ಟೆಕ್ಸಾಸ್: ಇತ್ತೀಚೆಗೆ ಅಮೆರಿಕಾದ ಹೂಸ್ಟನ್ ಬಳಿ 90 ಅಡಿ ಎತ್ತರದ ಭಗವಾನ್ ಹನುಮಂತನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ʼಸ್ಟ್ಯಾಚು ಆಫ್ ಯೂನಿಯನ್ʼ ಎಂದು ಕರೆಯಲ್ಪಡುವ ಈ ಮೂರ್ತಿ ಅಮೆರಿಕಾದ ಮೂರನೇ ಅತಿ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ಭಾರತದ ಹೊರಗಿನ ಅತಿ ಎತ್ತರದ ಹನುಮಾನ್ ಪ್ರತಿಮೆ ಎಂಬ ಖ್ಯಾತಿಯನ್ನೂ ಹೊಂದಿದೆ, ಟೆಕ್ಸಾಸ್ನಲ್ಲಿ ಅತಿ ಎತ್ತರದ ಪ್ರತಿಮೆಯಾಗಿ ಹೊರಹೊಮ್ಮಿದೆ ಮತ್ತು ನ್ಯೂಯಾರ್ಕ್ನ ಲಿಬರ್ಟಿ ಪ್ರತಿಮೆ (151 ಅಡಿ) ಮತ್ತು ಫ್ಲೋರಿಡಾದ ಹಾಲಂಡೇಲ್ ಬೀಚ್ನಲ್ಲಿರುವ ಪೆಗಾಸಸ್ ಮತ್ತು ಡ್ರ್ಯಾಗನ್ ಪ್ರತಿಮೆ (110 ಅಡಿ)ಯ ಬಳಿಕ ಎತ್ತರದಲ್ಲಿ ಮೂರನೇ ಸ್ಥಾನದಲ್ಲಿದೆ
ಹೂಸ್ಟನ್ನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಶುಗರ್ ಲ್ಯಾಂಡ್ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಅನಾವರಣಗೊಂಡ ಈ ಪ್ರತಿಮೆಯನ್ನು ಆಗಸ್ಟ್ 15 ರಿಂದ 18 ರವರೆಗೆ ನಡೆದ ಭವ್ಯವಾದ ಪ್ರಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭದಲ್ಲಿ ಪರಿಚಯಿಸಲಾಯಿತು. “ಯೂನಿಯನ್ ಸ್ಟ್ಯಾಚು” “ನಿಸ್ವಾರ್ಥತೆ, ಭಕ್ತಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಸಂಘಟಕರ ಪ್ರಕಾರ, ಭಗವಾನ್ ರಾಮ ಮತ್ತು ಸೀತೆಯನ್ನು ಮತ್ತೆ ಒಂದುಗೂಡಿಸುವಲ್ಲಿ ಹನುಮಂತನ ನಿರ್ಣಾಯಕ ಪಾತ್ರವನ್ನು ಗೌರವಿಸುವ ಸಲುವಾಗಿ “ಸ್ಟ್ಯಾಚು ಆಫ್ ಯೂನಿಯನ್ʼ ಎಂಬ ಹೆಸರನ್ನು ಇಡಲಾಗಿದೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಮತ್ತು ಖ್ಯಾತ ವೇದ ವಿದ್ವಾಂಸರೂ ಆದ ಪರಮಪೂಜ್ಯ ಶ್ರೀ ಚಿನ್ನಜೀಯರ ಸ್ವಾಮೀಜಿಯವರ ಕನಸಿನ ಕೂಸಾಗಿ ಈ ಪ್ರತಿಮೆ ಅನಾವರಣಗೊಂಡಿದೆ. ಸ್ವಾಮೀಜಿ ಈ ಯೋಜನೆಯನ್ನು ಉತ್ತರ ಅಮೆರಿಕಾದ ಆಧ್ಯಾತ್ಮಿಕ ಕೇಂದ್ರಬಿಂದುವಾಗಿ ರೂಪಿಸಿದರು, ಎಲ್ಲಾ ವರ್ಗಗಳ ಭಕ್ತರನ್ನು ಒಟ್ಟುಗೂಡಿಸುವ ಗುರಿಯನ್ನು ಅವರು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.