ಚೆನ್ನೈ : ತಮಿಳುನಾಡಿನಲ್ಲಿ ಸ್ಥಾಪಿತಗೊಂಡಿರುವ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ನ ಘಟಕವನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸಿಎಂ ಜಯಲಲಿತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
ಕೂಡಂಕುಲಂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ನಲ್ಲಿ ಸಮಾರಂಭ ನಡೆಯಲಿದ್ದು, ಇದರ ಮುಖ್ಯಸ್ಥ ಎಸ್ಕೆ ಶರ್ಮಾ, ರಷ್ಯಾ ಕಂಪನಿಯ ಆಂಟೋಂಸ್ರಾಯ್ ಎಕ್ಸ್ಪೋರ್ಟ್ ತಜ್ಞ ಲಿಮರಿಂಕೋ ಮತ್ತು ಸೈಟ್ ನಿರ್ದೇಶಕ ಸುಂದರ್ ಇದರಲ್ಲಿ ಭಾಗವಹಿಸಲಿದ್ದಾರೆ.
2013 ರ ಜುಲೈನಲ್ಲೇ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ನ ಮೊದಲ ಯುನಿಟ್ ಆರಂಭವಾಗಿದ್ದು, ಇದುವರೆಗೆ 10,800 ಮಿಲಿಯನ್ ಯುನಿಟ್ ಪವರ್ ಉತ್ಪಾದನೆ ಮಾಡುತ್ತಿದೆ.
1000 ಮೆಗಾವ್ಯಾಟ್ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋವಿಯತ್ ನಾಯಕ ಮಿಕಾಹಿಲ್ ಗೋರ್ಬಚೆವ್ ಅವರ ನಡುವೆ ೧೯೮೮ ರ ನವೆಂಬರ್ನಲ್ಲಿ ಏರ್ಪಟ್ಟ ಒಪ್ಪಂದದಂತೆ ರಷ್ಯಾ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.