ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) 2017-18ರ ಹಣಕಾಸು ವರ್ಷದಲ್ಲಿ ಅತ್ಯಧಿಕ ಪ್ರಮಾಣದ ವಹಿವಾಟನ್ನು ದಾಖಲಿಸಿದೆ. ಈ ಸಾಲಿನಲ್ಲಿ ಅದು ರೂ.18,28,386 ಲಕ್ಷ ವಹಿವಾಟು ನಡೆಸಿದೆ. ಹಿಂದಿನ ವರ್ಷ ಅದು ರೂ.17,60,379 ಲಕ್ಷ ವಹಿವಾಟು ನಡೆಸಿತ್ತು.
ಎಚ್ಎಎಲ್ ನೀಡಿದ ಮಾಹಿತಿ ಪ್ರಕಾರ, ಸು-30 ಎಂಕೆಐ, ಎಲ್ಸಿಎ ತೇಜಸ್, ಡಾರ್ನಿಯರ್ ಡು-228, ಎಎಲ್ಎಚ್ ಧ್ರುವ್, ಚೀತಲ್ ಹೆಲಿಕಾಪ್ಟರ್ ಸೇರಿದಂತೆ ಈ ವರ್ಷ ಸುಮಾರು 60 ಏರ್ಕ್ರಾಫ್ಟ್, ಹೆಲಿಕಾಫ್ಟರ್ಗಳನ್ನು ಉತ್ಪಾದನೆ ಮಾಡಿದೆ.
ಅಲ್ಲದೇ, ಸ್ಪೇಸ್ ಪ್ರೋಗ್ರಾಂಗಳಿಗಾಗಿ 105 ಹೊಸ ಎಂಜಿನಿಗಳನ್ನು, 146 ಹೊಸ ಏರೋ ಸ್ಟ್ರಕ್ಚರ್ಗಳನ್ನು ಅದು ಉತ್ಪಾದನೆ ಮಾಡಿದೆ.
ಶುಕ್ರವಾರ ಬೆಂಗಳೂರಿನ ಎಚ್ಎಎಲ್ ಮ್ಯಾನೇಜ್ಮೆಂಟ್ ಅಕಾಡಮಿಯ 55ನೇ ವಾರ್ಷಿಕ ಮಹಾಮಂಡಳಿ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.