ನವದೆಹಲಿ: ಸೂಪರ್ 30 ಕಾರ್ಯಕ್ರಮದಡಿ ವಾರ್ಷಿಕ 30 ಬಡ ಮಕ್ಕಳನ್ನು ಐಐಟಿ ಜಿಇಇ ಎಕ್ಸಾಂ ಉತ್ತೀರ್ಣಗೊಳಿಸುವಂತೆ ಮಾಡುತ್ತಿರುವ ಬಿಹಾರದ ಆನಂದ್ ಕುಮಾರ್ ಅವರಿಗೆ ಈ ವರ್ಷದ ‘ರಾಷ್ಟ್ರೀಯ ಬಾಲ್ ಕಲ್ಯಾಣ್ ಅವಾರ್ಡ್’ ದೊರೆತಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
ಶಿಕ್ಷಣ ಮತ್ತು ಉಪನ್ಯಾಸದಲ್ಲಿ ಅವರು ನೀಡಿದ ಗಮನಾರ್ಹ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಸಚ್ಯುಸೆಟ್ಸ್ ವಿಶ್ವವಿದ್ಯಾಲಯ ಕೂಡ ಅವರನ್ನು ಉಪನ್ಯಾಸ ನೀಡುವಂತೆ ಆಹ್ವಾನಿಸಿದೆ.
ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಅವರು ಎಂಜಿನಿಯರ್ಗಳಾಗಿ ರೂಪಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.