ನವದೆಹಲಿ: ಹತ್ಯೆಯಾಗಿರುವ ಹರ್ದೀಪ್ ಸಿಂಗ್ ನಿಜ್ಜರ್ ‘2007ರಲ್ಲಿ ಕೆನಡಾದ ಪೌರತ್ವವನ್ನು ಪಡೆದ ವಿದೇಶಿ ಭಯೋತ್ಪಾದಕ’ ಎಂದು ಪೀಪಲ್ಸ್ ಪಾರ್ಟಿ ಆಫ್ ಕೆನಡಾದ ನಾಯಕ ಮ್ಯಾಕ್ಸಿಮ್ ಬರ್ನಿಯರ್ ಗುರುವಾರ ಹೇಳಿದ್ದಾರೆ. ಈತನ ಹತ್ಯೆ ಪ್ರಕರಣ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಡಲು ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬರ್ನಿಯರ್, “ಹತ್ಯೆ ಪ್ರಕರಣದಲ್ಲಿ ಭಾರತದ ರಾಜತಾಂತ್ರಿಕರ ಕೈವಾಡವಿರುವ ಆರೋಪ ನಿಜವೇ ಆದರೆ ಅದು ಗಂಭೀರ ವಿಷಯ ಮತ್ತು ಅದನ್ನು ಸಮರ್ಥವಾಗಿ ನಿರ್ವಹಿಸಬೇಕು. ಆದರೆ ಆರೋಪಕ್ಕೆ ಟ್ರಡೋ ಯಾವುದೇ ಪುರಾವೆ ನೀಡಿಲ್ಲ. ಇತರ ವಿವಾದಗಳಿಂದ ಗಮನ ಬೇರೆಡೆ ಸೇಲೆಯಲು ಅವರು ಇದನ್ನು ಬಳಸುತ್ತಿದ್ದಾರೆ. ಆದರೆ ಕೆಲವೊಂದು ಮಿಥ್ಯೆಗಳನ್ನು ನಾವು ಬಹಿರಂಗಪಡಿಸಲೇ ಬೇಕು. ಈ ವಿವಾದದ ಕೇಂದ್ರ ವ್ಯಕ್ತಿ, ಕಳೆದ ವರ್ಷ ಕೊಲೆಯಾದ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದವನು ಎಂಬುದು ಸುಳ್ಳು. ಅವನು ವಾಸ್ತವವಾಗಿ ಸುಳ್ಳು ದಾಖಲೆಗಳನ್ನು ಬಳಸಿ ಪೌರತ್ವ ಪಡೆದ ವಿದೇಶಿ ಭಯೋತ್ಪಾದಕನಾಗಿದ್ದನು. 1997 ರಿಂದ ಕೆನಡಾದಲ್ಲಿ ಹಲವಾರು ಬಾರಿ ಆಶ್ರಯ ಪಡೆದುಕೊಂಡಿದ್ದಾನೆ. ಅವನ ಹೇಳಿಕೆಗಳನ್ನು ತಿರಸ್ಕರಿಸಲಾಯಿತಾದರೂ ಅವನಿಗೆ ಈ ದೇಶದಲ್ಲಿ ಉಳಿಯಲು ಅವಕಾಶ ನೀಡಲಾಯಿತು ಮತ್ತು 2007 ರಲ್ಲಿ ಕೆನಡಾದ ಪೌರತ್ವವನ್ನು ಕೂಡ ನೀಡಲಾಯಿತು” ಎಂದಿದ್ದಾರೆ.
ಆತನಿಗೆ ಪೌರತ್ವ ನೀಡಿರುವುದು ಆಡಳಿತಾತ್ಮಕ ದೋಷ ಎಂದು ಕರೆದಿರುವ ಬರ್ನಿಯರ್, ನಕಲಿ ಆಶ್ರಯ ಪಡೆದ ಇತರ ಸಾವಿರಾರು ಮಂದಿಯೊಂದಿಗೆ ನಿಜ್ಜರ್ನನ್ನು ಕೂಡ ಗಡಿಪಾರು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.
“ನಿಜ್ಜರ್ ಕೆನಡಿಯನ್ ಆಗಿರಲಿಲ್ಲ. ಈ ಆಡಳಿತಾತ್ಮಕ ದೋಷವನ್ನು ಸರಿಪಡಿಸಲು ನಾವು ಬಹುಶಃ ಮರಣೋತ್ತರವಾಗಿ ಅವನ ಪೌರತ್ವವನ್ನು ಕಸಿದುಕೊಳ್ಳಬೇಕು” ಎಂದಿದ್ದಾರೆ.
If true, allegations made by the RCMP and the Liberal government that Indian diplomats participated in criminal activities on our territory are very serious and should be dealt with. So far however, we haven’t been given any proof. And Trudeau is clearly using this crisis to… pic.twitter.com/wM2dR8FMHl
— Maxime Bernier (@MaximeBernier) October 17, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.