಾಸೋದ್ಯಮ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ. ಸ್ವಾತಂತ್ರ್ಯೋತ್ಸವ...

Read More

ಮಹಿಳೆಯರ ಸುರಕ್ಷತೆಗೆ ‘I Feel Safe’ ಮೊಬೈಲ್ ಆ್ಯಪ್ ಬಿಡುಗಡೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗೆ ‘I Feel Safe’ ಮೊಬೈಲ್ ಅಪ್ಲಿಕೇಷನ್‌ನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಲಾಗಿದೆ. ಐ ಫೀಲ್ ಸೇಫ್ ಮೊಬೈಲ್ ಆ್ಯಪ್‌ನ್ನು ನಿರ್ಭಯಾ ಜ್ಯೋತಿ ಟ್ರಸ್ಟ್ ಅಡಿಯಲ್ಲಿ ಮೊಬೈಲ್ ಸ್ಟ್ಯಾಂಡರ್ಡ್ಸ್ ಅಲಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಸ್ಮಾಟ್‌ಫೋನ್...

Read More

ಗೋವಾ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಮುಂದೆ ಯೋಗ

ಪಣಜಿ : ಇನ್ನು ಮುಂದೆ ಗೋವಾ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ಯೋಗವನ್ನು ಕಲಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಲಕ್ಷ್ಮೀಕಾಂತ್ ಪರ್‍ಸೇಕರ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ‘ಪ್ರಾಥಮಿಕ ಶಾಲೆಗಳಲ್ಲಿ ಯೋಗವನ್ನು ಕಲಿಸಲು ನಿರ್ಧರಿಸಲಾಗಿದ್ದು, ಇದಕ್ಕೆ...

Read More

130 ಕೋಟಿ ರೂ. ಆಸ್ತಿ ಮುಚ್ಚಿಟ್ಟ ಎಎಪಿ ಶಾಸಕ ಕರ್ತಾರ್ ಸಿಂಗ್

ನವದೆಹಲಿ : ಎಎಪಿ ಪಕ್ಷದ ಶಾಸಕ ಕರ್ತಾರ್ ಸಿಂಗ್ ಅವರು ತಮ್ಮ ಬಳಿಯಿರುವ 130 ಕೋಟಿ ರೂ. ಮೌಲ್ಯದ ಆಸ್ತಿಯ ಲೆಕ್ಕ ನೀಡದೆ ಬಚ್ಚಿಟ್ಟಿದ್ದಾರೆ ಎಂದು ತೆರಿಗೆ ಅಧಿಕಾರಿಗಳು ಆರೋಪಿಸಿದ್ದಾರೆ. 54 ವರ್ಷದ ದಕ್ಷಿಣ ದೆಹಲಿಯ ಮೆಹರೌಲಿ ಕ್ಷೇತ್ರದ ಶಾಸಕರಾಗಿರುವ ಕರ್ತಾರ್ ಮೂಲತಃ...

Read More

ಗೋವುಗಳ ಹೆಸರಲ್ಲಿ ಹಿಂಸೆ ಮಾಡುವವರ ವಿರುದ್ಧ ಕಟು ಧೋರಣೆ ತಳೆದ ಕೇಂದ್ರ

ನವದೆಹಲಿ : ಗೋವುಗಳನ್ನು ರಕ್ಷಣೆ ಮಾಡುತ್ತೇವೆ ಎನ್ನುತ್ತಾ ಹಲ್ಲೆಗಳನ್ನು, ಹಿಂಸಾಚಾರಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ನಕಲಿ ಗೋರಕ್ಷಕರ ವಿರುದ್ಧ ಕ್ರಮ...

Read More

Recent News

Back To Top