ನವದೆಹಲಿ: ಶೀಘ್ರವೇ ದೇಶದ ಜನತೆಗೆ ಅವರದೇ ಭಾಷೆಯಲ್ಲಿ ಭೂ ದಾಖಲೆ ದೊರೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಬಜೆಟ್ನಲ್ಲಿ ಘೋಷಿಸಲಾದ “ನಾಗರಿಕರ ಸಬಲೀಕರಣ-ಅಧಿಕಾರ ಭಾರತ” ಎಂಬ ಶೀರ್ಷಿಕೆಯ ಭೂ ಆಡಳಿತ ಸುಧಾರಣೆಗಳ ಕುರಿತು ಇ-ಪುಸ್ತಕವನ್ನು ಸೋಮವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದ ನಂತರ ಸಚಿವರು ಮಾತನಾಡುತ್ತಿದ್ದರು.
ಭೂ ಆಡಳಿತ ಸುಧಾರಣೆ ಕುರಿತ ಇ-ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಭೂ ದಾಖಲೆಗಳು 22 ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಮುಂದಿನ ತಿಂಗಳಿನಿಂದ ಬಹುಭಾಷಾ ತಂತ್ರಾಂಶವನ್ನು ಹೊರತರಲು ಭೂಸಂಪನ್ಮೂಲ ಇಲಾಖೆ ಯೋಜನೆ ರೂಪಿಸಲಿದೆ ಎಂದರು.
“ಭೂಸಂಪನ್ಮೂಲ ಇಲಾಖೆ ಬಹುಭಾಷಾ ಸಾಫ್ಟ್ವೇರ್ ಅನ್ನು ಏಪ್ರಿಲ್ 2022 ರಿಂದ ಹೊರತರಲು ಯೋಜಿಸಿದೆ. ನಂತರ, ಭೂ ದಾಖಲೆಗಳು 22 ಭಾಷೆಗಳಲ್ಲಿ ಲಭ್ಯವಿರುತ್ತವೆ” ಎಂದಿದ್ದಾರೆ.
ಎನ್ಜಿಡಿಆರ್ಎಸ್ ಸಾಫ್ಟ್ವೇರ್ನಿಂದ ಸರ್ಕಾರಕ್ಕೆ ಸುಮಾರು 4 ಕೋಟಿ ವೆಚ್ಚವಾಗುತ್ತದೆ ಆದರೆ ಈ ಸಾಫ್ಟ್ವೇರ್ ಬಳಕೆಯು ರಾಜ್ಯ ಸರ್ಕಾರಗಳ ಭೂ ಆದಾಯವನ್ನು ಹೆಚ್ಚಿಸಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.