Date : Tuesday, 15-12-2015
ಬರ್ಲಿನ್: ಹ್ಯಾಂಬರ್ಗ್‌ನಲ್ಲಿ ಫೇಸ್‌ಬುಕ್ ಕಚೇರಿಯನ್ನು ಹೊಂದಿರುವ ಕಟ್ಟಡದ ಮೇಲೆ ವಿಧ್ವಂಸಕರಿಂದ ದಾಳಿ ನಡೆದಿದೆ. ಕಚೇರಿಗಳ ಗಾಜುಗಳಿಗೆ ಕಲ್ಲು ಎಸೆಯಲಾಗಿದ್ದು, ಗಾಜುಗಳು ಒಡೆದಿವೆ. ಕಟ್ಟಡದ ಗೋಡೆಗಳ ಮೇಲೆ ಪೇಂಟ್ ಎರಚಲಾಗಿದೆ ಹಾಗೂ ಫೇಸ್‌ಬುಕ್ ಡಿಸ್‌ಲೈಕ್’ ಎಂದು ಬಣ್ಣ ಸಿಂಪಡಿಸಲಾಗಿದೆ ಎಂದು ಜರ್ಮನಿ ನಗರ...
Date : Tuesday, 15-12-2015
ನ್ಯೂಯಾರ್ಕ್: ಭಯೋತ್ಪಾದಕ ಸಂಘಟನೆ ಇಸಿಸ್ ನಿರ್ನಾಮ ಮಾಡುವುದರ ಜೊತೆಗೆ, ಅದರ ನಾಯಕರನ್ನು ಹತ್ಯೆಗೈಯುವ ಮೂಲಕ ಮಧ್ಯ ಪ್ರಾಚ್ಯದ ಪ್ರದೇಶಗಳನ್ನು ಮರಳಿ ಪಡೆಯುತ್ತೇವೆ ಎಂದು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಅಮೇರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಇರಾಕ್ ಮತ್ತು ಸಿರಿಯಾದಲ್ಲಿ...
Date : Monday, 14-12-2015
ಸಿಂಗಾಪುರ: ಗುಟ್ಕಾ, ಕೈನಿ, ಝರ್ದಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ಸಿಂಗಾಪುರ ಸಂಪೂರ್ಣವಾಗಿ ನಿಷೇಧಕ್ಕೊಳಪಡಿಸಿದೆ. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ತಂಬಾಕು ಉತ್ಪನ್ನಗಳು ಬೆವಣಿಗೆ ಕಾಣಬಾರದು ಎಂಬ ಕಾರಣಕ್ಕೆ ಅವುಗಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾಗಿ ಅಲ್ಲಿನ ಪತ್ರಿಕೆ ವರದಿ ಮಾಡಿದೆ....
Date : Monday, 14-12-2015
ಜಕಾರ್ತಾ: ಮೋಟಾರ್ ದೋಣಿಯೊಂದು ಮುಳುಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ಸಂಭವಿಸಿದೆ. ಕಪಾಸ್ ನದಿ ಭಾಗದಲ್ಲಿ ಸುಮಾರು 53 ಮಂದಿಯನ್ನು ಒಯ್ಯುತ್ತಿದ್ದ ಈ ದೋಣಿ ಮರದ ದಿಮ್ಮಿಗೆ ಅಪ್ಪಳಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು...
Date : Saturday, 12-12-2015
ಹಾಂಗ್‌ಕಾಂಗ್: ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಹಾಂಗ್‌ಕಾಂಗ್‌ನ ಪ್ರಮುಖ ಆಂಗ್ಲ ಭಾಷಾ ದಿನಪತ್ರಿಕೆ ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ)ನ್ನು ಖರೀದಿಸಲು ಒಪ್ಪಿಕೊಂಡಿದೆ. ಹಾಂಗ್‌ಝೌ ಮೂಲದ ಕಂಪೆನಿ 112 ವರ್ಷಗಳಷ್ಟು ಹಳೆಯ ಪತ್ರಿಕೆ ಮತ್ತು ಇತರ ಮಾಧ್ಯಮ ಆಸ್ತಿಗಳನ್ನು ಖರೀದಿಸಲಿದೆ ಎಂದು ಎಸ್‌ಸಿಎಂಪಿ...
Date : Saturday, 12-12-2015
ರಿಯಾದ್: ಇದೇ ಮೊತ್ತ ಮೊದಲ ಬಾರಿಗೆ ಸೌದಿಯಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಮತ್ತು ಚುನಾವಣೆಗೆ ನಿಲ್ಲುವ ಅವಕಾಶ ದೊರೆತಿದೆ. ಶನಿವಾರ ಸೌದಿಯಲ್ಲಿ ಮುನ್ಸಿಪಲ್ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ. 130,637 ಮಹಿಳೆಯರು ಮತದಾನಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಮತ್ತು 979...
Date : Friday, 11-12-2015
ವಾಷಿಂಗ್ಟನ್: ಅಮೆರಿಕನ್ನರು ಭಯೋತ್ಪಾದನೆಯ ಬಗ್ಗೆ ಹೆಚ್ಚು ಭಯಭೀತರಾಗಿದ್ದಾರೆ. ಮತ್ತೊಂದು ದೊಡ್ಡ ಭಯೋತ್ಪಾದನ ದಾಳಿ ನಮ್ಮ ದೇಶದಲ್ಲಿ ನಡೆಯಬಹುದು ಎಂಬ ಆತಂಕ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅಲ್ಲಿನ ಜನತೆಯ ಈ ಭಯ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ...
Date : Friday, 11-12-2015
ಢಾಕಾ: ಮೂರು ವಾರಗಳ ನಿಷೇಧದ ಬಳಿಕ ಇದೀಗ ಬಾಂಗ್ಲಾದೇಶ ಫೇಸ್‌ಬುಕ್ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದೆ. ಅಲಿ ಹಸನ್ ಮೊಹಮ್ಮದ್ ಮೊಜಹೀದ್ ಮತ್ತು ಸಲಾವುದ್ದೀನ್ ಖ್ವಾದರ್ ಚೌಧರಿ ಎಂಬ ಇಬ್ಬರು ಪ್ರತಿಪಕ್ಷದ ನಾಯಕರ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು, ಈ...
Date : Friday, 11-12-2015
ನ್ಯೂಯಾರ್ಕ್: ಫೇಸ್‌ಬುಕ್ ತನ್ನ ನ್ಯೂಸ್ ಫೀಡ್ ವಿಭಾಗವನ್ನು ನಿಧಾನ ಗತಿಯ 2ಜಿ ಸಂಪರ್ಕ, ಅಥವಾ ಕನೆಕ್ಟಿವಿಟಿ ಕಳೆದುಕೊಂಡ ವೇಳೆ ಬಳಕೆದಾರರು ವೀಕ್ಷಿಸುವಂತೆ ಅನುಕೂಲಕರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅದು ತಿಳಿಸಿದೆ. 2ಜಿ ಸಂಪರ್ಕ ಹೊಂದಿದ ಬಳಕೆದಾರರು ಸದ್ಯದಲ್ಲೇ ಡೌನ್‌ನ್‌ಲೋಡ್ ಮಾಡಿಕೊಂಡ ಆದರೆ...
Date : Thursday, 10-12-2015
ಕರಾಚಿ: ಪ್ರಸ್ತಾಪಗೊಂಡಿರುವ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಗೆ ಮುಂದಿನ ಎರಡು ದಿನಗಳೊಳಗೆ ಭಾರತ ಸರ್ಕಾರ ಅನುಮೋದನೆ ನೀಡದೇ ಹೋದರೆ ಈ ಬಗೆಗಿನ ಮಾತುಕತೆಗೆ ಅಂತ್ಯ ಹಾಡುವುದಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಭಾರತದ ವಿದೇಶಾಂಗ ಸಚಿವೆ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್...