ನವದೆಹಲಿ: ಗಿಟ್ಹಬ್ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ‘ಹರಾಜು’ಗಾಗಿ ಹಂಚಿಕೊಳ್ಳಲಾದ ‘ಬುಲ್ಲಿ ಬಾಯಿ’ ಆ್ಯಪ್ನ ವಿವಾದ ಭುಗಿಲೆದ್ದ ಕೆಲವು ದಿನಗಳ ನಂತರ, ಹಿಂದೂ ಮಹಿಳೆಯರನ್ನು ಗುರಿಯಾಗಿಸುವ ಮತ್ತೊಂದು ಚಾನೆಲ್ ಟೆಲಿಗ್ರಾಮ್ನಲ್ಲಿ ಕಾಣಿಸಿಕೊಂಡಿದೆ.
ಟೆಲಿಗ್ರಾಂನಲ್ಲಿ ಹಿಂದೂ ಮಹಿಳೆಯರ ಫೋಟೋಗಳನ್ನು ತನ್ನ ಚಂದಾದಾರರಿಗ ಪ್ರಸಾರ ಮಾಡಿದ ಚಾನಲ್ ಅನ್ನು ನಿರ್ಬಂಧಿಸುವಂತೆ ಐಟಿ ಸಚಿವಾಲಯ ಮಂಗಳವಾರ ಆದೇಶಿಸಿದೆ. ಚಾನಲ್ ಅನ್ನು ಜೂನ್ 2021 ರಲ್ಲಿ ರಚಿಸಲಾಗಿದೆ ಎಂದು ವರದಿಯಾಗಿದೆ.
ಟ್ವಿಟರ್ ಬಳಕೆದಾರರು ಚಾನಲ್ನ ವಿವರಗಳನ್ನು ಹಂಚಿಕೊಂಡ ನಂತರ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ವಿಷಯದ ಬಗ್ಗೆ ಮಾಹಿತಿ ಪಡೆದರು. ಟ್ವೀಟ್ಗೆ ಉತ್ತರಿಸಿದ ಅವರು, ಚಾನಲ್ ಅನ್ನು ನಿರ್ಬಂಧಿಸಲಾಗಿದೆ ಮತ್ತು ಕ್ರಮಕ್ಕಾಗಿ ಭಾರತ ಸರ್ಕಾರವು ರಾಜ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ತಿಳಿಸಿದರು.
ಓಪನ್ ಸೋರ್ಸ್ ಪ್ಲಾಟ್ಫಾರ್ಮ್ ಗಿಟ್ಹಬ್ನಲ್ಲಿ ‘ಬುಲ್ಲಿ ಬಾಯಿ’ ಹೆಸರಿನ ವೆಬ್ ಪೇಜ್ ಮೂಲಕ ಆನ್ಲೈನ್ನಲ್ಲಿ ಮುಸ್ಲಿಂ ಮಹಿಳೆಯರ ‘ಹರಾಜು’ ಮಾಡಲಾಗುತ್ತಿತ್ತು. ಈ ಕುರಿತು ಆಕ್ರೋಶ ಭುಗಿಲೆದ್ದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
Channel blocked. Government of India coordinating with police authorities of states for action. https://t.co/kCB6Ys8TI2
— Ashwini Vaishnaw (@AshwiniVaishnaw) January 5, 2022
https://twitter.com/AskAnshul/status/1478385424716468231
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.