ರಾಯ್ಪುರ: ಛತ್ತೀಸ್ಗಢ ರಾಜ್ಯವು ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚಿನ ಮೌಲ್ಯದ ನೋಟುಗಳ ನಿಷೇಧವನ್ನು ಬೆಂಬಲಿಸಿ, ಅಂಗೀಕರಿಸಿದ ಭಾರತದ ಮೊದಲ ರಾಜ್ಯವಾಗಿದೆ.
ಮುಖ್ಯಮಂತ್ರಿ ರಮಣ್ ಸಿಂಗ್ ಅಧಿಸೂಚನೆ ಜಾರಿಗೆ ಪ್ರಸ್ತಾಪಿಸಿದ್ದರು.
ಅಮೇರಿಕಾ ಅಧ್ಯಕ್ಷ ಲಿಂಕನ್ ಅವರ ಗುಲಾಮಗಿರಿಯ ನಿರ್ಮೂಲನೆಯಿಂದ ಮೋದಿ ಜಿ ಅವರ ನೋಟು ನಿಷೇಧದವರೆಗೆ ಎಲ್ಲ ದೇಶಗಳು ರಾಷ್ಟ್ರದ ಹಿತವನ್ನು ವ್ಯಾಖ್ಯಾನಿಸುವ ಕ್ಷಣಗಳಿಗೆ ಸಾಕ್ಷಿಯಾಗಿವೆ. ಈ ನಿರ್ಧಾರಗಳಿಗೆ ಅವರ ದೃಢ ಸಂಕಲ್ಪ, ಅಪಾರ ಧೈರ್ಯ ಮತ್ತು ಸದಾಚಾರ ಇವರಲ್ಲಿರುವ ಸಮಾನತೆಯಾಗಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಕರೆಗೆ ನಾನು ಮತ್ತು ಛತ್ತೀಸ್ಗಢದ 2.5 ಕೋಟಿ ಜನರು ದೃಢ ಬೆಂಬಲ ಸೂಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.