ಸಿಂಗಾಪುರ: ಗುಟ್ಕಾ, ಕೈನಿ, ಝರ್ದಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ಸಿಂಗಾಪುರ ಸಂಪೂರ್ಣವಾಗಿ ನಿಷೇಧಕ್ಕೊಳಪಡಿಸಿದೆ.
ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ತಂಬಾಕು ಉತ್ಪನ್ನಗಳು ಬೆವಣಿಗೆ ಕಾಣಬಾರದು ಎಂಬ ಕಾರಣಕ್ಕೆ ಅವುಗಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾಗಿ ಅಲ್ಲಿನ ಪತ್ರಿಕೆ ವರದಿ ಮಾಡಿದೆ.
ಎರಡು ಹಂತದಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವುದಾಗಿ ಈ ಹಿಂದ ಅಲ್ಲಿನ ಸರ್ಕಾರ ಘೋಷಣೆ ಮಾಡಿತ್ತು. ಮೊದಲ ಹಂತದಲ್ಲಿ ಹೊಗೆ ರಹಿತ ಸಿಗರೇಟು, ನಿಕೋಟಿನ್ ಮತ್ತು ತಂಬಾಕು ಹೊಂದಿದ ಇತರ ಉತ್ಪನ್ನಗಳನ್ನು ನಿಷೇಧಿಸಿದೆ.
ಎರಡನೇ ಹಂತದಲ್ಲಿ ನಸಲ್ ಸ್ನಫ್, ಓರಲ್ ಸ್ನಫ್, ಗುಟ್ಕಾ, ಕೈನಿ, ಝರ್ದಾಗಳನ್ನು ನಿಷೇಧಿಸುವುದಾಗಿ ಹೇಳಿದೆ.
ನಿಷೇಧವನ್ನು ಉಲ್ಲಂಘಿಸಿದವರಿಗೆ ೧೦ ಸಾವಿರ ಸಿಂಗಾಪುರ್ ಡಾಲರ್ ದಂಡ ಮತ್ತು ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸೆರೆವಾಸ ನೀಡುವುದಾಗಿ ಘೋಷಿಸಲಾಗಿದೆ. ಎರಡನೇ ಬಾರಿಗೆ ತಪ್ಪೆಸಗುವವರಿಗೆ ದಂಡ ದುಪ್ಪಟ್ಟುಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.