×
Home About Us Advertise With s Contact Us

ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸಿದವರಿಗೆ ಬಹುಮಾನ

Accident

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಬುಧವಾರ ವ್ಯಾನ್ ಒಂದರ ಅಡಿಗೆ ಬಿದ್ದು ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲೇ ಅಸುನೀಗಿದ್ದಾರೆ.

ಆ ವ್ಯಕ್ತಿ ವಿಲವಿಲ ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ. ಈ ಭೀಕರ ಘಟನೆ ಜನರ ಅಮಾನವೀಯತೆಯ ದರ್ಶನವನ್ನು ಮಾಡಿಸಿದೆ.

ಆ ವ್ಯಕ್ತಿ ರಸ್ತೆಯಲ್ಲೇ 1 ಗಂಟೆಗಳ ಕಾಲ ಒದ್ದಾಡಿದ್ದು, ಪೊಲೀಸರು ಆಗಮಿಸುವವರೆಗೂ ಯಾರೂ ಅವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿಲ್ಲ. ಅಪಘಾತಕ್ಕೀಡಾದ ಸ್ಥಳದಿಂದ ಆಸ್ಪತ್ರೆ ಕೇವಲ ೫೦೦ ಮೀ. ದೂರದಲ್ಲಿತ್ತು. ಆದರೂ ಆ ವ್ಯಕ್ತಿಯನ್ನು ಅಲ್ಲಿಗೆ ಸಾಗಿಸಬೇಕೆಂಬ ಮನಸ್ಸು ಯಾರಿಗೂ ಆಗದೇ ಇರುವುದು ದುರಾದೃಷ್ಟಕರ.

ಈ ಘಟನೆ ಇದೀಗ ದೆಹಲಿ ಸರ್ಕಾರದ ಕಣ್ಣು ತೆರೆಸಿದ್ದು, ಜನರ ಈ ಧೋರಣೆಯನ್ನು ದೂರ ಮಾಡುವುದಕ್ಕಾಗಿ ಯೋಜನೆಯೊಂದನ್ನು ತರಲು ಮುಂದಾಗಿದೆ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವವರಿಗೆ ಬಹುಮಾನವನ್ನು ನೀಡಲು ಅದು ನಿರ್ಧರಿಸಿದೆ.

ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಯೋಜನೆಯ ಕರಡನ್ನು ಶೀಘ್ರದಲ್ಲೇ ಸರಕಾರ ರಚಿಸಲಿದೆ. ಈ ತಿಂಗಳ ಕೊನೆಗೆ ಸಂಪುಟಕ್ಕೆ ಕರಡು ಸಲ್ಲಿಕೆಯಾಗಲಿದ್ದು ಬಳಿಕ ಅನುಮೋದನೆ ಲೆಫ್ಟಿನೆಂಟ್ ಗರ್ವನರ್ ಬಳಿ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.

 

Recent News

Back To Top
error: Content is protected !!