ನವದೆಹಲಿ: 15000 ರೂಪಾಯಿಗಿಂತ ಹೆಚ್ಚಿನ ಮೂಲವೇತನ ಇರುವ ಮತ್ತು 1995 ರ ಕಾರ್ಮಿಕ ಪಿಂಚಣಿ ಯೋಜನೆಗೆ ಒಳಪಡದ ಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕಾರ್ಮಿಕ ಭವಿಷ್ಯ ನಿಧಿ ಕಛೇರಿ (ಇಪಿಎಫ್ಸಿ) ಮುಂದಾಗಿದೆ.
ನಿವೃತ್ತಿಯ ನಂತರ ಹೆಚ್ಚಿನ ಪಿಂಚಣಿ ಪಡೆಯುವುದು ಕಾರ್ಮಿಕರ ಆಶಯವಾಗಿರುತ್ತದೆ. ಹೀಗಾಗಿಯೇ ಕಾರ್ಮಿಕ ಭವಿಷ್ಯ ನಿಧಿ ಕಛೇರಿ ಹೊಸ ಪಿಂಚಣಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ.
1995 ರ ಕಾರ್ಮಿಕ ಪಿಂಚಣಿ ಯೋಜನೆಗೆ ಒಳಪಡದವರನ್ನು ಗುರಿಯಾಗಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಬಗ್ಗೆ ಮಾರ್ಚ್ 11 ಮತ್ತು 12 ರಂದು ಗುವಾಹಟಿಯಲ್ಲಿ ನಡೆಯಲಿರುವ ಕಾರ್ಮಿಕ ಭವಿಷ್ಯ ನಿಧಿ ಕಛೇರಿಯ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಮಿಕರು ಉದ್ಯೋಗಕ್ಕೆ ಸೇರುವ ವೇಳೆಗೆ ಮೂಲವೇತನ ಮತ್ತು ತುಟ್ಟಿಭತ್ಯೆಯ 15 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಅಂತವರು 1995ರ ಯೋಜನೆಯಲ್ಲಿ ಕಡ್ಡಾಯವಾಗಿ ಒಳಪಡುತ್ತಾರೆ. ಈ ವರ್ಗದ ಕಾರ್ಮಿಕರು 8.33 ಶೇಕಡಾ ದರದಲ್ಲಿ ಕಡಿಮೆ ವಂತಿಗೆಯನ್ನು ಪಿಂಚನಿ ನಿಧಿಗೆ ಪಾವತಿಸುವ ಕಾರಣ ನಿವೃತ್ತಿಯ ನಂತರ ಕಡಿಮೆ ಪಿಂಚಣಿ ಪಡೆಯುತ್ತಾರೆ. ಇದಕ್ಕೆ 2014ರಲ್ಲಿ ತಿದ್ದುಪಡಿ ತಂದಿರುವ ಇಪಿಎಫ್ ಪಿಂಚಣಿ ಪಡೆಯುವುದಕ್ಕೆ ರೂ.15000 ಮೂಲವೇತನ ಇರಬೇಕು ಎಂಬ ಮಿತಿಯನ್ನು ಹಾಕಿದೆ. ಇದು ಉದ್ಯೋಗಕ್ಕೆ ಸೇರುವ ವೇಳೆಗೆ ರೂ.15000 ಮೂಲವೇತನ ಇರಬೇಕು ಎಂಬುದಕ್ಕೆ ಮಾತ್ರ ಅನ್ವಯ ಆಗುತ್ತಿತ್ತು. ಆದರೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ಪರಿಷ್ಕರಿಸಿ 2014 ಸೆಪ್ಟೆಂಬರ್ 1ರಿಂದ ರೂ 6,500 ಮೇಲ್ಮುಖ ವೇತನ ಎಂದು ಪರಿಗಣಿಸಿತು. ಈ ಪರಿಷ್ಕರಣೆಯಿಂದ ಪಿಂಚಣಿ ಯೋಜನೆಗೆ ಒಳಪಡುವ ಕಾರ್ಮಿಕರ ಸಂಖ್ಯೆ 50 ಲಕ್ಷದಷ್ಟಿದೆ ಎಂದು ಅಂದಾಜು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.