News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನದಲ್ಲಿ ಆತ್ಮಾಹುತಿ ದಾಳಿ: 24 ಮಂದಿ ಸಾವು

ನವದೆಹಲಿ: ವಾಯುವ್ಯ ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಇಂದು ಮುಂಜಾನೆ ಭಯೋತ್ಪಾದಕರ ಗುಂಪೊಂದು ಸ್ಫೋಟಕ ತುಂಬಿದ ವಾಹನವನ್ನು ಪೊಲೀಸ್ ಠಾಣೆಯ ಮುಖ್ಯ ಗೇಟ್‌ಗೆ ಡಿಕ್ಕಿ ಹೊಡೆದು ಕನಿಷ್ಠ 24  ಅಧಿಕಾರಿಗಳನ್ನು ಕೊಂದಿದೆ. ಸ್ಫೋಟದಲ್ಲಿ 34 ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ....

Read More

ನ್ಯೂಜಿಲ್ಯಾಂಡ್‌: ಭಾರತೀಯ ಮೂಲದ ನಿರೂಪಕನ ಹತ್ಯೆಗೆ ಯತ್ನಿಸಿದ 3 ಖಲಿಸ್ಥಾನಿ ಉಗ್ರರಿಗೆ ಶಿಕ್ಷೆ

ನವದೆಹಲಿ : ಖಲಿಸ್ತಾನ್ ಸಿದ್ಧಾಂತದ ವಿರುದ್ಧ ಮಾತನಾಡಿದ ನ್ಯೂಜಿಲ್ಯಾಂಡ್ ಆಕ್ಲೆಂಡ್‌ನ ಜನಪ್ರಿಯ ಸಿಖ್ ರೇಡಿಯೊ ನಿರೂಪಕನನ್ನು ಡಿಸೆಂಬರ್ 23ರಂದು ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ಕ್ರೂರವಾಗಿ ಇರಿದಿತ್ತು. ರೇಡಿಯೋ ನಿರೂಪಕ ಹರ್ನೆಕ್ ಸಿಂಗ್ ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಬದುಕುಳಿದಿದ್ದಾರೆ. ಆಸ್ಟ್ರೇಲಿಯಾ ಟುಡೆ...

Read More

ಕದನ ವಿರಾಮ ಅಂತ್ಯ: ಮತ್ತೆ ಗಾಜಾದಲ್ಲಿ ಬಾಂಬ್‌ಗಳ ಸದ್ದು

ಗಾಜಾ: ಇಸ್ರೇಲ್ ಹಾಗೂ ಹಮಾಸ್​ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಕೊನೆಗೊಂಡಿದ್ದು, ಮತ್ತೆ ಗಾಜಾದಲ್ಲಿ ಯುದ್ಧ ಪ್ರಾರಂಭವಾಗಿದೆ. ನವೆಂಬರ್ 24 ರಂದು ಮೊದಲು ನಾಲ್ಕು ದಿನಗಳ ಕದನ ವಿರಾಮ ಘೋಷಿಸಲಾಗಿತ್ತು, ಅದಾದ ಬಳಿಕ ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು....

Read More

ಇಸ್ರೇಲ್-ಹಮಾಸ್‌ ನಡುವೆ ಕದನವಿರಾಮ ಮತ್ತೆ 2 ದಿನ ವಿಸ್ತರಣೆ: ಮತ್ತಷ್ಟು ಒತ್ತೆಯಾಳುಗಳ ಬಿಡುಗಡೆ

ದೋಹಾ: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಎರಡು ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಈ ಘೋಷಣೆ ಹೊರಬಿದ್ದ ಗಂಟೆಗಳ ನಂತರ ಗಾಜಾ ಪಟ್ಟಿಯಲ್ಲಿ ಬಿಡುಗಡೆಯಾದ 11 ಒತ್ತೆಯಾಳುಗಳು ಸುರಕ್ಷಿತವಾಗಿ ಆಗಮಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೋಮವಾರ...

Read More

ನ್ಯೂಜಿಲೆಂಡ್ ಪ್ರಧಾನಿಯಾಗಿ ಕ್ರಿಸ್ಟೋಫರ್ ಲುಕ್ಸನ್ ಪ್ರಮಾಣವಚನ

ವಿಲ್ಲಿಂಗ್ಟನ್‌: ಕ್ರಿಸ್ಟೋಫರ್ ಲುಕ್ಸನ್ ಇಂದು ನ್ಯೂಜಿಲೆಂಡ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ಅಧ್ಯಕ್ಷತೆಯನ್ನು ಗವರ್ನರ್ ಜನರಲ್ ಸಿಂಡಿ ಕಿರೋ ವಹಿಸಿದ್ದರು. ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಎರಡು ಸಣ್ಣ ಪಕ್ಷಗಳೊಂದಿಗೆ ಅವರ ರಾಷ್ಟ್ರೀಯ ಪಕ್ಷವು...

Read More

ಇಸ್ರೇಲ್‌ ಪ್ರಧಾನಿಯನ್ನು ಭೇಟಿಯಾಗಲಿರುವ ಎಲೋನ್‌ ಮಸ್ಕ್

ನ್ಯೂಯಾರ್ಕ್‌:   ಟೆಕ್ ಉದ್ಯಮಿ ಮತ್ತು ಎಕ್ಸ್‌ ಸಾಮಾಜಿಕ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಇಂದು ಭೇಟಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಎಕ್ಸ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ...

Read More

‘ಪ್ರಾಫೆಟ್ ಸಾಂಗ್’ ಕಾದಂಬರಿಗಾಗಿ‌ ಬೂಕರ್ ಪ್ರಶಸ್ತಿ ಗೆದ್ದ ಐರಿಶ್‌ ಲೇಖಕ

ಲಂಡನ್‌: ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ  ಐರಿಶ್ ಬರಹಗಾರ ಪಾಲ್ ಲಿಂಚ್ ಅವರು ತಮ್ಮ ‘ಪ್ರಾಫೆಟ್ ಸಾಂಗ್’ ಕಾದಂಬರಿಗಾಗಿ 2023 ರ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲಂಡನ್ ಮೂಲದ ಭಾರತೀಯ ಸಂಜಾತ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ...

Read More

ಗಾಜಾ ಪಟ್ಟಿಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದ ಇಸ್ರೇಲ್‌ ಪ್ರಧಾನಿ

ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಗಾಜಾ ಪಟ್ಟಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಭದ್ರತಾ ಪಡೆಗಳನ್ನು ಭೇಟಿ ಮಾಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಬೆಂಜಮಿನ್ ನೆತನ್ಯಾಹು ಅವರು ಸೈನಿಕರು ಮತ್ತು ಕಮಾಂಡರ್‌ಗಳೊಂದಿಗೆ ಮಾತನಾಡಿದರು ಮತ್ತು ಅವರ...

Read More

ಗಾಜಾದಲ್ಲಿ ಹಮಾಸ್ ವಶದಲ್ಲಿದ್ದ 24 ಒತ್ತೆಯಾಳುಗಳ ಬಿಡುಗಡೆ

ಟೆಲ್‌ ಅವಿವ್‌: ಇಸ್ರೇಲ್-ಹಮಾಸ್ ಕದನ ವಿರಾಮದ ಮೊದಲ ದಿನದಂದು, ಹಮಾಸ್ ವಶದಲ್ಲಿದ್ದ ಒಟ್ಟು 24 ಒತ್ತೆಯಾಳುಗಳನ್ನು ಶುಕ್ರವಾರ ಗಾಜಾದಿಂದ ಬಿಡುಗಡೆ ಮಾಡಲಾಗಿದೆ. ಉಗ್ರಗಾಮಿ ಗುಂಪು ಬಿಡುಗಡೆ ಮಾಡಿದ ಒತ್ತೆಯಾಳುಗಳ ಮೊದಲ ಬ್ಯಾಚ್‌ನಲ್ಲಿ 13 ಇಸ್ರೇಲಿಗಳು, 10 ಥಾಯ್ ಪ್ರಜೆಗಳು ಮತ್ತು ಒಬ್ಬ...

Read More

ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಇಂದು ಪ್ರಾರಂಭ

ಟೆಲ್‌ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮವು ಇಂದು ಪ್ರಾರಂಭವಾಗಲಿದೆ.  ಗಾಜಾ ಪಟ್ಟಿಯಲ್ಲಿ ಯುದ್ಧವು 49 ನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕು ದಿನಗಳ ಕದನ ವಿರಾಮಕ್ಕೆ ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಇದರಡಿ ಇಂದು ನಾಗರಿಕ ಒತ್ತೆಯಾಳುಗಳು ಮತ್ತು...

Read More

Recent News

Back To Top