Date : Wednesday, 10-10-2018
ಶ್ರೀನಗರ: ಉಗ್ರರ ಬೆದರಿಕೆ, ಪೀಪಲ್ಸ್ ಡೆಮಾಕ್ರಾಟಿಕ್ಸ್ ಪಾರ್ಟಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ಬಹಿಷ್ಕಾರದ ನಡುವೆಯೂ ಜಮ್ಮು ಕಾಶ್ಮೀರದಲ್ಲಿ ಎರಡನೇ ಹಂತದ ನಗರಸಭೆ ಚುನಾವಣೆ ಸರಾಗವಾಗಿ ನಡೆಯುತ್ತಿದೆ. ಎರಡನೇ ಹಂತದ ಚುನಾವಣೆ ಒಟ್ಟು 13 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, 1095ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕುತ್ವಾದಲ್ಲಿ...
Date : Wednesday, 10-10-2018
ನವದೆಹಲಿ: ದೇಶದಲ್ಲಿ ನವರಾತ್ರಿ ಸಂಭ್ರಮ ಆರಂಭಗೊಂಡಿದ್ದು, ದುರ್ಗಾಮಾತೆಯ ನವ ಅವತಾರಗಳನ್ನು ಪೂಜಿಸಿ, ಭಜಿಸಿ ಪುನೀತರಾಗುವ ಸುಸಂದರ್ಭ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ನವರಾತ್ರಿಯ ಶುಭಾಶಯಗಳನ್ನು ಕೋರಿದ್ದು, ‘ಶಕ್ತಿಯ ಅಧಿದೇವತೆ ದುರ್ಗಾಮಾತೆ ಎಲ್ಲರ ಜೀವನದಲ್ಲೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು...
Date : Wednesday, 10-10-2018
ನವದೆಹಲಿ: ಗ್ರಾಹಕ ಉತ್ಪನ್ನಗಳ ವಲಯದಲ್ಲಿ ಪತಂಜಲಿ ಆಯುರ್ವೇದವನ್ನು ದಿಗ್ಗಜನನ್ನಾಗಿ ರೂಪಿಸಿರುವ ಬಾಬಾ ರಾಮ್‌ದೇವ್ ಬಾಬಾ ಅವರು, ಇದೀಗ ರೂ.100,000 ಕೋಟಿಯನ್ನು ಚಾರಿಟಿ ಕಾರ್ಯಕ್ಕಾಗಿ ವಿನಿಯೋಗಿಸಲು ಚಿಂತನೆ ನಡೆಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ, ಸಂಶೋಧನೆ, ಶಿಕ್ಷಣ, ಅಭಿವೃದ್ಧಿ, ಕೃಷಿ...
Date : Wednesday, 10-10-2018
ನವದೆಹಲಿ: ಪಾಸ್‌ಪೋರ್ಟ್ ಸೇವಾಕೇಂದ್ರಗಳ ಮಾದರಿಯಲ್ಲೇ ‘ಆಧಾರ್ ಸೇವಾ ಕೇಂದ್ರ’ಗಳನ್ನು ರಚನೆ ಮಾಡಲು ಯುಐಡಿಎಐ ನಿರ್ಧರಿಸಿದ್ದು, ಸುಮಾರು 300-400 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ 53 ನಗರಗಳಲ್ಲಿ ಇದು ಸ್ಥಾಪನೆಗೊಳ್ಳಲಿದೆ. ಈ ಆಧಾರ್ ಸೇವಾ ಕೇಂದ್ರಗಳು, ದಾಖಲಾತಿ, ನವೀಕರಣ, ಇತರ ಆಧಾರ್ ಸಂಬಂಧಿತ ಚಟುವಟಿಕೆಗಳನ್ನು...
Date : Wednesday, 10-10-2018
ನವದೆಹಲಿ: ಪ್ಯಾಕೇಜ್ ಆದ ಉತ್ಪನ್ನಗಳ ಮೇಲೆ ಹಿಂದಿ ಅಥವಾ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಲೇಬಲ್ ಅಂಟಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಫ್‌ಎಂಸಿಜಿ ಇಂಡಸ್ಟ್ರೀಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಗ್ರಾಹಕರ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಲೇಬಲಿಂಗ್ ಮಾಡಿ...
Date : Wednesday, 10-10-2018
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಬುಧವಾರ ರಾತ್ರಿ ಫ್ರಾನ್ಸ್‌ಗೆ ತೆರಳಲಿದ್ದಾರೆ. ಈ ವೇಳೆ ಅವರು, ಆ ದೇಶದಿಂದ ಖರೀದಿ ಮಾಡಲಾಗುತ್ತಿರುವ ರಫೆಲ್ ಯುದ್ಧವಿಮಾನದ ಪ್ರಗತಿಯ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ. ಅಧಿಕೃತ...
Date : Wednesday, 10-10-2018
ನವದೆಹಲಿ: ಭಾರತ ಫುಟ್ಬಾಲ್ ತಂಡ ಚೀನಾದ ನೆಲದಲ್ಲಿ ಮೊತ್ತ ಮೊದಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನು ಆಡಲು ಸಜ್ಜಾಗಿದ್ದು, ಇದಕ್ಕಾಗಿ ಭಾರತೀಯ ತಂಡವನ್ನು ಪ್ರಕಟಗೊಳಿಸಲಾಗಿದೆ. ಮಂಗಳವಾರ ಹೆಡ್ ಕೋಚ್ ಸ್ಟೀಫನ್ ಕಾನ್ಸ್‌ಸ್ಟೈನ್ ಅವರು 22 ಸದಸ್ಯರ ಭಾರತೀಯ ತಂಡವನ್ನು ಪ್ರಕಟಗೊಳಿಸಲಿದ್ದಾರೆ. ಅಕ್ಟೋಬರ್ 13ರಂದು ಚೀನಾದ ಸುಝೌನಲ್ಲಿ...
Date : Wednesday, 10-10-2018
ಪುಣೆ: ದೇಶದಲ್ಲೇ ಮೊದಲ ಬಾರಿಗೆ ಪುಣೆಯ ವೈದ್ಯರುಗಳು ತಲೆಬುರುಡೆ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ 4 ವರ್ಷದ ಬಾಲಕಿಯ ಜೀವವನ್ನು ರಕ್ಷಿಸಿದ್ದಾರೆ. ಈಕೆಯ ತಲೆಬುರುಡೆ ಅಪಘಾತದಿಂದಾಗಿ ಶೇ.60ರಷ್ಟು ಹಾನಿಗೊಳಗಾಗಿತ್ತು. ವರದಿಗಳ ಪ್ರಕಾರ, ವೈದ್ಯರುಗಳು ಬಾಲಕಿಯ ಐದನೇ ಮೂರರಷ್ಟು ಹಾನಿಗೊಳಗಾದ ತಲೆಬುರಡೆಯನ್ನು, ಯುಎಸ್ ಕಂಪನಿ...
Date : Wednesday, 10-10-2018
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕವಾಗಿ ರಸ್ತೆಗಿಳಿದಿದೆ. ಅಲ್ಲಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು, ಎಲೆಕ್ಟ್ರಿಕ್ ಬಸ್‌ನ ಪರೀಕ್ಷಾರ್ಥ ಓಡಾಟಕ್ಕೆ ಇಂದು ಚಾಲನೆ ನೀಡಿದರು. ಈಗಾಗಲೇ ಅಲ್ಲಿನ ಸರ್ಕಾರ ಮಾಲಿನ್ಯ ಮುಕ್ತ ವಾಹನಗಳ ಉತ್ತೇಜನಕ್ಕಾಗಿ ಎಲೆಕ್ಟ್ರಿಕ್ ವೆಹ್ಹಿಕಲ್...
Date : Wednesday, 10-10-2018
ತಿರುವನಂಪತಪುರಂ: ಸುಪ್ರೀಂಕೋರ್ಟ್‌ನ ಆದೇಶದಂತೆ ವಿಜ್ಞಾನಿ ನಂಬಿ ನಾರಾಯಣ್ ಅವರಿಗೆ ಕೇರಳ ಸರ್ಕಾರ ಪರಿಹಾರವಾಗಿ ರೂ.50 ಲಕ್ಷಗಳ ಚೆಕ್‌ನ್ನು ಹಸ್ತಾಂತರ ಮಾಡಿದೆ. ಸ್ವತಃ ಕೇರಳ ಸಿಎಂ ಪಿನರಾಯಿ ವಿಜಯನ್ ಅವರೇ ನಂಬಿ ರಾಯಣ್ ಅವರನ್ನು ಭೇಟಿಯಾಗಿ ಚೆಕ್ ಹಸ್ತಾಂತರ ಮಾಡಿದ್ದಾರೆ. ಭಾರತದ ಮಹತ್ವದ...