ವಾಷಿಂಗ್ಟನ್: ಅಮೆರಿಕನ್ನರು ಭಯೋತ್ಪಾದನೆಯ ಬಗ್ಗೆ ಹೆಚ್ಚು ಭಯಭೀತರಾಗಿದ್ದಾರೆ. ಮತ್ತೊಂದು ದೊಡ್ಡ ಭಯೋತ್ಪಾದನ ದಾಳಿ ನಮ್ಮ ದೇಶದಲ್ಲಿ ನಡೆಯಬಹುದು ಎಂಬ ಆತಂಕ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅಲ್ಲಿನ ಜನತೆಯ ಈ ಭಯ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಹೆಚ್ಚುವುದಕ್ಕೆ ಕಾರಣವಾಗಿದೆ.
ಅಮೆರಿಕ ಪ್ರವೇಶಿಸದಂತೆ ಮುಸ್ಲಿಮರಿಗೆ ನಿರ್ಬಂಧ ಹೇರಬೇಕು ಎಂದು ಡೊನಾಲ್ಡ್ ಇತ್ತೀಚಿಗೆ ನೀಡಿದ್ದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು, ಅವರ ಹೇಳಿಕೆಯನ್ನು ರಾಜಕೀಯ ವಿರೋಧಿಗಳು, ಜಾಗತಿಕ ನಾಯಕರು ಖಂಡಿಸಿದರು. ಆದರೆ ಈ ಹೇಳಿಕೆಯಿಂದಾಗಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಳವಾಗಿದೆ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಬಿಎಸ್ ಸಮೀಕ್ಷೆಗಳು ತಿಳಿಸಿದೆ.
ಅಮೆರಿಕಾದ ದಕ್ಷಿಣ ಕೊರೊಲಿನಾ ಭಾಗದಲ್ಲಿ ಅವರ ಜನಪ್ರಿಯತೆ ಶೇ.೩೫ರಷ್ಟು ವೃದ್ಧಿಸಿದೆ ಎಂದು ಫಾಕ್ಸ್ ನ್ಯೂಸ್ ತಿಳಿಸಿದೆ.
ಕ್ಯಾಲಿಫೋರ್ನಿಯಾ ದಾಳಿಯ ಮೊದಲು ಕೇವಲ ಶೇ.೪ರಷ್ಟು ಅಮೆರಿಕನ್ನರು ಭಯೋತ್ಪಾದನೆ ದೊಡ್ಡ ಬೆದರಿಕೆ ಎಂದಿದ್ದರು, ಆದರೆ ಇದೀಗ ಶೇ.೧೯ರಷ್ಟು ಅಮೆರಿಕನ್ನರು ಭಯೋತ್ಪಾದನೆ ದೊಡ್ಡ ಬೆದರಿಕೆ ಎನ್ನುತ್ತಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.