News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಳ್ತಂಗಡಿ : ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಮರಣಾಂತ ಉಪವಾಸ

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯ ಪಲ್ಕೆ ಸಂಪರ್ಕಿಸುವ ರಸ್ತೆಯು ತೀರಾ ದುರಾವಸ್ಥೆಯಲ್ಲಿದ್ದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ದುರಸ್ಥಿಗೊಳಿಸುತ್ತಿಲ್ಲ. ಮುಂದಿನ ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಹಿರಿಯ ನಾಗರಿಕ ಕೆ.ವಿ. ವಾಸುದೇವ ಪೈ ಹೇಳಿದ್ದಾರೆ....

Read More

ಮೆಗಾ ಕಿಚನ್ಸ್ ಕಾರ್ಯಕ್ರಮದಲ್ಲಿ ಇಂದು ಧರ್ಮಸ್ಥಳ ಅನ್ನಛತ್ರ

ಉಜಿರೆ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಸ್ಥಾನದ ಅನ್ನಪೂರ್ಣ ಛತ್ರದ ಸಾಕ್ಷ ಚಿತ್ರಣ ಇಂದು ನ್ಯಾಶನಲ್ ಜಿಯೋಗ್ರಾಫಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಾಹಿನಿಯು ಭಾರತದ ಮೆಗಾ ಕಿಚನ್ಸ್ ಎಂಬ ಕಾರ್ಯಕ್ರಮ ಪ್ರಾರಂಭಮಾಡಿದ್ದು ಈ ಕಾರ್ಯಕ್ರಮದಡಿಯಲ್ಲಿ ಪ್ರಸಾರವಾಗುವ ಅನ್ನಪೂರ್ಣ...

Read More

ಸಂತೆಕಟ್ಟೆ ಸಂತೆ: ಹೆಚ್ಚುತ್ತಿರುವ ವಾಹನಗಳ ಭರಾಟೆ

ಬೆಳ್ತಂಗಡಿ: ಸೋಮವಾರ ಬಂತೆಂದರೆ ಇಲ್ಲಿನ ಪ್ರಸಿದ್ಧ ಸಂತೆಕಟ್ಟೆ ವಾಹನಗಳಿಂದ, ಜನಗಳಿಂದ ತುಂಬಿಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕಾರಣ ವಾಹನಗಳ ಭರಾಟೆ ಹೆಚ್ಚು. ಸೋಮವಾರ ವಾರದ ಸಂತೆ. ಜನಸಂದಣಿಯಿಂದಲೂ ಕೂಡಿರುತ್ತದೆ. ಒಂದೆಡೆ ಖರೀದಿಗಾಗಿ ಸ್ವಂತ ವಾಹನಗಳಲ್ಲಿ ಬರುವವರು ಪಾರ್ಕಿಂಗ್ ಮಾಡಿದರೆ, ಇನ್ನೊಂದೆಡೆ...

Read More

ವಿಶ್ವ ಯೋಗ ದಿನಾಚರಣೆಯಂದು ಅತಿಥಿಯಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಭಾನುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಭಾಗವಹಿಸಿದರು. ಈ ಸಂದರ್ಭ ಡಾ| ಹೆಗ್ಗಡೆಯವರೊಂದಿಗೆ ಕೆಲ ಕಾಲ ಉಭಯಕುಶಲೋಪರಿ ಮಾಡಿದರು....

Read More

ಉಜಿರೆ : ಎನ್‌ಸಿಸಿ ಕೆಡೆಟ್‌ಗಳಿಂದ ಯೋಗ ಪ್ರದರ್ಶನ

ಬೆಳ್ತಂಗಡಿ: ಕೇಂದ್ರ ಸರ್ಕಾರದ ಆಯುಷ್ ವಿಭಾಗದ ಮಾರ್ಗಸೂಚಿಯನ್ವಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಉಜಿರೆ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಆದಿತ್ಯವಾರ ಬೆಳಿಗ್ಗೆ 6-50ಕ್ಕೆ ಎನ್‌ಸಿಸಿ ಕೆಡೆಟ್‌ಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆ...

Read More

ಯೋಗ ಮಾಡುವುದರಿಂದ ಆರೋಗ್ಯ ರಕ್ಷಣೆಯೊಂದಿಗೆ ನಮ್ಮ ಕಾರ್ಯದಕ್ಷತೆ ಹೆಚ್ಚಾಗುವುದು

ಬೆಳ್ತಂಗಡಿ : ಪ್ರತಿನಿತ್ಯವೂ ನಿಯಮಿತವಾಗಿ ಯೋಗ ಮಾಡುವುದರಿಂದ ಆರೋಗ್ಯ ರಕ್ಷಣೆಯೊಂದಿಗೆ ನಮ್ಮ ಕಾರ್ಯದಕ್ಷತೆ ಹೆಚ್ಚಾಗುತ್ತದೆ. ಶಕ್ತಿಯ ವರ್ಧನೆಯೊಂದಿಗೆ ಆಯುಷ್ಯ ವೃದ್ಧಿಯಾಗುತ್ತದೆ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಭಾನುವಾರ ವಿಶ್ವಯೋಗ ದಿನಾಚರಣೆ...

Read More

ಬೆಳ್ತಂಗಡಿ : ಮರ ಬಿದ್ದು ಮನೆ ಭಾಗಶಃ ಹಾನಿ

ಬೆಳ್ತಂಗಡಿ : ತಾಲೂಕಿನಾದ್ಯಂತ ಸುರಿದ ಮಳೆ-ಗಾಳಿಗೆ ಲಾಯಿಲ ಗ್ರಾಮದ ಪುತ್ರಬೈಲು ಅಂಬೇಡ್ಕರ್ ನಗರದಲ್ಲಿ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಗೊಂಡಿದೆ. ಇಲ್ಲಿನ ನಿವಾಸಿ ಸರೋಜ ಎಂಬವರ ಮನೆಯ ಮೇಲೆ ಮರಗಳು ಬಿದ್ದು ಸುಮಾರು ಒಂದೂವರೆ ಲಕ್ಷ ರೂ.ನಷ್ಟು ಹಾನಿಯಾಗಿದೆ. ಕಂದಾಯ...

Read More

ಬೆಳ್ತಂಗಡಿ : ಶ್ರೀ ಗುರುದೇವ ಮಠದಲ್ಲಿ ವಿಶ್ವ ಯೋಗ ದಿನ ಆಚರಣೆ

ಬೆಳ್ತಂಗಡಿ: ಆತ್ಮಾನಂದ ಸರಸ್ವತಿ ವಿದ್ಯಾಲಯ ಶ್ರೀ ಗುರುದೇವ ಮಠ ದೇವರಗುಡ್ಡೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆದಿತ್ಯವಾರದಂದು ಯೋಗ ನಡೆಯಿತು. ಇಲ್ಲಿ ಗುರುಕುಲ ಪದ್ದತಿಯಲ್ಲಿ ಶಿಕ್ಷಣ ನಡೆಯುತ್ತಿದ್ದು ಇಲ್ಲಿ ಪ್ರತಿದಿನವೂ ಮಕ್ಕಳಿಗೆ ಬೆಳಗ್ಗೆ ಯೋಗಾಭ್ಯಾಸ,...

Read More

ಕೌಶಲ್ಯವಿದ್ದರೆ ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶದ ಬಾಗಿಲು ತೆರೆದಿದೆ

ಬೆಳ್ತಂಗಡಿ: ಮಾಧ್ಯಮ ಕ್ಷೇತ್ರದಲ್ಲಿ ಇಂದು ವಿಪುಲವಾದ ಅವಕಾಶಗಳಿದ್ದು, ಪತ್ರಿಕೋದ್ಯಮದಲ್ಲಿ ಪದವಿ ಮಾಡಿದವರಿಗೆ, ಅದರಲ್ಲಿಯೂ ವಿಶೇಷವಾಗಿ ಸ್ನಾತಕೊತ್ತರ ಪದವಿ ಮಾಡಿದವರಿಗೆ ತುಂಬಾ ಬೇಡಿಕೆ ಇದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಉಪನ್ಯಾಸಕಿ ವಾಹಿನಿ ಅವರು ಹೇಳಿದರು. ಇವರು ಇತ್ತೀಚೆಗೆ ಉಜಿರೆಯ...

Read More

ಪಿಎಚ್.ಡಿ.ಗೆ ಅರ್ಜಿ ಆಹ್ವಾನ

ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ.ಹಾಮಾನಾ ಸಂಶೋಧನಾ ಕೇಂದ್ರವು 2015-16ನೇ ಸಾಲಿಗೆ ಕನ್ನಡ ಸಾಹಿತ್ಯ, ಅಭಿವೃದ್ಧಿ ಅಧ್ಯಯನ (ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ವಾಣಿಜ್ಯಶಾಸ್ತ್ರ) ಮತ್ತು ಚರಿತ್ರೆ) ವಿಭಾಗದ ವಿಷಯಗಳಲ್ಲಿ ಪಿ.ಎಚ್.ಡಿ. ಪದವಿಗೆ ಅರ್ಹ...

Read More

Recent News

Back To Top