Thursday, May 14th, 2015
News13
ಕಳತ್ತೂರು : ಅಮೃತಧಾರಾ ಗೋ ಶಾಲೆ ಬಜಕೂದ್ಲು ಪೆರ್ಲ ಇದರ ನೂತನ ನಿವೇಶನದಲ್ಲಿ ತಲೆಯೆತ್ತಿದ ಗೋಲೋಕದ ಲೋಕಾರ್ಪಣೆಯ ಪೂರ್ವಬಾವಿಯಾಗಿ ಹೋರಾಟ ‘ಗೋ ರಥಕ್ಕೆ ಕಳತ್ತೂರಿನಲ್ಲಿ ಭವ್ಯ ಸ್ವಾಗತ ದೊರಕಿತು . ಲೇಖಕ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು . ” ಇಂದು ವಿದೇಶಗಳಲ್ಲಿ ‘ರಿಸ್ಕ್ ಫ್ರೀ ಹಾಲು ಹಾಗೂ ಸೇಫ್ ಮಿಲ್ಕ್ ಅನ್ನುವ ಹೆಸರಲ್ಲಿ ಪ್ಯಾಕೆಟ್ ಹಾಲು ಮಾರಾಟವಾಗುತ್ತಿದೆ .
ವಿದೇಶಿ ತಳಿಯ ಗೋವಿನಲ್ಲಿರುವ A1 ವಂಶವಾಹಿ ಗಳಿಂದಾಗಿ ಆ ಹಾಲಿನ ಸೇವನೆಯಿಂದ ಬಾಲ್ಯದಲ್ಲೇ ಮಧುಮೇಹ ,ಆಟಿಸಂ ಬೊಜ್ಜು ಬೆಳೆಯುವುದು ಕಂಡು ಬಂದಿರುವ ಕಾರಣ A2 ಗುಣ ಮಟ್ಟದ ಹಾಲಿಗೆ ಈ ಹೆಸರು . ದೇಶೀ ದನಗಳ ವಂಶವಾಹಿ A2 ಆದಕಾರಣ ಅತ್ಯಂತ ಸಮೃದ್ದವಾಗಿ ಆರೋಗ್ಯಕರವಾಗಿದೆ ,ರೋಗಮುಕ್ತವಾಗಿದೆ . ಕಾಸರಗೋಡು ತಳಿಯ ಗೋವಿನ ಗುಣ ವಿಶೇಷಗಳು ಭಾರತದಾದ್ಯಂತ ಪ್ರಸಿದ್ದವಾಗಿದೆ . ಆದುದರಿಂದ ಶುದ್ಧ ತಳಿಯನ್ನು ಈ ನಾಡು ಉಳಿಸಿ ಬೆಳೆಸ ಬೇಕಾಗಿದೆ ”ಎಂಬುದಾಗಿ ಶ್ರೀ ಚಂದ್ರಶೇಖರ್ ಏತಡ್ಕ ಪ್ರಾಸ್ತಾವಿಕವಾಗಿ ನುಡಿದರು .
ನಿವೃತ್ತ ಮುಖ್ಯೋಪಾದ್ಯಾಯ ಸಮಾಜ ಸೇವಕ ಶ್ರೀ ರಾಮ ಮಾಸ್ತರ್ ಕೆ ಧನ್ಯವಾದವಿತ್ತರು . ಮಾನಸ ಮುಂಚಿಕಾನ ,ಕಳತ್ತೂರು ಶ್ರೀ ಮಹಾದೇವ ಮಹಿಳಾ ಭಜನಾ ಸಂಘದ ಸದಸ್ಯೆಯರು ಗೋವಿನ ಹಾಡನ್ನು ಹಾಡಿದರು . ದೇಶೀ ತುಪ್ಪ ಬಳಸಿ ಆರತಿ ಗೈದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.