ನವದೆಹಲಿ: 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತವು ನವದೆಹಲಿಯ ರಾಜಪಥದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿತು. ದೇಶಾದ್ಯಂತ ‘ಆಜಾದಿ ಕಾ ಅಮೃತ್ ಮಹೋತ್ಸವ’ ಎಂಬ ಥೀಮ್ ಅಡಿ ಆಚರಣೆ ನಡೆದಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪರೇಡ್ ಆರಂಭವಾಯಿತು. ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ಪರೇಡ್ ನೇತೃತ್ವ ವಹಿಸಿದ್ದರು.
ಪರೇಡ್ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳುದೇಶದ ಗಮನ ಸೆಳೆದಿವೆ. ಈ ಬಾರಿ 12 ರಾಜ್ಯಗಳ ಟ್ಯಾಬ್ಲೋಗಳ ಪರೇಡ್ಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಆಯಾ ರಾಜ್ಯಗಳು ಪ್ರದರ್ಶಿಸಿದ ಟ್ಯಾಬ್ಲೋಗಳು ವಿಶೇಷವಾಗಿತ್ತು.
#RepublicDayParade | Depicting 'Punjab's contribution in freedom struggle', the tableau of the state depicts Bhagat Singh, Rajguru & Sukhdev. It also depicts protest against the Simon Commission led by Lala Lajpat Rai and Udham Singh shooting Michael O'Dwyer.#RepublicDayIndia pic.twitter.com/xNy8Xs9J3B
— ANI (@ANI) January 26, 2022
ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ನ ಕೊಡುಗೆಯನ್ನು ಪಂಜಾಬ್ ಟ್ಯಾಬ್ಲೋದಲ್ಲಿ ಚಿತ್ರಿಸಲಾಗಿದೆ. ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಲಾಲಾ ಲಜಪತ್ರಾಯ್ ಮತ್ತು ಉಧಮ್ಸಿಂಗ್ ನೇತೃತ್ವದಲ್ಲಿ ಸೈಮನ್ ಕಮಿಷನ್ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷ್ ಸೈನಿಕರು ಥಳಿಸುತ್ತಿರುವುದನ್ನು ಇಲ್ಲಿ ತೋರಿಸಲಾಗಿದೆ.
With the theme 'number one in sports', the tableau of Haryana participates in the #RepublicDayParade.
Out of the 7 medals won by India in Tokyo Olympics 2020, Haryana bagged 4. Similarly, in Paralympics 2020, out of the 19 medals won by the country, the players of Haryana got 6. pic.twitter.com/XAMsJyD6nW
— ANI (@ANI) January 26, 2022
ಹರಿಯಾಣದ ಟ್ಯಾಬ್ಲೋ ಕ್ರೀಡೆಯ ಕುರಿತಾಗಿ ಇದ್ದು, ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಛೋಪ್ರಾ, ಕುಸ್ತಿಪಟುಗಳ ಸ್ಪರ್ಧೆಯನ್ನು ತೋರಿಸಲಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ 7 ಪದಕಗಳಲ್ಲಿ ಹರಿಯಾಣ 4 ಪದಕಗಳನ್ನು ಬಾಚಿಕೊಂಡಿದೆ. 2020ರ ಪ್ಯಾರಾಲಿಂಪಿಕ್ಸ್ನಲ್ಲಿ ಪಡೆದ 19 ಪದಕಗಳಲ್ಲಿ 6 ಪದಕಗಳನ್ನು ಹರಿಯಾಣದ ಆಟಗಾರರು ಪಡೆದುಕೊಂಡಿದ್ದನ್ನು ಇಲ್ಲಿ ಹೇಳಲಾಗಿದೆ.
Goa tableau participating in the #RepublicDayParade, is based on the theme 'symbols of Goan Heritage'.
The tableau showcases Fort Aguada, Martyrs' Memorial at Azad Maidan in Panaji and Dona Paula. #RepublicDay pic.twitter.com/CqWDjJzcXC
— ANI (@ANI) January 26, 2022
ರಿಪಬ್ಲಿಕ್ ಡೇ ಪರೇಡ್ನಲ್ಲಿ ಭಾಗವಹಿಸಿದ ಗೋವಾ ಟ್ಯಾಬ್ಲೋ, ‘ಗೋವಾ ಪರಂಪರೆ’ ಥೀಮ್ ಅನ್ನು ಆಧರಿಸಿದೆ. ಟ್ಯಾಬ್ಲೋವು ಫೋರ್ಟ್ ಅಗುಡಾ, ಪಣಜಿಯ ಆಜಾದ್ ಮೈದಾನದಲ್ಲಿ ಹುತಾತ್ಮರ ಸ್ಮಾರಕ ಮತ್ತು ಡೋನಾ ಪೌಲಾವನ್ನು ಹೊಂದಿದೆ.
Uttarakhand tableau at the 73rd Republic Day parade depicts Hemkund Sahib Gurudwara, Dobra-Chanti Bridge and Badrinath Temple pic.twitter.com/3d3QAjAZxO
— ANI (@ANI) January 26, 2022
ಉತ್ತರಾಖಂಡದ ಟ್ಯಾಬ್ಲೋ ಹೇಮಕುಂಡ್ ಸಾಹಿಬ್ ಗುರುದ್ವಾರ, ದೋಬ್ರಾ- ಚಂಟಿ ಸೇತುವೆ ಮತ್ತು ಬದರಿನಾಥ ದೇವಾಲಯವನ್ನು ಒಳಗೊಂಡಿದೆ.
The tableau of Gujarat showcases the theme of the 'tribal movement of Gujarat'.
The front part of the tableau represents the freedom fighting spirits of tribals' ancestors. #RepublicDayIndia pic.twitter.com/4eAlARpjf9
— ANI (@ANI) January 26, 2022
ಗುಜರಾತ್ನ ಟ್ಯಾಬ್ಲೋ ‘ಗುಜರಾತ್ನ ಬುಡಕಟ್ಟು ಚಳುವಳಿ’ಯ ಥೀಮ್ ಹೊಂದಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಬುಡಕಟ್ಟು ಜನಾಂಗದವರ ಸ್ವಾತಂತ್ರ್ಯ ಹೋರಾಟದ ರಣೋತ್ಸಾಹವನ್ನು ಇಲ್ಲಿ ಹೇಳಲಾಗಿದೆ.
#RepublicDayParade | Meghalaya's tableau shows a woman weaving a bamboo basket and the many bamboo & cane products of the State pic.twitter.com/QpVxWKPWOb
— ANI (@ANI) January 26, 2022
ಮೇಘಾಲಯದ ಟ್ಯಾಬ್ಲೋದಲ್ಲಿ ಬಿದರಿನ ಕಲೆಯನ್ನು ಅನಾವರಣ ಮಾಡಲಾಗಿದೆ. ಮಹಿಳೆಯೊಬ್ಬರು ಬಿದಿರಿನ ಬುಟ್ಟಿಯನ್ನು ನೇಯುತ್ತಿರುವುದು ಮತ್ತು ರಾಜ್ಯದ ಅನೇಕ ಬಿದಿರು ಮತ್ತು ಕಬ್ಬಿನ ಉತ್ಪನ್ನಗಳನ್ನು ಟ್ಯಾಬ್ಲೋ ಹೊಂದಿದೆ.
Tableau of UP showcases achievement through skill development &employment via 'One District One Product', based on new micro, small & medium enterprise policy & industrial development policy of the state govt. Development in Kashi Vishwanath corridor also exhibited.#RepublicDay pic.twitter.com/r2eUNtWZv0
— ANI (@ANI) January 26, 2022
ಉತ್ತರಪ್ರದೇಶ ರಾಜ್ಯವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ನೀತಿ ಮತ್ತು ಕೈಗಾರಿಕಾ ಅಭಿವೃದ್ಧಿ ನೀತಿಯ ಆಧಾರದ ಮೇಲೆ ‘ಒಂದು ಜಿಲ್ಲೆ ಒಂದು ಉತ್ಪನ್ನ’ದ ಥೀಮ್ ಹೊಂದಿರುವ ಟ್ಯಾಬ್ಲೋವನ್ನು ಪ್ರದರ್ಶಿಸಿದೆ. ಅಲ್ಲದೇ ಕಾಶಿ ವಿಶ್ವನಾಥ ಕಾರಿಡಾರ್ನ ಅಭಿವೃದ್ಧಿಯನ್ನೂ ಇದು ಹೊಂದಿದೆ.
Tableau of UP showcases achievement through skill development &employment via 'One District One Product', based on new micro, small & medium enterprise policy & industrial development policy of the state govt. Development in Kashi Vishwanath corridor also exhibited.#RepublicDay pic.twitter.com/r2eUNtWZv0
— ANI (@ANI) January 26, 2022
ಇದಲ್ಲದೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಅರುಣಾಚಲ ಪ್ರದೇಶ, ಕರ್ನಾಟಕದ ಕರಕುಶಲ ಸ್ತದ್ಧಚಿತ್ರ ಮತ್ತು ಜಮ್ಮು ಮತ್ತು ಕಾಶ್ಮೀರದ ಟ್ಯಾಬ್ಲೋಗಳು ಕೂಡ ಗಮನ ಸೆಳೆದಿವೆ.
ಇಷ್ಟು ಮಾತ್ರವಲ್ಲದೇ ಸೇನಾ ಪಡೆಗಳ ಟ್ಯಾಬ್ಲೋಗಳು ಕೂಡ ಕಂಗೊಳಿಸಿವೆ.
#RepublicDayParade | Indian Air Force tableau displays the theme 'Indian Air Force Transforming for the future'. It showcases scaled-down models of MiG-21, Gnat, Light Combat Helicopter (LCH), Aslesha radar and Rafale aircraft. #RepublicDay pic.twitter.com/t1iaU7OsTX
— ANI (@ANI) January 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.