ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ತಮ್ಮ ಹದಿಹರೆಯದಲ್ಲಿ ರಾಷ್ಟ್ರೀಯ ಚಳುವಳಿಯ ಭಾಗವಾಗಿ ಮೊದಲ ಬಾರಿಗೆ ರಾಜಕೀಯಕ್ಕೆ ಸೇರಿದರು. ಬಹುಕಾಲದ ವರೆಗೆ ಸತ್ಯಾಗ್ರಹಿಯಾಗಿದ್ದ ಅವರು, ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಅಡಿಯಲ್ಲಿ ಸ್ವತಂತ್ರ ಭಾರತದ ಸರ್ಕಾರವನ್ನು ಸೇರಿದರು. ಜೂನ್ 09, 1964ರಂದು ನೆಹರೂ ನಂತರ ಪ್ರಧಾನಿಯೂ ಆದರು.
ತಮ್ಮ ಮೃದು ಸ್ವಭಾವದ ಮಾತುಗಾರಿಕೆ ಮತ್ತು ಶುದ್ಧ ಮನಸ್ಸಿನಿಂದಾಗಿ ಹೆಸರು ಪಡೆದರಲ್ಲದೆ ದೇಶದ ಹಿತಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ಅನ್ವಯಿಸುವ ಮೊದಲು ತಮ್ಮ ಮನೆಯಲ್ಲಿಯೇ ಅಭ್ಯಸಿಸುತ್ತಿದ್ದರು.
ಅವರ ಜೀವನದ ಕೆಲವು ಸತ್ಯ ಸಂಗತಿಗಳು ನಮಗೆ ಬೆರಗುಗೊಳಿಸುತ್ತದೆ.
1926ರಲ್ಲಿ ವಾರಣಾಸಿಯ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಸಂದರ್ಭ ಅವರ ಯಶಸ್ಸಿನಿಂದಾಗಿ ‘ಶಾಸ್ತ್ರಿ’ ಎಂಬ ಬಿರುದು ಪಡೆದರು.
3 ತಿಂಗಳ ಶಿಶುವಾಗಿದ್ದಾಗ ಶಾಸ್ತ್ರಿ ಅವರ ತಾಯಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಶಾಸ್ತರಿ ಅವರನ್ನು ಕಳೆದುಕೊಂಡಿದ್ದರು. ಎಫ್ಐಆರ್ ದಾಖಲಿಸಿದ ಬಳಿಕ ಮಕ್ಕಳಿರದ ಗೊಲ್ಲನೋರ್ವ ಇಚ್ಛಿಸದಿದ್ದರೂ ಶಾಸ್ತ್ರಿ ಅವರ ತಾಯಿಗೆ ಮಗುವನ್ನು ಮರಳಿಸಿದರು.
ಶಾಲೆಗೆ ಹೋಗುತ್ತಿದ್ದ ಸಂದರ್ಭ ದೋಣಿಯಲ್ಲಿ ಹೋಗಲು ಸಾಕಷ್ಟು ಹಣ ಇಲ್ಲದಿದ್ದ ಕಾರಣ ಪುಸ್ತಕಗಳನ್ನು ತಲೆಗೆ ಕಟ್ಟಿಕೊಂಡು ದಿನಕ್ಕೆ ಎರಡು ಬಾರಿ ಗಂಗಾ ನದಿಯನ್ನು ಈಜಿ ದಾಟುತ್ತಿದ್ದರು.
ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ವೇಳೆ ಗುಂಪುಗಳನ್ನು ಚದುರಿಸಲು ಲಾಠಿ ಪ್ರಹಾರದ ಬದಲು ನೀರಿನ ಜೆಟ್ಗಳನ್ನು ಬಳಸಿದ ಮೊದಲ ವ್ಯಕ್ತಿ ಎನಿಸಿಕೊಂಡರು.
ಶಾಸ್ತ್ರಿ ಅವರು ತಮ್ಮ ಮದುವೆಗೆ ವರದಕ್ಷಿಣೆಯ ಭಾಗವಾಗಿ ಖಾದಿ ಮತ್ತು ಚರಕವನ್ನು ತೆಗೆದುಕೊಂಡರು.
ಶಾಸ್ತ್ರಿ ಅವರು ಆಗಾಗ ಧೋತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾರಣ ನೆಹರು ಅವರು ಶಾಸ್ತ್ರಿ ಅವರನ್ನು ‘ಅರೆ ನಾಗರಿಕ’ ಎಂದು ಕರೆದಿದ್ದರು.
ಲಾಲ್ ಬಹಾದೂರ್ ಶಾಸ್ತ್ರಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭ ಜೈಲಿನಲ್ಲಿದ್ದಾಗ ಅವರ ಕುಟುಂಬ ರೂ. 50 ಪಿಂಚಣಿಯಲ್ಲಿ ಜೀವನ ನಡೆಸುತ್ತಿತ್ತು. ಶಾಸ್ತ್ರಿ ಅವರ ಪತ್ನಿ ಈ ಪಿಂಚಣಿಯಲ್ಲಿ ರೂ. 10ನ್ನು ಉಳಿಸುತ್ತಿರುವುದಾಗಿ ತಿಳಸಿದಾಗ ಶಾಸ್ತ್ರಿ ಅವರು ಪೀಪಲ್ಸ್ ಸೊಸೈಟಿ ಸೇವಕರಿಗೆ ತಿಳಿಸಿ ಉಳಿತಾಯದ 10 ರೂ.ಯನ್ನು ನಿರ್ಗತಿಕರಿಗೆ ನೀಡುವಂತೆ ಕೇಳಿಕೊಂಡರು.
ಒಂದು ಬಾರಿ ಶಾಸ್ತ್ರಿ ಅವರ ಪುತ್ರನಿಗೆ ಅನುಚಿತ ಸಂದರ್ಭದಲ್ಲಿ ಮೇಲ್ದರ್ಜೆಗೆ ಬಡ್ತಿ ನೀಡಿದಾಗ ಶಾಸ್ತ್ರಿಯವರು ಅದನ್ನು ತಕ್ಷಣವೇ ಬದಲಾಯಿಸಿದರು.
ಕೆಲವು ಕರಡುಗಳನ್ನು ಆಗಾಗ ಪರಿಷ್ಕರಿಸು ಅಭ್ಯಾಸವನ್ನು ಶಾಸ್ತ್ರಿ ಅವರು ಹೊಂದಿದ್ದರು. 1964ರಲ್ಲಿ ಕೈರೋ ಸಮ್ಮೇಳನದ ತಮ್ಮ ಭಾಷಣ ಸಂಪೂರ್ಣವಾಗಿ ಟೈಪ್ ಮಾಡುವ ಉದ್ದೇಶದಿಂದ ಅವರು ಸಮ್ಮೇಳನವನ್ನು ಹಲವು ಬಾತಿ ಪರಿಷ್ಕರಿಸಿದ್ದರು.
ಶಾಸ್ತ್ರಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆರ್ಬಿಐ 2004ರಲ್ಲಿ ಅವರ ಭಾವಚಿತ್ರವಿರುವ 100 ರೂ. ನಾಣ್ಯವನ್ನು ಬಿಡುಗಡೆ ಮಾಡಿತ್ತು. ಈ ನಾಣ್ಯ ಚಾಲನೆಯಲ್ಲಿ ಇಲ್ಲದೇ ಇದ್ದು, ಕೇವಲ ಆರ್ಡರ್ ನೀಡುವ ಮೂಲಕ ಪಡೆಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.