ಮುಂಬಯಿ: ಖ್ಯಾತ ಕವಿ ಗುಲ್ಝಾರ್ ಅವರು ಹವಾಮಾನ ವೈಪರೀತ್ಯದ ಥೀಮ್ ಇಟ್ಟುಕೊಂಡು ಕವಿತೆಯನ್ನು ರಚಿಸಿದ್ದಾರೆ. ‘ಮೋಸಂ ಬೇಗರ್ ಹೋನೆ ಲಗೆ ಹೇ’ ಎಂಬುದು ಅವರು ಕವಿತೆಯಾಗಿದೆ.
ಹವಾಮಾನದ ಎಳೆಯನ್ನು ಇಟ್ಟುಕೊಂಡು ನಿರ್ಮಿಸಲಾಗುತ್ತಿರುವ ‘ಕಡ್ವಿ ಹವಾ’ ಸಿನಿಮಾದಲ್ಲಿ ಈ ಕವಿತೆ ಹಾಡಾಗಿ ರೂಪುಗೊಳ್ಳಲಿದೆ.
ಮಾನವನ ಕೈಯಲ್ಲಿ ದೌರ್ಜನ್ಯ ಅನುಭವಿಸುತ್ತಿರುವ ಪ್ರಕೃತಿಯ ರೋಧನವನ್ನು ಈ ಕವಿತೆ ಬಿಚ್ಚಿಟ್ಟಿದೆ. ಮಾನವನ ದುರಾಸೆಗೆ ಪ್ರಕೃತಿ ತನ್ನ ಪ್ರತಿ ಇಂಚನ್ನು ಕಳೆದುಕೊಳ್ಳುತ್ತಿದೆ ಎಂಬ ದುಃಖವನ್ನು ಈ ಕವಿತೆ ವ್ಯಕ್ತಪಡಿಸಿದೆ.
‘ಕಡ್ವಿ ಹವಾ’ ಸಿನಿಮಾವನ್ನು ನೀಲ್ ಮಧಬ್ ಪಾಂಡಾ ನಿರ್ದೇಶಿಸಿದ್ದಾರೆ. ನವೆಂಬರ್ 24ಕ್ಕೆ ದೇಶದಾದ್ಯಂತ ಬಿಡುಗಡೆಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.