ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಕ್ಟೋಬರ್ 4ರಂದು ಇಂಡೋ-ರಷ್ಯಾ ಸಮಿತ್ ಹಿನ್ನಲೆಯಲ್ಲಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಬಾರಿ ದೆಹಲಿಯಲ್ಲಿ 19ನೇ ಇಂಡೋ-ರಷ್ಯಾ ಶೃಂಗಸಭೆ ಜರುಗುತ್ತಿದೆ.
ಅ.4 ಮತ್ತು 5ರಂದು ಭಾರತದಲ್ಲಿ ಇರಲಿರುವ ಪುಟಿನ್, ಪ್ರಧಾನಿ ನರೇಂದ್ರ ಮೋದಿಯರೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಪುಟಿನ್ ಅವರ ಆಗಮನದ ಮುನ್ನವೇ ಭಾರತ ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400 ಖರೀದಿಗೆ ಅನುಮೋದನೆಯನ್ನು ನೀಡಿದೆ.
2017ರಲ್ಲಿ ರಷ್ಯಾದ ಪಿಟರ್ಸ್ಬರ್ಗ್ನಲ್ಲಿ ಈ ಶೃಂಗಸಭೆ ಜರುಗಿದ್ದು, ಪ್ರಧಾನಿ ಮೋದಿ ಇದರಲ್ಲಿ ಭಾಗಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.