ನವದೆಹಲಿ: ಜನರು ಸಿಗರೇಟ್ ಸೇದುವುದನ್ನು ತಡೆಯಲು ಮತ್ತು ಹೊಗೆರಹಿತ ಒಳಗೊಂಡಂತೆ ಎಲ್ಲಾ ರೂಪಗಳಲ್ಲಿ ತಂಬಾಕಿನ ಬಳಕೆಯನ್ನು ತ್ಯಜಿಸಲು ಸಹಾಯ ಮಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಮಂಗಳವಾರ ‘Quit Tobacco App’ ಎಂಬ ತಂಬಾಕು ತೊರೆಯುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.
“ತಂಬಾಕು ಯಾವ ರೂಪದಲ್ಲಿ ಇದ್ದರೂ ಮಾರಕ. ಜನರು ತಂಬಾಕು ತ್ಯಜಿಸುವುದನ್ನು ಬೆಂಬಲಿಸಲು ಈ ಅಪ್ಲಿಕೇಶನ್ನಂತಹ ನವೀನ ವಿಧಾನಗಳು ಹೆಚ್ಚು ಅಗತ್ಯವಿದೆ. ಇದು ಹಾನಿಕಾರಕ ಎಂದು ತಿಳಿದಿದ್ದರೂ ವಿವಿಧ ಕಾರಣಗಳಿಂದ ಅದನ್ನು ತೊರೆಯಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಈ ಆ್ಯಪ್ ಸಹಾಯ ಮಾಡಲಿದೆ” ಎಂದು WHO ಆಗ್ನೇಯ ಏಷ್ಯಾ ಪ್ರದೇಶ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಈ ಆ್ಯಪ್ WHO ದ ಈ ರೀತಿಯ ಮೊದಲ ಆ್ಯಪ್ ಮತ್ತು ಎಲ್ಲಾ ರೀತಿಯ ತಂಬಾಕನ್ನು ಗುರಿಯಾಗಿಸುವ ಆ್ಯಪ್ ಆಗಿದೆ. ಬಳಕೆದಾರರಿಗೆ ಕಡುಬಯಕೆಗಳನ್ನು ನಿರ್ವಹಿಸಲು ಮತ್ತು ತಂಬಾಕು ತ್ಯಜಿಸುವತ್ತ ಗಮನಹರಿಸಲು ಸಹಾಯ ಮಾಡುತ್ತದೆ.
ತಂಬಾಕು ಪ್ರತಿ ವರ್ಷ ಸುಮಾರು 8 ಮಿಲಿಯನ್ ಜನರನ್ನು ಕೊಲ್ಲುತ್ತದೆ. ಇದು WHO ಆಗ್ನೇಯ ಏಷ್ಯಾ ಪ್ರದೇಶದಲ್ಲಿ 1.6 ಮಿಲಿಯನ್ ಜೀವಗಳನ್ನು ಬಲಿ ಪಡೆಯುತ್ತದೆ, ಆಗ್ನೇಯ ಏಷ್ಯಾ ತಂಬಾಕು ಉತ್ಪನ್ನಗಳ ಅತಿದೊಡ್ಡ ಉತ್ಪಾದಕ ಮತ್ತು ಗ್ರಾಹಕರಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.