ನ್ಯೂಯಾರ್ಕ್: 2014ರ ಪೇಶಾವರ ಸ್ಕೂಲ್ ಅಟ್ಯಾಕ್ನಲ್ಲಿ ಭಾರತದ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿಗೆ ಮುಖಕ್ಕೆ ಹೊಡೆದಂತೆ ಪ್ರತಿಕ್ರಿಯೆ ನೀಡಿದ್ದಾರೆ ಭಾರತದ ವಿಶ್ವಸಂಸ್ಥೆ ಮಿಶನ್ನ ಮೊದಲ ಕಾರ್ಯದರ್ಶಿ ಎನಮ್ ಗಂಭೀರ್.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡುವ ಸಲುವಾಗಿ ‘ಪ್ರತಿಕ್ರಿಯಿಸುವ ಹಕ್ಕ’ನ್ನು ಬಳಸಿಕೊಂಡ ಭಾರತ, ಎನಮ್ ಅವರ ಮೂಲಕ ತಕ್ಕ ಪ್ರತಿಕ್ರಿಯೆಯನ್ನೇ ನೀಡಿದೆ.
‘ನಾಲ್ಕು ವರ್ಷಗಳ ಹಿಂದೆ ಪೇಶಾವರ ಶಾಲೆಯ ಮೇಲೆ ನಡೆದ ದಾಳಿಯ ಬಗ್ಗೆ ಅಪ್ರಾಮಾಣಿಕವಾದ ಆರೋಪಗಳನ್ನು ಮಾಡಲಾಗುತ್ತಿದೆ. 2014ರ ಈ ಘಟನೆಯ ಬಗ್ಗೆ ಭಾರತ ಪಟ್ಟ ನೋವು ಮತ್ತು ದುಃಖವನ್ನು ಪಾಕಿಸ್ಥಾನದ ಹೊಸ ಸರ್ಕಾರಕ್ಕೆ ನೆನಪಿಸಲು ಬಯಸುತ್ತೇನೆ. ಮೃತರಾದವರಿಗೆ ಭಾರತದ ಉಭಯ ಸದನಗಳು ಸಂತಾಪ ಸೂಚಿಸಿ ಗೌರವಿಸಿದವು. ನಮ್ಮ ದೇಶದಾದ್ಯಂತ ಶಾಲೆಗಳು ಮೌನಾಚರಣೆ, ಮೇಣದ ಬತ್ತಿ ಬೆಳಗಿಸಿ ಘಟನೆಯನ್ನು ಖಂಡಿಸಿದರು’ ಎಂದಿದ್ದಾರೆ.
ಹಳತಿನ ಪಡಿಅಚ್ಚಿನಲ್ಲೇ ಹೊಸ ಪಾಕಿಸ್ಥಾನ ಸಾಗುತ್ತಿದೆ, ಭಯ ಭೂತವನ್ನು ಸೃಷ್ಟಿಸಿ ಈಗ ಅದನ್ನು ಅಲ್ಲಗೆಳೆಯುತ್ತಿದೆ ಎಂದಿದ್ದಾರೆ.
source; indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.