News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಿಲ್ಗಿಟ್-ಬಾಲ್ಟಿಸ್ತಾನ್‌ನಾದ್ಯಂತ ಪಾಕಿಸ್ತಾನದ ವಿರುದ್ಧ ಬೃಹತ್ ಪ್ರತಿಭಟನೆ

ಶ್ರೀನಗರ: ತೆರಿಗೆ ಹೆಚ್ಚಳದ ವಿರುದ್ಧ ಗಿಲ್ಗಿಟ್-ಬಾಲ್ಟಿಸ್ತಾನ್‌ನಾದ್ಯಂತ ಪಾಕಿಸ್ತಾನ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ವಿದ್ಯುತ್ ಬೆಲೆಗಳಲ್ಲಿ ಹೆಚ್ಚಳ, ಅಕ್ರಮ ಭೂ ಸ್ವಾಧೀನ ಮತ್ತು ಅಧಿಕಾರಿಗಳಿಂದ ಪ್ರದೇಶದಲ್ಲಿನ ಅನ್ಯಾಯದ ತೆರಿಗೆಗಳ ವಿರುದ್ಧ ಸ್ಕರ್ಡು ನಗರದಲ್ಲಿ ಸತತ 13ನೇ ದಿನವೂ ಪ್ರತಿಭಟನೆಗಳು ಮುಂದುವರೆದಿವೆ.

ಪಾಕ್ ಸೇನೆಯ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಹಾಗೂ ವಿದ್ಯುತ್ ಬೆಲೆಯಲ್ಲಿ ಕಡಿತ ಮಾಡಬೇಕು ಮತ್ತು ಭಾರೀ ತೆರಿಗೆಗಳನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯಿಟ್ಟು ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ. ಸ್ಕರ್ಡು-ಕಾರ್ಗಿಲ್ ರಸ್ತೆಯನ್ನು ತೆರೆಯುವುದರ ಜೊತೆಗೆ ರಾಜಕೀಯ ಸಬಲೀಕರಣ ಮತ್ತು ಸಬ್ಸಿಡಿಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಗಿಲ್ಗಿಟ್ ಬಾಲ್ಟಿಸ್ತಾನ್ ನಿವಾಸಿಗಳು ಪಾಕಿಸ್ತಾನ ಸರ್ಕಾರ ಮಾಡುತ್ತಿರುವ ದೌರ್ಜನ್ಯದಿಂದ ಬೇಸತ್ತಿದ್ದಾರೆ. ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಭೂಮಿಯನ್ನು ಬಳಸುತ್ತಿದೆ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಜನರು ಈ ಪ್ರದೇಶದಲ್ಲಿ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೂಕಬಳಿಕೆ ಮತ್ತು ಭಾರೀ ತೆರಿಗೆಗಳು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ‘ಖಾಲ್ಸಾ ಸರ್ಕಾರ್ ತೆರಿಗೆ’ ವಿಧಿಸಲಾಗಿದೆ. ಅಂದರೆ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಯಾವುದೇ ಬಂಜರು ಭೂಮಿಯನ್ನು ಭದ್ರತಾ ಪಡೆಗಳಿಗೆ ಶಿಬಿರವನ್ನು ಸ್ಥಾಪಿಸಲು  ಸರ್ಕಾರಕ್ಕೆ ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ.

ಪಾಕಿಸ್ತಾನ ಸರ್ಕಾರವು ಎದುರಿಸುತ್ತಿರುವ ಸಾಲದಿಂದ ಹೊರಬರಲು ತೆರಿಗೆಗಳನ್ನು ಭಾರೀ ಹೆಚ್ಚಳ ಮಾಡಿದೆ. ನಿತ್ಯ ಬಳಕೆಯ 135ಕ್ಕೂ ಹೆಚ್ಚು ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top