ಟೆಹ್ರಾನ್: ಇಸ್ರೇಲ್ ಪಾಲಿಗೆ ಮಹಾನ್ ಕಂಟಕವಾಗಿದ್ದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಇರಾನ್ನ ಟೆಹ್ರಾನ್ನಲ್ಲಿರುವ ನಿವಾಸದಲ್ಲಿ ಬುಧವಾರ ಬೆಳಗಿನ ಜಾವ ಕೊಲೆಗೀಡಾಗಿದ್ದಾನೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಇರಾನ್ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಈ ಹತ್ಯೆಯನ್ನು ದೃಢಪಡಿಸಿದೆ.
ಇಸ್ಮಾಯಿಲ್ ಹನಿಯೆಹ್ ಜೊತೆಗೆ ಆತನ ಅಂಗರಕ್ಷಕರಲ್ಲಿ ಒಬ್ಬ ಕೂಡ ಕೊಲೆಗೀಡಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಉಗ್ರಗಾಮಿ ಗುಂಪಿನ ಮುಖ್ಯಸ್ಥನ ಹತ್ಯೆ ಬಗ್ಗೆ ಇರಾನ್ನ ರೆವಲ್ಯೂಷನರಿ ಗಾರ್ಡ್ಗಳು ಮಾಹಿತಿ ನೀಡಿದ ನಂತರ ಹಮಾಸ್ನಿಂದಲೂ ದೃಢೀಕರಣ ಬಂದಿದೆ. ನಿನ್ನೆ ಟೆಹ್ರಾನ್ನಲ್ಲಿ ನಡೆದ ಇರಾನ್ನ ನೂತನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪದಗ್ರಹಣ ಸಮಾರಂಭದಲ್ಲಿ ಹನಿಯೆಹ್ ಭಾಗವಹಿಸಿದ್ದರು.
ಇಸ್ಮಾಯಿಲ್ ಹನಿಯೆಹ್, ಕುಖ್ಯಾತ ಉಗ್ರಗಾಮಿ ಸಂಘಟನೆ ಹಮಾಸ್ನ ರಾಜಕೀಯ ನಾಯಕ. ಏಪ್ರಿಲ್ನಲ್ಲಿ ನಡೆದ ವಾಯುದಾಳಿಯಲ್ಲಿ ಈತನ ಮೂವರು ಪುತ್ರರು ಸಾವಿಗೀಡಾಗಿದ್ದಾರೆ. ಈದ್ ಅಲ್-ಫಿತರ್ನ ಮೊದಲ ದಿನದಂದು ಶಾತಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಹನಿಯೆಹ್ ಅವರ ನಾಲ್ವರು ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.