ಕೀವ್: ರಷ್ಯಾದ ದಾಳಿಯ ವಿರುದ್ಧ ದೇಶವನ್ನು ರಕ್ಷಿಸಲು ಬಯಸುವ ಯಾವುದೇ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಹೇಳಿದ್ದಾರೆ.
“ದೇಶವನ್ನು ರಕ್ಷಿಸಲು ಬಯಸುವ ಯಾರಿಗಾದರೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ. ನಮ್ಮ ನಗರಗಳ ರಸ್ತೆಗಳಲ್ಲಿ ನಿಂತು ಉಕ್ರೇನ್ ಅನ್ನು ಬೆಂಬಲಿಸಲು ಸಿದ್ಧರಾಗಿರಿ” ಎಂದು ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ.
“ಉಕ್ರೇನ್ ರಷ್ಯಾ ಜೊತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಆತ್ಮಸಾಕ್ಷಿಯನ್ನು ನಂಬುವ ರಷ್ಯಾ ಜನತೆ ಹೊರಬಂದು ಪ್ರತಿಭಟನೆ ನಡೆಸುವ ಸಮಯ ಇದು” ಎಂದಿದ್ದಾರೆ.
“ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ನಾಜಿ ಜರ್ಮಿನಿಯ ಮಾದರಿಯಲ್ಲಿ ಇಂದು ರಷ್ಯಾ ನಮ್ಮ ಮೇಲೆ ದಾಳಿ ಮಾಡಿ ದುಷ್ಟತನ ಮೆರೆದಿದೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಲಿದೆ. ಯಾವುದೇ ಕಾರಣಕ್ಕೂ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ” ಎಂದಿದೆ.
ರಷ್ಯಾ ಗುರುವಾರ ಮುಂಜಾನೆ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ಅದರ ರಾಜಧಾನಿ ಕೈವ್ ಸೇರಿದಂತೆ ದೇಶದಾದ್ಯಂತ ಸ್ಫೋಟಗಳು ನಡೆದಿರುವ ವರದಿಯಾಗಿದೆ.
We have severed diplomatic relations with Russia. For all those who have not yet lost their conscience in Russia, it is time to go out and protest against the war with Ukraine.
— Володимир Зеленський (@ZelenskyyUa) February 24, 2022
We will give weapons to anyone who wants to defend the country. Be ready to support Ukraine in the squares of our cities.
— Володимир Зеленський (@ZelenskyyUa) February 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.