ನವದೆಹಲಿ: ಎರಡು ದಿನಗಳ ರಷ್ಯಾ ಪ್ರವಾಸವನ್ನು ಮುಗಿಸಿಕೊಂಡು ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರಿಯಾ ತಲುಪಿದ್ದಾರೆ. ಹೋಟೆಲ್ನಲ್ಲಿ ಆಸ್ಟ್ರಿಯಾದ ಕಲಾವಿದರು ವಂದೇ ಮಾತರಂ ನುಡಿಸುವ ಮೂಲಕ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ವಿಯೆನ್ನಾದ ರಿಟ್ಜ್-ಕಾರ್ಲ್ಟನ್ ಹೋಟೆಲ್ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಹೋಟೆಲ್ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಸ್ವಾಗತಿಸಿದರು. ಅವರು ಹೋಟೆಲ್ಗೆ ಆಗಮಿಸಿದ ನಂತರ, ಆಸ್ಟ್ರಿಯಾದ ಕಲಾವಿದರು ವಂದೇ ಮಾತರಂ ಹಾಡಿ ಅವರನ್ನು ಸ್ವಾಗತಿಸಿದರು.
41 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಇಂದಿರಾ ಗಾಂಧಿ ಅವರು 1983 ರಲ್ಲಿ ದೇಶಕ್ಕೆ ಭೇಟಿ ನೀಡಿದ ಕೊನೆಯ ಪ್ರಧಾನಿ.
ಪಿಎಂ ಮೋದಿ ಅವರು ವಿಯೆನ್ನಾದಲ್ಲಿ ಬಂದಿಳಿದ ಕೂಡಲೇ ಈ ಪ್ರವಾಸವನ್ನು “ವಿಶೇಷ” ಎಂದು ಉಲ್ಲೇಖಿಸಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದಲ್ಲದೆ, ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಮತ್ತು ಆಸ್ಟ್ರಿಯಾದಲ್ಲಿನ ಭಾರತೀಯ ಸಮುದಾಯದೊಂದಿಗೆ ಉನ್ನತ ಮಟ್ಟದ ಮಾತುಕತೆಗಳು ಮತ್ತು ಸಂವಾದಗಳು ಸೇರಿದಂತೆ ತಮ್ಮ ಭೇಟಿಯ ಸಮಯದಲ್ಲಿ ಯೋಜಿಸಲಾದ ವಿವಿಧ ಚಟುವಟಿಕೆಗಳ ಬಗ್ಗೆ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.
#WATCH | Austrian artists sing Vande Mataram to welcome Prime Minister Narendra Modi, as he arrives at the hotel Ritz-Carlton in Vienna. pic.twitter.com/mza5OHMrWY
— ANI (@ANI) July 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.