ನವದೆಹಲಿ: ತನ್ನ ನೆಲದೊಳಗೆ ನುಗ್ಗಿ ಭಾರತೀಯ ವಾಯುಸೇನೆ ಉಗ್ರ ಶೀಬಿರದ ಮೇಲೆ ಬಾಂಬ್ ಹಾಕಿದೆ ಎಂಬ ವಿಷಯವನ್ನು ಅರಗಿಸಿಕೊಳ್ಳಲು ಪಾಕಿಸ್ಥಾನಕ್ಕೆ ಸಾಧ್ಯವಾಗುತ್ತಿಲ್ಲ. ತಾನೇ ಪೋಷಿಸಿ ಸುರಕ್ಷಿತವಾಗಿಟ್ಟದ್ದ ಉಗ್ರರು ಭಾರತೀಯ ಯೋಧರ ಕೈಯಲ್ಲಿ ಹತರಾಗಿದ್ದಾರೆ ಎಂಬ ನೋವು, ಆಕ್ರೋಶ ಎರಡೂ ಅದಕ್ಕಿದೆ. ಆದರೆ ಜಗತ್ತಿನಲ್ಲೇ ನಾಲ್ಕನೇ ಬಲಿಷ್ಠ ವಾಯುಸೇನೆ ಎಂಬ ಖ್ಯಾತಿಗೆ ಒಳಗಾಗಿರುವ ಭಾರತೀಯ ವಾಯುಸೇನೆಯನ್ನು ಎದುರಿಸುವ ಶಕ್ತಿಯಾಗಲಿ, ಧೈರ್ಯವಾಗಲಿ ಆ ರಾಷ್ಟ್ರಕ್ಕಿಲ್ಲ. ಯಾಕೆಂದರೆ ಆ ದೇಶ ವಾಯುಸೇನೆ ಭಾರತಕ್ಕಿಂತ ತೀರ ಹಿಂದುಳಿದೆ. ವಿಶ್ವದಲ್ಲೇ ಅದು ಹೊಂದಿರುವುದು 17ನೇ ಸ್ಥಾನವನ್ನು. 17ನೇ ಸ್ಥಾನದಲ್ಲಿದ್ದವರು ನಾಲ್ಕನೇ ಸ್ಥಾನದಲ್ಲಿರುವವರನ್ನು ಎದುರಿಸುವುದು ಕಷ್ಟಸಾಧ್ಯ.
ಭಾರತೀಯ ವಾಯುಸೇನೆ ಮತ್ತು ಪಾಕಿಸ್ಥಾನ ವಾಯುಸೇನೆಯ ಹೋಲಿಕೆ ಇಲ್ಲಿದೆ
1.2018ರ ಗ್ಲೋಬರ್ ಫೈಯರ್ ಪವರ್ ಪಟ್ಟಿಯ ಮಿಲಿಟರಿ ಸಾಮರ್ಥ್ಯ ರ್ಯಾಂಕಿಂಗ್ನಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ದೊರೆತಿದೆ, ಪಾಕಿಸ್ಥಾನ ಪಡೆದುಕೊಂಡಿರುವುದು 17ನೇ ಸ್ಥಾನವನ್ನು.
2. 2018ರ ವರದಿಯ ಪ್ರಕಾರ, ಭಾರತದಲ್ಲಿ ಮಿಲಿಟರಿ ಸೇವೆಯಲ್ಲಿ 486,600,000 ಸಿಬ್ಬಂದಿಗಳಿದ್ದಾರೆ. ಇವರಲ್ಲಿ 1,362 ಸಕ್ರಿಯ ಸಿಬ್ಬಂದಿಗಳು ಮತ್ತು 2,844,750 ಮೀಸಲು ಸಿಬ್ಬಂದಿಗಳು.
ಪಾಕಿಸ್ಥಾನದ ವಿಷಯಕ್ಕೆ ಬಂದರೆ, ಅಲ್ಲಿ 75,325,000 ಸಿಬ್ಬಂದಿಗಳು ಮಿಲಿಟರಿ ಸೇವೆಯಲ್ಲಿದ್ದಾರೆ. ಇವರಲ್ಲಿ 637,000 ಸಕ್ರಿಯ ಮತ್ತು 282,000 ಮೀಸಲು ಸಿಬ್ಬಂದಿಗಳು.
3. ಭಾರತದ ಬಳಿ 2185 ವಿಮಾನಗಳ ಸಾಮರ್ಥ್ಯ ಇದೆ. ಇದರಲ್ಲಿ 590 ಯುದ್ಧ ವಿಮಾನಗಳು, 204 ದಾಳಿ ವಿಮಾನಗಳು, 708 ಟ್ರಾನ್ಸ್ಪೋರ್ಟ್ ಮತ್ತು 251 ಟ್ರೈನರ್ಗಳು. ಅಟ್ಯಾಕ್ ಏರ್ಕ್ರಾಫ್ಟ್ಗಳು ನೆಲ ಮತ್ತು ಮೇಲ್ಮೈ ಟಾರ್ಗೆಟ್ಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬಳಿ 720 ಹೆಲಿಕಾಫ್ಟರ್ಗಳಿವೆ, ಇದರಲ್ಲಿ 15 ಅಟ್ಯಾಕ್ ಹೆಲಿಕಾಫ್ಟರ್ಗಳಾಗಿವೆ. ಅಟ್ಯಾಕ್ ಹೆಲಿಕಾಫ್ಟರ್ಗಳು ನಿರ್ದಿಷ್ಟವಾಗಿ ನೆಲದ ಟಾರ್ಗೆಟ್ಗಳ ಮೇಲೆ ದಾಳಿ ನಡೆಸುವ ಸಲುವಾಗಿ ಅಭಿವೃದ್ಧಿಪಡಿಸಲಾದ ಮಲ್ಟಿ-ಎಂಜಿನ್, ರೋಟರಿ ವಿಂಗ್ ಸಿಸ್ಟಮ್ಗಳನ್ನು ಒಳಗೊಂಡಿದೆ.
ಪಾಕಿಸ್ಥಾನದ ವಿಮಾನ ಸಾಮರ್ಥ್ಯ 1281 ಆಗಿದ್ದು, ಇದರಲ್ಲಿ 320 ಯುದ್ಧ ವಿಮಾನಗಳು, 410 ಅಟ್ಯಾಕ್ ವಿಮಾನಗಳು, 296 ಟ್ರಾನ್ಸ್ಪೋರ್ಟ್ ಮತ್ತು 486 ಟ್ರೈನರ್ ಪ್ಲೇನ್ಗಳಾಗಿವೆ. ಅವರ ಹೆಲಿಕಾಫ್ಟರ್ ಸಾಮರ್ಥ್ಯ 328 ಆಗಿದ್ದು, ಇದರಲ್ಲಿ 49 ಅಟ್ಯಾಕ್ ಹೆಲಿಕಾಫ್ಟರ್ಗಳು.
4. ಭಾರತದ ಬಳಿಕ 4426 ಯುದ್ಧ ಟ್ಯಾಂಕ್ಗಳಿವೆ, 3147 ಶಸ್ತ್ರಸಜ್ಜಿತ ಯುದ್ಧ ವಾಹನಗಳಿವೆ, 190 ಸ್ವಯಂ ಚಾಲಿತ ಫಿರಂಗಿಗಳಿವೆ, 4158 ಎಳೆಯುವ ಫಿರಂಗಿ ಮತ್ತು 266 ರಾಕೆಟ್ ಪ್ರೊಜೆಕ್ಟರ್ಗಳಿವೆ. ಯುದ್ಧ ಟ್ಯಾಂಗ್ಗಳು ಪ್ರಮುಖ ಯುದ್ಧ ಟ್ಯಾಂಕ್(ಎಂಬಿಟಿ), ಲಘು ಟ್ಯಾಂಕ್ ಮತ್ತು ಟ್ಯಾಂಕ್ ಧ್ವಂಸಕಗಳನ್ನು ಒಳಗೊಂಡಿದೆ. ಶಸ್ತ್ರಸಜ್ಜಿತ ಯುದ್ಧ ವಾಹನಗಳು ಶಸ್ತ್ರಸಜ್ಜಿತ ವೈಯಕ್ತಿ ಸಾಗಾಣೆದಾರ(ಎಪಿಸಿ) ಮತ್ತು ಇನ್ಫಾಂಟ್ರಿ ಫೈಟಿಂಗ್ ವೆಹ್ಹಿಕಲ್(ಐಎಫ್ವಿ)ಗಳನ್ನು ಒಳಗೊಂಡಿದೆ. ರಾಕೆಟ್ ಪ್ರೊಜೆಕ್ಟರ್ಗಳು ಪ್ರಾಥಮಿಕವಾಗಿ ಸ್ವಯಂ ಚಾಲಿತ ವಿಧಾನಗಳಾಗಿವೆ.
ಪಾಕಿಸ್ಥಾನದ ಬಳಿ 2181 ಯುದ್ಧ ಟ್ಯಾಂಕ್ಗಳಿಗೆ, 2604 ಶಸ್ತ್ರಸಜ್ಜಿತ ಯುದ್ಧ ವಾಹನಗಳಿವೆ, 307 ಸ್ವಯಂಚಾಲಿತ ಫಿರಂಗಿಗಳಿವೆ, 1240 ಎಳೆಯುವ ಫಿರಂಗಿಗಳಿವೆ ಮತ್ತು 144 ರಾಕೆಟ್ ಪ್ರೊಜೆಕ್ಟರ್ಗಳಿವೆ.
ಭಾರತದ ನೌಕಾ ಆಸ್ತಿಯು ಒಂದು ಏರ್ಕ್ರಾಫ್ಟ್ ಕ್ಯಾರಿಯರ್ನ್ನು ಒಳಗೊಂಡಿದೆ, 14 ಫ್ರಿಗೇಟ್ಸ್, 11 ಧ್ವಂಸಕಗಳು, 22 ಕಾರ್ವೆಟ್ಸ್, 16 ಸಬ್ಮರೀನ್, 139 ಪ್ಯಾಟ್ರೋಲ್ ವೆಸೆಲ್ಸ್ ಮತ್ತು 4 ಮೈನ್ ವಾರ್ಫೇರ್ ಶಿಪ್ಗಳನ್ನು ಒಳಗೊಂಡಿದೆ. ಏರ್ಕ್ರಾಫ್ಟ್ ಕ್ಯಾರಿಯರ್ ಸಾಂಪ್ರದಾಯಿಕ ಕ್ಯಾರಿಯರ್ ಮತ್ತು ಹೆಲಿಕಾಫ್ಟರ್ ಕ್ಯಾರಿಯರ್ನ್ನು ಒಳಗೊಂಡಿದೆ. ಸಬ್ಮರೀನ್ಗಳು ಡಿಸೇಲ್-ಎಲೆಕ್ಟ್ರಿಕ್ ಮತ್ತು ನ್ಯೂಕ್ಲಿಯರ್ ಚಾಲಿತ ವಿಧಾನಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.