ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗೆ ‘I Feel Safe’ ಮೊಬೈಲ್ ಅಪ್ಲಿಕೇಷನ್ನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಲಾಗಿದೆ.
ಐ ಫೀಲ್ ಸೇಫ್ ಮೊಬೈಲ್ ಆ್ಯಪ್ನ್ನು ನಿರ್ಭಯಾ ಜ್ಯೋತಿ ಟ್ರಸ್ಟ್ ಅಡಿಯಲ್ಲಿ ಮೊಬೈಲ್ ಸ್ಟ್ಯಾಂಡರ್ಡ್ಸ್ ಅಲಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಸ್ಮಾಟ್ಫೋನ್ ಬಳಕೆದಾರರಿಗಾಗಿ ಅಭಿವೃದ್ಧಿಪಡಿಸಲಾಗಿದೆ.
ಶತಮಾನಗಳಿಂದ ಭಾರತದಲ್ಲಿ ಮಹಿಳೆಯರು ಸಾಮಾಜಿಕ ಸಮಸ್ಯೆ ಮತ್ತು ನಿಂದನೆ ಅನುಭವಿಸುತ್ತಿದ್ದಾರೆ. ನಮ್ಮ ದೇಶದ ಪ್ರತಿ ಮಹಿಳೆ ಗೌರವ ಪಡೆಯಲು ಸಾಮಾಜಿಕ ಮನೋಭಾವ ಬದಲಿಸುವುದು ಮುಖ್ಯ ಎಂದು ಕೇಂದ್ರ ಸಚಿವ ಹರೀಶ್ ವರ್ಧನ್ ಹೇಳಿದ್ದಾರೆ.
ಈ ಅಪ್ಲಿಕೇಷನ್ ಒಂದು ಪ್ಯಾನಿಕ್ ಬಟನ್ ಹೊಂದಿದ್ದು, ‘ಸೇಫ್ಟಿ ಕಾ ಪವರ್ ಬಟನ್’ ಐದು ಬಾರಿ ಒತ್ತಿದಲ್ಲಿ ಎಚ್ಚರಕೆ ಗಂಟೆ ಬಾರಿಸುತ್ತದೆ. ಮೊಬೈಲ್ ಫೋನ್ನ ಸ್ಕ್ರೀನ್ ಲಾಕ್ ಇದ್ದಲ್ಲಿ, ಸಿಮ್ ಕಾರ್ಡ್ ಇಲ್ಲದಿದ್ದಲ್ಲಿ, ವೈ-ಫೈ ನೆಟ್ವರ್ಕ್ ಅಥವಾ ಡಾಟಾ ಪ್ಲಾನ್ ಇಲ್ಲದಿದ್ದ ಸಂದರ್ಭದಲ್ಲೂ ಈ ಬಟನ್ ಕಾರ್ಯ ನಿರ್ವಹಿಸುತ್ತದೆ.
ದೇಶದಾದ್ಯಂತ ಎಲ್ಲ ಮೊಬೈಲ್ ನೆಟ್ವರ್ಕ್ಗಳಲ್ಲೂ ಇದು ಕಾರ್ಯ ನಿರ್ವಹಿಸುತ್ತದೆ ಹಾಗೂ ನೈಜ ಸಮಯದಲ್ಲಿ (real- time ) ಲೊಕೇಷನ್ ಮಾಹಿತಿಯನ್ನು ನೀಡುತ್ತದೆ.
ನಿರ್ಭಯಾ ಜ್ಯೋತಿ ಟ್ರಸ್ಟ್ಗೆ ಸರ್ಕಾರ ಹಾಗೂ ದೇಶದ ಜನತೆ ನೀಡುತ್ತಿರುವ ಬೆಂಬಲ ಮತ್ತು ಪ್ರೇರಣೆಯನ್ನು ನಾನು ಪ್ರಶಂಸಿಸುತ್ತೇನೆ. ಪ್ರತಿಯೊಬ್ಬ ಯುವತಿ ಲೈಂಗಿಕ ಹಿಂಸೆ ಅನುಭವಿಸದೇ ಸುರಕ್ಷಿತವಾದ, ಆರೋಗ್ಯಕರ ಜೀವನ ನಡೆಸುವಂತಾಗಬೇಕು ಎಂದು ಬಯಸುತ್ತೇನೆ ಎಂದು ನಿರ್ಭಯಾಳ ತಾಯಿ ಆಶಾ ದೇವಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.