ಮಧ್ಯಪ್ರದೇಶ : 500 ಮತ್ತು 1000 ರೂಪಾಯಿ ನೋಟ್ ರದ್ದತಿ ನಂತರ ಮಧ್ಯಪ್ರದೇಶದಲ್ಲಿ 5 ದಿನಗಳ ಒಳಗಾಗಿ 1200 ಕೋಟಿಯಷ್ಟು ಹಣ ಜನ್ ಧನ್ ಖಾತೆಯಲ್ಲಿ ಜಮೆಯಾಗಿದ್ದು, ಜನ್ ಧನ್ ಖಾತೆಯಲ್ಲಿ ಠೇವಣಿಯಾಗುತ್ತಿರುವ ಈ ಹಣದ ಬಗ್ಗೆ ತೆರಿಗೆ ಇಲಾಖೆಯು ತನಿಖೆಯನ್ನು ಪ್ರಾರಂಭಿಸಿದೆ.
ಶೂನ್ಯ ಮೊತ್ತದಿಂದ ತೆರೆಯಲಾದ ಖಾತೆಗಳಲ್ಲಿ ಈಗ ರೂ. 50,000 ದಿಂದ 1 ಲಕ್ಷದವರೆಗೂ ಹಣ ಜಮೆಯಾಗಿದೆ. ಜನ್ ಧನ್ ಖಾತೆಯಲ್ಲಿ ಜಮೆಯಾಗಿರುವ ಹಣದ ಮೇಲೆ ತೆರಿಗೆ ಅಧಿಕಾರಿಗಳು ದೃಷ್ಟಿಯಿಟ್ಟಿದ್ದಾರೆ ಹಾಗೂ ಇದ್ದಕಿದ್ದಂತೆ ಠೇವಣಿಯಾಗಿರುವ ಇಂತಹ ಖಾತೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರಕಾರಿ ಬ್ಯಾಂಕ್ನ ಅಧಿಕಾರಿ ಹೇಳಿದ್ದಾರೆ.
60 ಲಕ್ಷ ಖಾತೆಗಳಲ್ಲಿ ಝೀರೋ ಬ್ಯಾಲೆನ್ಸ್
ಕೇವಲ ಮಧ್ಯಪ್ರದೇಶದಲ್ಲೇ ಜನ್ ಧನ್ ಯೋಜನೆಯ ಅಡಿಯಲ್ಲಿ 2 ಕೋಟಿ 20 ಲಕ್ಷ ಖಾತೆಗಳಿದ್ದು, ಸುಮಾರು 60 ಲಕ್ಷ ಖಾತೆಗಳಲ್ಲಿ ನೋಟು ರದ್ದತಿಯ ಮೊದಲು ಶೂನ್ಯ ಉಳಿತಾಯವಿತ್ತು. ಆದರೆ ಈಗ ಈ ಖಾತೆಗಳಲ್ಲಿ ರೂ. 50,000 ದಿಂದ 1 ಲಕ್ಷದವರೆಗೆ ಹಣ ಜಮೆ ಮಾಡಲಾಗಿದೆ.
1200 ಕೋಟಿಯಷ್ಟು ಠೇವಣಿ
ಇಷ್ಟು ದಿನ ನಿಷ್ಕ್ರಿಯವಾಗಿದ್ದ ಜನ್ ಧನ್ ಖಾತೆಗಳಲ್ಲಿ ಕಳೆದ ಐದು ದಿನಗಳಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಬಡಜನರಿಗಾಗಿ ತೆರೆಯಲಾದ ಈ ಖಾತೆಗಳಲ್ಲಿ ನೋಟ್ ರದ್ದತಿ ನಂತರ ಈವರೆಗೂ 1200 ಕೋಟಿ ರೂ. ಠೇವಣಿಯಾಗಿದೆ ಎಂದು ಅಂದಾಜಿಸಲಾಗಿದೆ.
ಜನ್ ಧನ್ ಖಾತೆಗಳಲ್ಲಿ ಜಮೆಯಾಗುತ್ತಿರುವ ಇಷ್ಟು ದೊಡ್ಡ ಮೊತ್ತದ ಹಣ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಬಂಗಾರ ಮಾರಾಟದ ಮೇಲೆ ಕಣ್ಣಿರಿಸಿದ್ದ ತೆರಿಗೆ ಇಲಾಖೆಯು ಈಗ ಜನ್ ಧನ್ ಖಾತೆಗಳಲ್ಲಾಗುತ್ತಿರುವ ವ್ಯವಹಾರದ ಮೇಲೂ ಪರೀಶಿಲನೆ ನಡೆಸಿದೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.