News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೂನ್ 21ರಂದು ಸಿಯಾಚಿನ್‌ನಲ್ಲಿನ ಯೋಧರಿಗಾಗಿ ಯೋಗ ಕಾರ್ಯಕ್ರಮ

ಸಿಯಾಚೆನ್: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ನಿಯೋಚಿತರಾಗಿರುವ ಯೋಧರು ಜೂನ್ 21ರಂದು ಯೋಗ ಕಾರ್ಯಕ್ರಮ ಆಯೋಜಿಸಲಿದ್ದಾರೆ. ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಸಿಯಾಚಿನ್‌ನಲ್ಲಿನ 200  ಸೈನಿಕರೊಂದಿಗೆ ಈ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ....

Read More

ಪುಲ್ವಾಮದಲ್ಲಿ ಸೈನಿಕರಿಂದ 3 ಉಗ್ರರ ಹತ್ಯೆ, ಸಿಕ್ಕಿಬಿದ್ದ ಇಬ್ಬರು ಉಗ್ರರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಕಾದಾಟ ನಿರಂತರವಾಗಿ ಮುಂದುವರೆದಿದ್ದು, ಮಂಗಳವಾರ ಪುಲ್ವಾಮ ಜಿಲ್ಲೆಯ ಹಯೂನ ಟ್ರಾಲ್ ಪ್ರದೇಶದಲ್ಲಿ ಮೂರು ಉಗ್ರರನ್ನು ಸೈನಿಕರು ನೆಲಕ್ಕುರುಳಿಸಿದ್ದಾರೆ. ಇಬ್ಬರು ಉಗ್ರರು ಸೈನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಜಮ್ಮು ಕಾಶ್ಮೀರ...

Read More

ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಾಸ್ ಪಡೆದುಕೊಂಡ ಹಿನ್ನಲೆಯಲ್ಲಿ ಅಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇದಕ್ಕೆ ಅನುಮೋದನೆಯನ್ನೂ ನೀಡಿದ್ದಾರೆ. ರಾಷ್ಟ್ರಪತಿಗಳು ಬುಧವಾರ ರಾಜ್ಯಪಾಲರ ಆಳ್ವಿಕೆಗೆ ಅನುಮೋದನೆ ನೀಡಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್‌ಎನ್ ವೊಹ್ರಾ...

Read More

ಬಾಬಾ ರಾಮ್‌ದೇವ್‌ರೊಂದಿಗೆ ಯೋಗ ಮಾಡಿದ ತಿಹಾರ್ ಜೈಲಿನ ಕೈದಿಗಳು

ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರು ತಿಹಾರ್ ಜೈಲಿನ ಕೈದಿಗಳಿಗೆ ಭಾನುವಾರ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ತೊಟ್ಟು ನೂರಾರು ಕೈದಿಗಳು ಯೋಗಾಭ್ಯಾಸ ನಡೆಸಿದರು. ಕೈದಿಗಳ...

Read More

ಫಿಫಾ ವರ್ಲ್ಡ್‌ಕಪ್ ವೀಕ್ಷಿಸಲು ಇರಾನ್‌ನಿಂದ ರಷ್ಯಾಗೆ ಸೈಕಲ್ ಮೂಲಕ ತೆರಳಿದ ಕೇರಳಿಗ

ಗುವಾಹಟಿ: ಫುಟ್ಬಾಲ್‌ಗೆ ಭಾರತದಲ್ಲೂ ಹೆಚ್ಚು ಸಂಖ್ಯೆಯ ಹುಚ್ಚು ಪ್ರೇಮಿಗಳಿದ್ದಾರೆ. ತಮ್ಮ ಪ್ರೇಮವನ್ನು ಅವರು ನಾನಾ ವಿಧದಲ್ಲಿ ಹೊರ ಹಾಕುತ್ತಾರೆ. ಕೇರಳ ಮೂಲದ ಅಪ್ಪಟ ಫುಟ್ಬಾಲ್ ಅಭಿಮಾನಿಯೊಬ್ಬರು ಇರಾನ್‌ನಿಂದ ರಷ್ಯಾಗೆ ಸೈಕಲ್ ಮೂಲಕ ಪ್ರಯಾಣಿಸುತ್ತಿದ್ದಾರೆ. ಕೇವಲ ಒಂದು ಪಂದ್ಯದ ವೀಕ್ಷಣೆಗಾಗಿ ಅವರು ನಡೆಸುತ್ತಿರುವ...

Read More

ಇಯು ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ: ದೇಶದ 11 ನಗರಗಳಲ್ಲಿ ಚಿತ್ರ ಪ್ರದರ್ಶನ

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸೋಮವಾರ ನವದೆಹಲಿಯಲ್ಲಿ ಯುರೋಪಿಯನ್ ಯೂನಿಯನ್(ಇಯು) ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ ನೀಡಿದರು. ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ 23 ಯುರೋಪಿಯನ್ ರಾಷ್ಟ್ರಗಳ 24 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಭಾರತ ಮತ್ತು...

Read More

ಫುಟ್ಬಾಲ್ ವರ್ಲ್ಡ್‌ಕಪ್‌ನಲ್ಲಿ ಭಾಗಿಯಾಗಲು ಜಲಂಧರ್‌ನ 3 ಯುವತಿಯರಿಗೆ ಫಿಫಾ ಆಹ್ವಾನ

ಜಲಂಧರ್: ಫುಟ್ಬಾಲ್ ಕ್ಲಬ್‌ವೊಂದರ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಪಂಜಾಬ್‌ನ ಜಲಂಧರ್ ಮೂಲದ ಮೂವರು ಯುವತಿಯರು ರಷ್ಯಾದಲ್ಲಿ ನಡೆಯುತ್ತಿರುವ ಫುಟ್ಬಾಲ್ ವರ್ಲ್ಡ್‌ಕಪ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಫಿಫಾ ವತಿಯಿಂದಲೇ ಆಮಂತ್ರಿತರಾಗಿದ್ದಾರೆ. ರುರ‍್ಕಾ ಕಲನ್ ಎಂಬ ಫುಟ್ಬಾಲ್ ಕ್ಲಬ್‌ನೊಂದಿಗೆ ಜೊತೆಗೂಡಿ ಇವರು ಸಾಮಾಜಿಕ ಸೇವಾ...

Read More

ವಿದೇಶದಲ್ಲಿ ಶಿಕ್ಷಣ ಪಡೆಯಲು ರೂ.3.83 ಕೋಟಿ ಸ್ಕಾಲರ್‌ಶಿಪ್ ಪಡೆದ ಹಳ್ಳಿಯ ಬಡ ಹುಡುಗಿ

ಲಕ್ನೋ: ಬಡ ಚಹಾ ವ್ಯಾಪಾರಿಯ ಮಗಳೊಬ್ಬಳು ಅಮೆರಿಕಾದ ಅತ್ಯುನ್ನತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸುವ ಅವಕಾಶ ಪಡೆದುಕೊಂಡಿದ್ದಾಳೆ. ಇದಕ್ಕಾಗಿ 3.83 ಕೋಟಿ ರೂಪಾಯಿಗಳ ಸ್ಕಾಲರ್‌ಶಿಪ್ ಪಡೆದುಕೊಂಡಿದ್ದಾಳೆ. ಉತ್ತರಪ್ರದೇಶದ ಬುಲಂದ್‌ಶರ್ ಜಿಲ್ಲೆಯ ಪುಟ್ಟ ಗ್ರಾಮದವಳು ಸುದೀಕ್ಷಾ, ತನ್ನ ಗ್ರಾಮದಲ್ಲಿ ಉತ್ತಮ ಶಿಕ್ಷಣ ಪಡೆಯುವ...

Read More

ಪ್ರಧಾನಿ ಮೋದಿಯಲ್ಲಿ ನನ್ನ ತಂದೆ ಕಾಣಿಸುತ್ತಾರೆ: ಲಾಲ್ ಬಹಾದ್ದೂರ್ ಶಾಸ್ತ್ರೀ ಪುತ್ರ

ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಮಗ ಸುನೀಲ್ ಶಾಸ್ತ್ರೀ, ‘ಮೋದಿಯವರನ್ನು ಕಂಡರೆ ನನ್ನ ತಂದೆಯನ್ನು ಕಂಡಂತಾಗುತ್ತದೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಬಲಪಂಥೀಯ ಆರ್‌ಎಸ್‌ಎಸ್/ ಜನಸಂಘ ಇವೆರಡು ಬಣಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡ ಕಾಂಗ್ರೆಸ್‌ನ ಕೆಲವೇ ಕೆಲವು...

Read More

ರೊಹಿಂಗ್ಯಾಗಳು ಬರ್ಮಾದವರು, ಅವರು ಅಲ್ಲಿಗೆ ವಾಪಾಸ್ ಹೋಗಲಿ: ರಾಜನಾಥ್ ಸಿಂಗ್

ನವದೆಹಲಿ: ಯಾವುದೇ ದೇಶ ರೊಹಿಂಗ್ಯಾರನ್ನು ಸೇರಿಸಿಕೊಂಡರೆ ಅದು ಆ ದೇಶದ ನಾಗರಿಕರ ಕಲಬೆರಕೆ ಎಂದೇ ಅರ್ಥ, ರೊಹಿಂಗ್ಯಾ ಜನ ಬರ್ಮಾಕ್ಕೆ ಸೇರಿದವರಾಗಿದ್ದು, ಅವರು ಅಲ್ಲಿಗೆಯೇ ವಾಪಾಸ್ ಹೋಗಬೇಕಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಎಲ್ಲಾ ರಾಜ್ಯಗಳು ರೊಹಿಂಗ್ಯಾಗಳ ಬಯೋಮೆಟ್ರಿಕ್ ಮತ್ತು ಇತರ...

Read More

Recent News

Back To Top