
ನ್ಯೂಯಾರ್ಕ್: ಕೆನಡಾದ ಬಳಿಕ ಈಗ ಅಮೆರಿಕಾದಲ್ಲೂ ಖಲಿಸ್ಥಾನಿ ಪ್ರತ್ಯೇಕತಾವಾದಿಗಳ ಹಾರಾಟ ತಾರಕಕ್ಕೇರಿದೆ. ಭಾನುವಾರ ನ್ಯೂಯಾರ್ಕ್ನ ಗುರುದ್ವಾರದಲ್ಲಿ ಖಲಿಸ್ತಾನಿ ಪ್ರತಿಭಟನಾಕಾರರ ಗುಂಪು ಯುಎಸ್ನಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ಥಳಿಸಲು ಪ್ರಯತ್ನಿಸಿದೆ.
ಸಂಧು ಅವರು ಗುರುಪುರಬ್ ಸಂದರ್ಭದಲ್ಲಿ ಲಾಂಗ್ ಐಲ್ಯಾಂಡ್ನ ಹಿಕ್ಸ್ವಿಲ್ಲೆ ಗುರುದ್ವಾರಕ್ಕೆ ಭೇಟಿ ನೀಡಿದಾಗ ಪ್ರತಿಭಟನಾಕಾರರು ಅವರನ್ನು ಸುತ್ತುವರೆದು ಘೋಷಣೆ ಕೂಗಲು ಪ್ರಾರಂಭಿಸಿದರು. ತರಂಜಿತ್ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಮತ್ತು ಮತ್ತೊಬ್ಬ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಂಧು ಮತ್ತು ಖಲಿಸ್ತಾನಿ ಪ್ರತಿಭಟನಾಕಾರರ ನಡುವಿನ ವಾಗ್ವಾದದ ವಿಡಿಯೋ ಈಗ ವೈರಲ್ ಆಗಿದೆ. ತರಂಜಿತ್ ಅವರು ತಾನು ಸೇವೆಗಾಗಿ ಗುರುದ್ವಾರಕ್ಕೆ ಭೇಟಿ ನೀಡಿರುವುದಾಗಿ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು.
“ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನೀನೇ ಹೊಣೆ. ಪನ್ನುನ್ನನ್ನು ಕೊಲ್ಲಲು ಸಂಚು ರೂಪಿಸಿದ್ದೀಯ” ಎಂದು ಪಂಜಾಬಿ ಭಾಷೆಯಲ್ಲಿ ಪ್ರತಿಭಟನಾಕಾರರೊಬ್ಬರು ಕೂಗುತ್ತಿರುವುದು ಕೇಳಿಬಂದಿದೆ. ವೀಡಿಯೊದಲ್ಲಿ ಇತರರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲೆ ಕಾಣಬಹುದು.
#WATCH | Delhi: On the reports of Khalistan supporters heckling Indian Ambassador to US Taranjit Singh Sandhu while on a visit to Gurudwara, BJP leader Manjinder Singh Sirsa says, "As far as Taranjit Singh Sandhu is concerned, he has got a legacy. His father was Teja Singh… pic.twitter.com/Fh0AyTQ0wp
— ANI (@ANI) November 27, 2023
#WATCH | Indian Ambassador to US Taranjit Singh Sandhu celebrates Guru Purab with the Sikh community in New York pic.twitter.com/2yH0X5BSaU
— ANI (@ANI) November 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



