Date : Sunday, 02-10-2016
ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ತಮ್ಮ ಹದಿಹರೆಯದಲ್ಲಿ ರಾಷ್ಟ್ರೀಯ ಚಳುವಳಿಯ ಭಾಗವಾಗಿ ಮೊದಲ ಬಾರಿಗೆ ರಾಜಕೀಯಕ್ಕೆ ಸೇರಿದರು. ಬಹುಕಾಲದ ವರೆಗೆ ಸತ್ಯಾಗ್ರಹಿಯಾಗಿದ್ದ ಅವರು, ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಅಡಿಯಲ್ಲಿ ಸ್ವತಂತ್ರ ಭಾರತದ ಸರ್ಕಾರವನ್ನು ಸೇರಿದರು....
Date : Thursday, 29-09-2016
ಎಲ್ಲಿಂದ ಶಸ್ತ್ರ ತೂರಿ ಬಂತೋ ಅಲ್ಲೇ ನುಗ್ಗಿ ಬಗ್ಗುಬಡಿಯುವುದು! ಈ ಹೇಳಿಕೆ ಮಾತನಾಡಲೇನೋ ಸುಲಭ. ಆದರೆ ಆಚರಣೆ ಬಹಳ ಕಷ್ಟ. ಆದರೆ ಭಾರತ ಇದನ್ನು ಮಾಡಿ ತೋರಿಸಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಕೇವಲ ಹದಿನೆಂಟು ದಿನಗಳಲ್ಲೇ ತಿರುಗೇಟು ನೀಡಿದ್ದಾರೆ. ಭಾರತೀಯರನ್ನು...
Date : Thursday, 29-09-2016
ಈ ಸಣ್ಣ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಟುಂಬದಲ್ಲೂ ಬಹುತೇಕ ಓರ್ವ ಸದಸ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಮನೆಗಳ ನಾಲ್ಕು ಸದಸ್ಯರೂ ಸೇನೆಯಲ್ಲಿದ್ದಾರೆ. ಪ್ರಸ್ತುತ ಈ ಗ್ರಾಮದ ಸುಮಾರು 109ಸದಸ್ಯರು (65 ಮಂದಿ ಸೇನೆಯಲ್ಲಿ, ಇತರರು ಆಡಳಿತ ಹುದ್ದೆಯಲ್ಲಿ) ಭಾರತೀಯ...
Date : Wednesday, 28-09-2016
ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ಅಗ್ರಗಣ್ಯ. ಇಂದು ಆ ಮಹಾನ್ ಕ್ರಾಂತಿಕಾರಿಯ ಜನ್ಮದಿನ. ಭಾರತಾಂಬೆಗೆ ತನ್ನ ಸರ್ವಸ್ವವನ್ನು ಅರ್ಪಿಸಿದ ಭಗತ್ಗೆ ಈ ಅಂಕಣವು ಸಮರ್ಪಿತ. ಭಗತ್ ಸಿಂಗ್ ಕಿರು ಪರಿಚಯ ಜನನ : 27/28-9-1907 ರಂದು ಪಂಜಾಬಿನ ಒಂದು...
Date : Monday, 19-09-2016
ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಕಾವೇರಿ ನೀರಿಗಾಗಿ ಭುಗಿಲೆದ್ದ ಆಕ್ರೋಶ ತಣ್ಣಗಾಗಿದ್ದರೂ ಅದರ ದುಷ್ಪರಿಣಾಮಗಳು ಕೊನೆಗೊಂಡಿಲ್ಲ. ಯಾವುದೋ ಒಂದು ಘಟನೆ ಇದ್ದಕ್ಕಿದ್ದಂತೆ ಭುಗಿಲೆದ್ದು ಸಾಮಾಜಿಕ ಬದುಕಿನಲ್ಲಿ ತಲ್ಲಣ ಸೃಷ್ಟಿಸುವುದು ಇದ್ದದ್ದೇ. ಆದರೆ ಆ ಘಟನೆಯನ್ನು ಜೀರ್ಣಿಸಿಕೊಂಡು , ಮತ್ತೆ ಸಾಮಾಜಿಕ...
Date : Saturday, 17-09-2016
ಆರ್ ಬಿಐ ಗವರ್ನರ್ ರಘುರಾಮ ರಾಜನ್ ಅವರಿಗೇ ಪಾಠ ಮಾಡಿದ ಐಐಟಿ ಪ್ರೊಫೆಸರ್ ಪಟ್ಟಣದ ಸಹವಾಸವೇ ಸಾಕು ಎಂದು ಬುಡಕಟ್ಟು ಜನರೊಂದಿಗೆ ವಾಸಿಸತೊಡಗಿದರು. ಹಾಗೆ ಅವರು ಜನರೊಂದಿಗೆ ಬೆರೆತು ಪರಿಸರ ಜಾಗೃತಿ ಮೂಡಿಸಲು ಆರಂಭಿಸಿ ಎರಡು ದಶಕಗಳೇ ಸಂದವು. ಈ ತಪಸ್ವಿಯ...
Date : Thursday, 15-09-2016
ಮುಗುಳುನಗೆ… ಮುಸ್ಕಾನ್ ಎಂಬ ಶಬ್ದಕ್ಕಿರುವ ಅರ್ಥ ಇದು. ಇನ್ನೊಬ್ಬನ ಮೊಗದಲ್ಲಿ ಮಂದಹಾಸ ಮೂಡಿಸಬೇಕು ಎಂಬ ಅಭಿಲಾಷೆ ಎಲ್ಲರಲ್ಲೂ ಮೂಡಿದರೆ ದ್ವೇಷಮಯ ಜಗತ್ತಿನಲ್ಲೆಲ್ಲ ನಗುವಿನ ಹೂದೋಟವೇ ಕಾಣಿಸಬಹುದು. ಆದರೆ ವಾಸ್ತವವೇ ಬೇರೆ. ಯಾವುದೂ ಒಂದೇ ರೀತಿ ಇರುವುದಿಲ್ಲ. ಎಲ್ಲ ಬೆರಳುಗಳೂ ಒಂದೇ ರೀತಿ...
Date : Thursday, 15-09-2016
ಹೊಸ ಹೊಸತನ್ನು ಆವಿಷ್ಕರಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ದಾಪುಗಾಲಿಡುವಂತೆ ಮಾಡುತ್ತಿರುವ, ಭಾರತದ ಅಭಿವೃದ್ಧಿಗೆ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಅವಿರತ ಪರಿಶ್ರಮ ಪಡುತ್ತಿರುವ ನಮ್ಮ ಹೆಮ್ಮೆಯ ಇಂಜಿನಿಯರ್‌ಗಳನ್ನು ಸ್ಮರಿಸಬೇಕಾದ ದಿನವಿಂದು. ವಿಶ್ವಕಂಡ ಮಹಾನ್ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿರುವ ಶಿಲ್ಪಿ...
Date : Monday, 29-08-2016
ದೇಶದ ಹಲವೆಡೆ ಮಾನಿನಿಯರ ಮೇಲೆ ಆಗಾಗ ದೌರ್ಜನ್ಯ, ಅತ್ಯಾಚಾರ ನಡೆಯುತ್ತಲೇ ಇದ್ದು ದೇಶದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗುತ್ತಿರುವಾಗ, ಇಬ್ಬರು ಮಾನಿನಿಯರು ದೇಶದ ಮಾನವನ್ನು ಉಳಿಸಿದ್ದಾರೆ. ಅವರಿಬ್ಬರನ್ನು ಇದೀಗ ಇಡೀ ದೇಶ ಕೊಂಡಾಡುತ್ತಿದೆ. ಇತ್ತೀಚೆಗೆ ರಿಯೊ ಡಿಜೆನೈರೋದಲ್ಲಿ ಮುಕ್ತಾಯಗೊಂಡ ಒಲಿಪಿಂಕ್ಸ್‌ನಲ್ಲಿ ಪಿ....
Date : Friday, 26-08-2016
ಬೆಂಗಳೂರು : ಕಷ್ಟಗಳನ್ನು ಎದುರಿಸುವ ಧೈರ್ಯವಿದ್ದರೆ ನಾವು ವಿಜಯಿಗಳಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ವಿಶ್ವಾಸ್ ಕೆ. ಎಸ್. ಅವರೇ ಜೀವಂತ ಸಾಕ್ಷಿ. ಬೆಂಗಳೂರಿನ 20 ವರ್ಷದ ವಿಶ್ವಾಸ್ ಕೈಗಳಲಿಲ್ಲದಿದ್ದರೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೆನಡಾದಲ್ಲಿ ಕಳೆದ ವಾರ...