ಈ ಸಣ್ಣ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಟುಂಬದಲ್ಲೂ ಬಹುತೇಕ ಓರ್ವ ಸದಸ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಮನೆಗಳ ನಾಲ್ಕು ಸದಸ್ಯರೂ ಸೇನೆಯಲ್ಲಿದ್ದಾರೆ. ಪ್ರಸ್ತುತ ಈ ಗ್ರಾಮದ ಸುಮಾರು 109ಸದಸ್ಯರು (65 ಮಂದಿ ಸೇನೆಯಲ್ಲಿ, ಇತರರು ಆಡಳಿತ ಹುದ್ದೆಯಲ್ಲಿ) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆಂಧ್ರದ ಸಣ್ಣ ಗ್ರಾಮವಾದ ಮಾಧವರಾಂನ ಜನರು ಯುದ್ಧ ಮತ್ತು ಪರಾಕ್ರಮದ ಕಥೆಗಳನ್ನೇ ಹೇಳುತ್ತಲೇ ಇರುತ್ತಾರೆ. ಇಲ್ಲಿಯ ಸುಮಾರು 100 ಕುಟುಂಬಗಳು ತಮ್ಮ ಮನೆ ಮಂದಿ ಗೆದ್ದ ಯುದ್ಧ ಪ್ರಶಸ್ತಿಗಳನ್ನು ಅಲಂಕಾರಿಕವಾಗಿ ಮನೆಗಳನ್ನು ಇಟ್ಟಿದ್ದಾರೆ. ಇಲ್ಲಿನ ಮಹಿಳೆಯರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುರುಷರನ್ನೇ ವಿವಾಹವಾಗಲು ಹೆಚ್ಚು ಇಷ್ಟಪಡುತ್ತಾರೆ. ಇವರ ಮಕ್ಕಳು ಕರ್ನಲ್, ಮೇಜರ್, ಕ್ಯಾಪ್ಟನ್ ಇತ್ಯಾದಿ ಹೆಸರುಗಳಿಂದಲೇ ಕರೆಯಲ್ಪಡುತ್ತಾರೆ.
ಮಾಧವರಾಂನ ಮಿಲಿಟರಿ ಇತಿಹಾಸ ಈ ಗ್ರಾಮಸ್ಥರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಗ್ರಾಮ ೧೭ನೇ ಶತಮಾನದ ಗಜಪತಿ ರಾಜವಂಶದ ದೊರೆ ಪಶುಪತಿ ಮಾಧವ ವರ್ಮಾ ಬ್ರಹ್ಮನ ರಕ್ಷಣಾ ನೆಲೆಯಾಗಿದ್ದು, ಆತ ಒಡಿಸಾ ಮತ್ತು ಡೆಕ್ಕನ್ನಲ್ಲಿ ಆಡಳಿತ ನಡೆಸುತ್ತಿದ್ದ. ಈತನಿಂದ ಈ ಗ್ರಾಮ ಮಾಧವರಾಂ ಎಂಬ ಹೆಸರನ್ನು ಪಡೆದಿದ್ದು, ಇಲ್ಲಿಂದ 6 ಕಿ.ಮೀ. ದೂರದ ಆರುಗೊಲನು ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಕೋಟೆ ಇಂದಿಗೂ ಶಿಥಿಲಗೊಂಡ ಸ್ಥಿತಿಯಲ್ಲಿ ಇದೆ.
ವಸಾಹತುಶಾಹಿ ಆಡಳಿತ ಸಂದರ್ಭದಲ್ಲಿ ಈ ಗ್ರಾಮದ 90 ಸೈನಿಕರು 1ನೇ ಮಹಾಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೋರಾಡಿದ್ದಾರೆ. 2ನೇ ಮಹಾಯುದ್ಧದಲ್ಲಿ ಈ ಸಂಖ್ಯೆ 1110 ಆಗಿತ್ತು.
ಗ್ರಾಮಸ್ಥರು ವೆಂಪಳ್ಳಿ ವೆಂಕಟಾಚಲಂ ಸೇರಿದಂತೆ ಇತರ ಸ್ಥಳೀಯ ಹೋರಾಟಗಾರರಿಗೆ ಇಂದಿಗೂ ಗೌರವ ಅರ್ಪಿಸುತ್ತಿದೆ. ವೆಂಕಟಾಚಲಂ ಅವರು ವಿಕ್ಟೋರಿಯಾ ಕ್ರಾಸ್ ಪದಕ (ಬ್ರಿಟಿಷ್ ವಸಾಹತುಗಳಲ್ಲಿ ಅತ್ಯುನ್ನತ ಶೌರ್ಯ ಪ್ರಶಸ್ತಿ) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು. ಇವರ ಪುತ್ರ ಮಾರ್ಕಾಂಡೇಯುಲು ಭಾರತೀಯ ಸೇನೆ ಪರ ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದಾರೆ.
ಸೈನಿಕರ ತ್ಯಾಗವನ್ನು ಗುರುತಿಸಿಕೊಳ್ಳಲು ಗ್ರಾಮಸ್ಥರು ಮಾಧವರಾಂ ಗ್ರಾಮದಲ್ಲಿ ನವದೆಹಲಿಯ ಅಮರ್ ಜವಾನ್ ಜ್ಯೋತಿಯ ಕೆಲವು ಸಾಲುಗಳನ್ನು ಹೊಂದಿದ ಸ್ಮಾರಕವನ್ನು ನಿರ್ಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.