ನವದೆಹಲಿ: 12 ಮಿರಾಜ್-2000 ಯುದ್ಧವಿಮಾನಗಳು ಪಾಕಿಸ್ಥಾನದ ಬಲಕೋಟ್ಗೆ ನುಗ್ಗಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ದಾಳಿಯಲ್ಲಿ ಸುಮಾರು 300 ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ. ಹತರಾದವರ ಪೈಕಿ ಐಸಿ-814ನ್ನು ಹೈಜಾಕ್ ಮಾಡಿದ್ದಾತ ಕೂಡ ಸೇರಿದ್ದಾನೆ ಎನ್ನಲಾಗಿದೆ.
ಇಂಡಿಯನ್ ಏರ್ಲೈನ್ಸ್ನ ಏರ್ಬಸ್ ಐಸಿ-814ನ್ನು 1999ರ ಡಿಸೆಂಬರ್ನಲ್ಲಿ ಹೈಜಾಕ್ ಮಾಡಿದ್ದ ಉಗ್ರ ಮೌಲಾನಾ ಯೂಸುಫ್ ಅಝರ್ ಇಂದು ನಡೆದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈತ ಜೈಶೇ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝಾರ್ನ ಬಾವ ಎನ್ನಲಾಗಿದೆ.
ಈತನ ಬಲಕೋಟ್ನಲ್ಲಿ ಜೈಶೇ ಸಂಘಟನೆಯ ಶಿಬಿರಗಳನ್ನು ಮುನ್ನಡೆಸುತ್ತಿದ್ದ ಎನ್ನಲಾಗಿದೆ. ಬಲಕೋಟ್ ಪಾಕ್ ಆಕ್ರಮಿತ ಕಾಶ್ಮೀರದಿಂದ 80 ಕಿಮೀ ದೂರದಲ್ಲಿದ್ದು, ದೊಡ್ಡ ದೊಡ್ಡ ಉಗ್ರರಿಗೆ ಸುರಕ್ಷಿತ ನೆಲೆಯಾಗಿದೆ. ಈ ಉಗ್ರರು ಭಾರತದ ವಿರುದ್ಧ ಇನ್ನಷ್ಟು ದಾಳಿಗಳನ್ನು ನಡೆಸಲು ದೊಡ್ಡ ಮಟ್ಟದಲ್ಲಿ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.
ಉಗ್ರರ ಸಂಚಿನ ಖಚಿತ ಮಾಹಿತಿಯನ್ನು ಅನುಸರಿಸಿ ವೈಮಾನಿಕ ದಾಳಿಯನ್ನು ನಡೆಸಿದ್ದಾಗಿ ವಿದೇಶಾಂಗ ಕಾರ್ಯದರ್ಶಿ ಗೋಖಲೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.