ನವದೆಹಲಿ: ಖ್ಯಾತ ನೇತ್ರಶಾಸ್ತ್ರಜ್ಞ ಡಾ.ಗೋವಿಂದ ವೆಂಕಟಸ್ವಾಮಿ ಅವರ 100ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಮೂಲಕ ಗೌರವ ಸೂಚಿಸಿದೆ.
ಡಾ.ವಿ ಎಂದೇ ಕರೆಯಲ್ಪಡುತ್ತಿದ್ದ ಗೋವಿಂದ ವೆಂಕಟಸ್ವಾಮಿಯವರು, ಖ್ಯಾತ ಅರವಿಂದ್ ಐ ಹಾಸ್ಪಿಟಲ್ನ ಸಂಸ್ಥಾಪಕರು. 11 ಬೆಡ್ಗಳ ಮೂಲಕ ಆರಂಭವಾದ ಈ ಆಸ್ಪತ್ರೆ, ದೇಶದ ಕಣ್ಣಿನ ಚಿಕಿತ್ಸೆಯ ದಿಕ್ಕನ್ನೇ ಬದಲಾಯಿಸಿದೆ.
1918ರ ಅ.1ರಂದು ತಮಿಳುನಾಡಿ ವಡಮಲಪುರಮ್ನಲ್ಲಿ ಇವರು ಜನಿಸಿದರು. ಮಧುರೈ ಅಮೆರಿಕನ್ ಸ್ಕೂಲ್ನಲ್ಲಿ ಕೆಮೆಸ್ಟ್ರಿ ಕಲಿತ ಇವರು, ಬಳಿಕ 1944ರ ಮದ್ರಾಸ್ನಲ್ಲಿ ಸ್ಟಾಂನ್ಲೆ ಮೆಡಿಕಲ್ ಕಾಲೇಜ್ನಲ್ಲಿ ಎಂ.ಡಿ ಪದವಿಯನ್ನು ಪಡೆದುಕೊಂಡರು.
2006ರ ಜುಲೈ 7ರಂದು ಮಧುರೈನಲ್ಲಿ ಇವರು ಇಹಲೋಕ ತ್ಯಜಿಸಿದರು.
Source; ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.