ನವದೆಹಲಿ: ದೆಹಲಿ ಸರ್ಕಾರ ಮತ್ತೊಂದು ಸುತ್ತಿನ ಸಮ ಬೆಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ಎಪ್ರಿಲ್ 15-30ರವರೆಗೆ ಎರಡನೇ ಹಂತದ ನಿಯಮ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಸರ್ಕಾರಕ್ಕೆ ಸಿಕ್ಕಿದ ಸ್ಪಂದನೆಯಲ್ಲಿ ಬಹುತೇಕ ಮಂದಿ ದೆಹಲಿಗರು ಸಮ-ಬೆಸ ನಿಯಮದ ಪರವಾಗಿದ್ದಾರೆ. ಜನರ ಪ್ರತಿಕ್ರಿಯೆಯಿಂದ ಸ್ಫೂರ್ತಿಗೊಂಡು ನಿಯಮ ಜಾರಿಗೊಳಿಸುತ್ತಿದ್ದೇವೆ. ಈ ಬಗ್ಗೆ ನಾವು ತುಂಬಾ ಗಂಭೀರವಾಗಿದ್ದೇವೆ ಎಂದಿದ್ದಾರೆ.
ಟ್ರಾಫಿಕ್ ಸಮಸ್ಯೆಯನ್ನು ಎದುರಿಸಲು ನಗರ ಸಾರಿಗೆ ಪೊಲೀಸರು ಅಷ್ಟರ ಮಟ್ಟಿಗೆ ಸಮರ್ಥರಿಲ್ಲ, ಇನ್ನೂ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಕೇಜ್ರಿವಾಲ್.
ಅಲ್ಲದೇ ಪ್ರತಿ ತಿಂಗಳು ಸಮ-ಬೆಸ ನಿಯಮ ಜಾರಿಗೊಳಿಸುವುದಾಗಿ ಅವರು ಹೇಳಿಕೊಂಡಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.