News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಪಾಕ್‌ಗೆ ಭೇಟಿ ಕೊಡಲಿದ್ದಾರೆ ಸುಷ್ಮಾ?

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶೀಘ್ರದಲ್ಲೇ ಪಾಕಿಸ್ಥಾನಕ್ಕೆ ಭೇಟಿ ಕೊಡುವ ಸಾಧ್ಯತೆಗಳು ಇವೆ ಎಂದು ವರದಿಗಳು ತಿಳಿಸಿದ್ದು, ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಫ್ಘಾನಿಸ್ತಾನದ ಬಗ್ಗೆ ನಡೆಯಲಿರುವ 14 ದೇಶಗಳ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಸುಷ್ಮಾ...

Read More

ಸೇಫ್ಟಿ ಚೆಕ್ ಸಕ್ರಿಯಗೊಳಿಸಿದ ಫೇಸ್‌ಬುಕ್

ಚೆನ್ನೈ: ತಮಿಳುನಾಡಿನಾದ್ಯಂತ ಸಂಭವಿಸುತ್ತಿರುವ ಭಾರೀ ಮಳೆಯಿಂದಾಗಿ ಸಾವಿರಾರು ಮಂದಿ ತಮ್ಮ ಮನೆಗಳಿಂದ ಹೊರಗುಳಿದಿದ್ದು, ಈ ಸಂಬಂಧ ಫೇಸ್‌ಬುಕ್ ಸೇಫ್ಟಿ ಚೆಕ್ ವೈಶಿಷ್ಟ್ಯತೆಯನ್ನು ಸಕ್ರಿಯಗೊಳಿಸಿದೆ. ಪೀಡಿತ ಪ್ರದೇಶದಲ್ಲಿರುವ ಫೇಸ್‌ಬುಕ್ ಬಳಕೆದಾರರು ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ’ಸುರಕ್ಷಿತ’ ಎಂದು ಗುರುತಿಸುವ ಮೂಲಕ ಭರವಸೆಯನ್ನು ಮೂಡಿಸಲು...

Read More

ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ತೀರತ್ ಸಿಂಗ್ ಥಾಕೂರ್

ನವದೆಹಲಿ: ನ್ಯಾ.ತೀರತ್ ಸಿಂಗ್ ಥಾಕೂರ್ ಅವರು ಗುರುವಾರ ದೇಶದ 43ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು 63 ವರ್ಷದ ತೀರತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯನ್ಯಾಯಮೂರ್ತಿ ಎಚ್‌ಎಲ್ ದತ್ತು...

Read More

ಮೋದಿ ಭಾರತದ ಬಗ್ಗೆ ಸ್ಪಷ್ಟ ಗುರಿ ಹೊಂದಿದ ಪ್ರಾಮಾಣಿಕ ರಾಜಕಾರಣಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು, ಮೋದಿಯೊಬ್ಬ ಪ್ರಾಮಾಣಿಕ ರಾಜಕಾರಣಿ ಮತ್ತು ಭಾರತದ ಬಗ್ಗೆ ಅವರಿಗೆ ಸ್ಪಷ್ಟ ದೃಷ್ಟಿಕೋನವಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ...

Read More

ಚೆನ್ನೈ ಜನತೆಗೆ ಉಚಿತ ಕರೆ, ಡಾಟಾ ಘೋಷಿಸಿದ ಟೆಲಿಕಾಂ ಕಂಪನಿಗಳು

ನವದೆಹಲಿ: ತೀವ್ರ ಸ್ವರೂಪದಲ್ಲಿ ಸುರಿದ ಮಳೆ ಚೆನ್ನೈ ಜನತೆಯನ್ನು ಸಂಕಷ್ಟದಲ್ಲಿ ದೂಡಿದೆ. ಅಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು ಇತರರೊಂದಿಗೆ ಸಂಪರ್ಕ ಸಾಧಿಸುವುದೇ ದೊಡ್ಡ ಸಾಹಸವಾಗಿದೆ. ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳು ನೆರವಿನ ಹಸ್ತ ಚಾಚಿದೆ. ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಕಾಂ, ವೋಡಾಫೋನ್ ಚೆನ್ನೈ ಜನತೆಗೆ ಉಚಿತ...

Read More

ದೆಹಲಿ ಗ್ಯಾಂಗ್‌ರೇಪ್‌ನ ಅಪ್ರಾಪ್ತನಿಗೆ ಶಿಕ್ಷೆ ಮುಗಿದರೂ ಬಿಡುಗಡೆಯಿಲ್ಲ

ನವದೆಹಲಿ: 2012ರ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪ್ರಾಪ್ತ ಆರೋಪಿಯ ಶಿಕ್ಷೆಯ ಅವಧಿ ಮುಕ್ತಾಯಗೊಂಡಿದೆ. ಡಿ.22ರಂದು ಆತ ಬಿಡುಗಡೆಯಾಗಬೇಕಿದೆ. ಆದರೆ ಸದ್ಯಕ್ಕೆ ಆತನನ್ನು ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಆತನನ್ನು...

Read More

ಅಪಾಯದಲ್ಲಿ ಚೆನ್ನೈ, ಭರದಿಂದ ಸಾಗುತ್ತಿದೆ ರಕ್ಷಣಾ ಕಾರ್ಯ

ಚೆನ್ನೈ: ಜಲಪ್ರಳಯಕ್ಕೆ ತುತ್ತಾಗಿರುವ ಚೆನ್ನೈ ಮಹಾನಗರಿ ಇತರ ರಾಜ್ಯಗಳ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದೆ. ರಸ್ತೆ, ರೈಲ್ವೇ, ವಾಯು ಮಾರ್ಗ ಎಲ್ಲವೂ ಸ್ಥಗಿತಗೊಂಡಿದೆ. ಕಳೆದ ರಾತ್ರಿಯಿಂದ ಮಳೆಯ ತೀವ್ರತೆ ಕಡಿಮೆಯಾದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ. ನೌಕಾಪಡೆಯ ಐಎನ್‌ಎಸ್ ಐರಾವತ  ವೈದ್ಯರು...

Read More

ಗುಜರಾತ್‌ನ 6 ಮುನ್ಸಿಪಲ್ ಕಾರ್ಪೋರೇಶನ್ ಬಿಜೆಪಿ ತೆಕ್ಕೆಗೆ

ಅಹ್ಮದಾಬಾದ್: ಗುಜರಾತ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಎಲ್ಲಾ ಆರು ಮುನ್ಸಿಪಲ್ ಕಾರ್ಪೋರೇಶನ್‌ಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಆದರೆ ಜಿಲ್ಲಾ ಪಂಚಾಯತ್‌ನಲ್ಲಿ ಎಂದಿಗಿಂತ ಈ ಬಾರಿ ಕಾಂಗ್ರೆಸ್ ತುಸು ಚೇತರಿಕೆಯನ್ನು ಕಂಡಿದೆ. ಪಟೇಲ್ ಮೀಸಲಾತಿ ಹೋರಾಟದ ರೂವಾರಿ ಹಾರ್ದಿಕ್ ಪಟೇಲ್...

Read More

ಭಾರತದಲ್ಲಿ ಈ ವರ್ಷ 136 ಭೂಕಂಪ ಆಗಿದ್ಯಂತೆ !

ನವದೆಹಲಿ: ಭಾರತದಲ್ಲಿ ಈ ವರ್ಷ ಒಟ್ಟು 136 ಭೂಕಂಪನಗಳು ಸಂಭವಿಸಿದೆ ಎಂದು ಭೂವಿಜ್ಞಾನ ಸಚಿವ ಹರ್ಷವರ್ಧನ್ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ 114 ಭೂಕಂಪಗಳು ಗರಿಷ್ಠ ಅಪಾಯ ವಲಯದಲ್ಲಿ ಸಂಭವಿಸಿದೆ. ಆದರೆ ಕಳೆದ 30 ವರ್ಷದಿಂದ ಭೂಕಂಪಶೀಲತೆಯಲ್ಲಿ ಏರಿಕೆ ಅಥವಾ ಇಳಿಕೆ...

Read More

ಮಧ್ಯಪ್ರದೇಶದಲ್ಲಿ ಸಂಜ್ಞಾ ಭಾಷೆಗೆ ಪ್ರತ್ಯೇಕ ಭಾಷೆಯ ಸ್ಥಾನಮಾನ

ಭೋಪಾಲ್: ಮೂಕ ಮತ್ತು ಕಿವಿ ಕೇಳದವರಿಗಾಗಿ ಬಳಸಲಾಗುವ ಸಂಜ್ಞಾ ಭಾಷೆಗೆ ಮಧ್ಯಪ್ರದೇಶ ಸರ್ಕಾರ ಪ್ರತ್ಯೇಕ ಭಾಷೆಯ ಸ್ಥಾನಮಾನ ನೀಡುವ ಮೂಲಕ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅಷ್ಟೇ ಅಲ್ಲದೇ ಕಿವಿ ಮತ್ತು ಮಾತಿನ ಸಮಸ್ಯೆ ಇರುವವರಿಗೆ ವೃತ್ತಿಪರ...

Read More

Recent News

Back To Top