ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ನೇಪಾಳಿ ಪ್ರಜೆಗಳನ್ನು ಸ್ಥಳಾಂತರಿಸಿದ್ದಕ್ಕಾಗಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಧನ್ಯವಾದ ಅರ್ಪಿಸಿದ್ದಾರೆ.
ಟ್ವಿಟ್ ಮಾಡಿರುವ ದೇವುಬಾ, “ನಾಲ್ವರು ನೇಪಾಳಿ ಪ್ರಜೆಗಳು ಈಗಷ್ಟೇ ಉಕ್ರೇನ್ನಿಂದ ಭಾರತದ ಮೂಲಕ ನೇಪಾಳಕ್ಕೆ ಬಂದಿದ್ದಾರೆ. ಆಪರೇಷನ್ ಗಂಗಾ ಮೂಲಕ ನೇಪಾಳಿ ಪ್ರಜೆಗಳನ್ನು ಸ್ವದೇಶಕ್ಕೆ ಕರೆತಂದು ಮಾಡಿದ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು” ಎಂದಿದ್ದಾರೆ.
ಇಲ್ಲಿಯವರೆಗೆ, ಭಾರತವು ಆರು ನೇಪಾಳಿ ಪ್ರಜೆಗಳನ್ನು ಉಕ್ರೇನ್ನಿಂದ ಸ್ಥಳಾಂತರಿಸಿದೆ.
ಸಿಲುಕಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ನೇಪಾಳ ಭಾರತ ಸರ್ಕಾರದಿಂದ ನೆರವು ಕೋರಿತ್ತು.
ಉಕ್ರೇನ್ನ ನೆರೆಯ ದೇಶಗಳಿಂದ ಭಾರತೀಯ ನಾಗರಿಕರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಫೆಬ್ರವರಿ 22 ರಂದು’ಆಪರೇಷನ್ ಗಂಗಾ’ ಪ್ರಾರಂಭವಾಯಿತು.
ಮಾರ್ಚ್ 8 ರವರೆಗೆ ಸುಮಾರು 18,000 ಭಾರತೀಯರನ್ನು ವಿಶೇಷ ವಿಮಾನಗಳ ಮೂಲಕ ವಾಪಸ್ ಕರೆತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.