Date : Tuesday, 06-10-2015
ನವದೆಹಲಿ: ಬಿರುಗಾಳಿ, ಆಲಿಕಲ್ಲು, ಹಿಂಗಾರಿನಿಂದಾಗಿ ಕಟಾವಿಗೆ ಬಂದ ಬೆಳೆ ಹಾನಿಗೆ ಶೀಘ್ರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಬೆಳೆ ವಿಮೆ ಮತ್ತು ಸೂಕ್ತ ಮಾಹಿತಿ ಸಂಗ್ರಹಿಸಲು ಈ ಆ್ಯಪ್ ನೆರವಾಗಲಿದೆ. ಇಸ್ರೋದ ಸಹಯೋಗದಲ್ಲಿ ಈ ಯೋಜನೆ ಅಭಿವೃದ್ಧಿಪಡಿಸಲಾಗಿದೆ....
Date : Tuesday, 06-10-2015
ನವದೆಹಲಿ: ಜಮ್ಮುಕಾಶ್ಮೀರದ ದೇಗುಲವೊಂದರಿಂದ 24 ವರ್ಷಗಳ ಹಿಂದೆ ಕದಿಯಲಾಗಿದ್ದ 10ನೇ ಶತಮಾನದ ದುರ್ಗಾದೇವಿಯ ವಿಗ್ರಹವನ್ನು ಜರ್ಮನ್ ಭಾರತಕ್ಕೆ ವಾಪಾಸ್ ನೀಡಿದೆ. ವಿದೇಶಕ್ಕೆ ಕಳ್ಳ ಸಾಗಾಣೆಯಾಗಿದ್ದ ಈ ವಿಗ್ರಹ ಜರ್ಮನಿಯ ಬಳಿ ಇತ್ತು. 8 ಕೈಗಳುಳ್ಳ ಮಹಿಷಮರ್ಧಿನಿಯ ವಿಗ್ರಹ ಇದಾಗಿದ್ದು, ಸೆಪ್ಟಂಬರ್ 23ರಂದು...
Date : Monday, 05-10-2015
ನವದೆಹಲಿ: ಭಾರತ ಪ್ರವಾಸದಲ್ಲಿರುವ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಕ್ಷಣೆಗೆ ಸಂಬಂಧಿಸಿದ ದ್ವಿಪಕ್ಷೀಯ ವ್ಯವಹಾರಗಳ ವಿಸ್ತರಣೆ, ಭದ್ರತೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕೃಷಿ, ನವೀಕರಿಸಬಹುದಾದ ಶಕ್ತಿ ಮುಂತಾದ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು....
Date : Monday, 05-10-2015
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಗೋಮಾಂಸ ನಿಷೇಧಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಎರಡು ತಿಂಗಳುಗಳ ಕಾಲ ಅಮಾನತುಗೊಳಿಸಿದೆ. ಅಲ್ಲದೇ ಎರಡು ಪೀಠಗಳ ವಿರುದ್ಧ ಆದೇಶಗಳ ಹಿನ್ನಲೆಯಲ್ಲಿ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ಸ್ಥಾಪಿಸಿ ಗೋಮಾಂಸ ಮಾರಾಟ ಮತ್ತು ನಿಷೇಧದ ಬಗೆಗಿನ ವಿವಾದವನ್ನು...
Date : Monday, 05-10-2015
ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿರುವಂತೆ ರಾಜಕೀಯ ಕೆಸರೆರೆಚಾಟಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಬಿಜೆಪಿಯ ವಿರುದ್ಧ ಸಮರ ಸಾರಿರುವ ಮಹಾಮೈತ್ರಿಯ ಮುಖಂಡರುಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ನೇರವಾಗಿ ಪ್ರಧಾನಿಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈಗಾಗಲೇ ನರೇಂದ್ರ ಮೋದಿಯವರನ್ನು...
Date : Monday, 05-10-2015
ನವದೆಹಲಿ: ಮರಣದಂಡನೆಯನ್ನು ನಿಷೇಧಿಸುವಂತೆ ಕಾನೂನು ಸಮಿತಿ ಮಾಡಿರುವ ಶಿಫಾರಸ್ಸನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತಿರಸ್ಕರಿಸುವ ಸಾಧ್ಯತೆ ಇದೆ. ಕಾನೂನು ಸಮಿತಿ ಗಲ್ಲು ನಿಷೇಧಿಸುವಂತೆ ನೀಡಿದ ಶಿಫಾರಸ್ಸಿನ ಬಗ್ಗೆ ಕಾನೂನು ಸಚಿವಾಲಯದ, ಗೃಹಸಚಿವಾಲಯದ ಅಧಿಕಾರಿಗಳು, ಸಚಿವರು ಸುಧೀರ್ಘ ಚರ್ಚೆ ನಡೆಸಿದ...
Date : Monday, 05-10-2015
ಹೈದರಾಬಾದ್: ತನ್ನ ಪ್ರದೇಶಕ್ಕೆ ಆಗಮಿಸಿದ ನಾಯಕನನ್ನು ಸ್ವಾಗತಿಸುವುದಕ್ಕಾಗಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಎರಡು ಪಾರಿವಾಳಕ್ಕೆ ಪಟಾಕಿಗಳನ್ನು ಕಟ್ಟಿ ಮೇಲಕ್ಕೆ ಹಾರಿಸಿದ ಘಟನೆ ಗೋದಾವರಿಯಲ್ಲಿ ನಡೆದಿದೆ. ಕೊವುರು ಗ್ರಾಮಕ್ಕೆ ಆಗಮಿಸಿದ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್. ರಘವೀರ ರೆಡ್ಡಿ ಅವರನ್ನು ಸ್ವಾಗತಿಸುವುದಕ್ಕಾಗಿ...
Date : Monday, 05-10-2015
ಲಕ್ನೋ: ಉತ್ತರಪ್ರದೇಶದ ಮಥುರಾದಲ್ಲಿ ಕೃಷ್ಣಾ ಥೀಮ್ ಪಾರ್ಕ್ ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದ್ದು, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಇದಕ್ಕಾಗಿ ಈಗಾಗಲೇ 50 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಈ ಯೋಜನೆಯ ಬಗ್ಗೆ ಮಥುರಾ ಸಂಸದೆಯಾಗಿರುವ ಹೇಮಮಾಲಿನಿಯವರು ಅಖಿಲೇಶ್ ಅವರೊಂದಿಗೆ ಕಳೆದ ವಾರ ಸುಧೀರ್ಘ...
Date : Monday, 05-10-2015
ನವದೆಹಲಿ: ವಿದೇಶದಲ್ಲಿರುವ ಕಪ್ಪುಹಣವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತದಲ್ಲೂ ಬೃಹತ್ ಮೊತ್ತದ ಕಪ್ಪುಹಣ ಇದೆ ಎಂದಿದ್ದಾರೆ. ಅಲ್ಲದೇ ಪ್ಲಾಸ್ಟಿಕ್ ಕರೆನ್ಸಿಯನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ. ’ಪ್ಲಾಸ್ಟಿಕ್ ಕರೆನ್ಸಿ ನಿಯಮವಾಗುವಂತೆ...
Date : Monday, 05-10-2015
ಅಲಿಘಢ: ಅಲಿಘಢ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಜಮೀರುದ್ದೀನ್ ಶಾ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ಮಹಿಳೆಯರನ್ನು ಗುಲಾಮರನ್ನಾಗಿಸಿದ್ದೇ ಮುಸ್ಲಿಮರು ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ...