ಬೆಳ್ತಂಗಡಿ: ಸೋಮವಾರ ಬಂತೆಂದರೆ ಇಲ್ಲಿನ ಪ್ರಸಿದ್ಧ ಸಂತೆಕಟ್ಟೆ ವಾಹನಗಳಿಂದ, ಜನಗಳಿಂದ ತುಂಬಿಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕಾರಣ ವಾಹನಗಳ ಭರಾಟೆ ಹೆಚ್ಚು. ಸೋಮವಾರ ವಾರದ ಸಂತೆ. ಜನಸಂದಣಿಯಿಂದಲೂ ಕೂಡಿರುತ್ತದೆ. ಒಂದೆಡೆ ಖರೀದಿಗಾಗಿ ಸ್ವಂತ ವಾಹನಗಳಲ್ಲಿ ಬರುವವರು ಪಾರ್ಕಿಂಗ್ ಮಾಡಿದರೆ, ಇನ್ನೊಂದೆಡೆ ಸರ್ವಿಸ್ ವಾಹನಗಳು, ಅಟೋ-ಜೀಪು-ಟೆಂಪೋಗಳು ಪಾರ್ಕಿಂಗ್ ಮಾಡಿರುತ್ತಾರೆ.
ಸಂತೆ ಪ್ರಾಂಗಣ ವಿಶಾಲವಾಗಿದ್ದರೂ ಒಳಗಡೆ ಸ್ಥಳಾವಕಾಶವಿಲ್ಲದೆ ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ ಓಡಾಡುವ ವಾಹನಗಳಿಗೆ ರಸ್ತೆ ಬಿಟ್ಟು ಕೆಳಗೆ ಇಳಿಸುವಂತಿಲ್ಲ. ಪಾದಾಚಾರಿಗಳಿಗೆ ಪುಟ್ಪಾತ್ ಇಲ್ಲದೆ ರಸ್ತೆಯಲ್ಲಿಯೇ ಅವರ ವ್ಯಾಪಾರ-ವ್ಯವಹಾರ ನಡೆಯುತ್ತದೆ. ಅಂತೂ ಬೆಳಿಗ್ಗೆಯಿಂದ ಸಂಜೆಯವರೆಗೆ ಬೆಳ್ತಂಗಡಿಯ ಅಯ್ಯಪ್ಪ ಗುಡಿಯಿಂದ ಮುಖ್ಯ ಬಸ್ನಿಲ್ದಾಣದ ತನಕ ಪಾದಾಚಾರಿಯಾಗಿ ಅಥವಾ ವಾಹನದಲ್ಲಿ ಸಂಚರಿಸುವುದು ದುಸ್ತರವಾಗಿದೆ.
ಹಳೇಕೋಟೆ ಎಂಬಲ್ಲಿ ಎಪಿಎಂಸಿಯ ಬೃಹತ್ ಮಾರಾಟ ಪ್ರಾಂಗಣ ರಚನೆಯಾಗಿ ಹಲವಾರು ವರ್ಷಗಳು ಕಳೆದರೂ ವ್ಯಾಪಾರಿಗಳು ಅಲ್ಲಿಗೆ ಹೋಗಲು ಒಪ್ಪದಿರುವುದು ಪಟ್ಟಣ ಪಂ.ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.