ನವದೆಹಲಿ : ಪ್ರವಾಸೋದ್ಯಮದಲ್ಲಿ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಲಯಗಳು, ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು, ವರ್ಗೀಕೃತ ಹೋಟೆಲ್ಗಳು, ಮಂಜೂರಾತಿ ಪಡೆದಿರುವ ಪ್ರವಾಸಿ ಏಜೆಂಟ್ಗಳು, ಪ್ರವಾಸಗಳನ್ನು ಆಯೋಜಿಸುವವರು, ಪ್ರವಾಸಿ ಪಾಸ್ಪೋರ್ಟ್ ಕಾರ್ಯಾಚರಣೆ ಮಾಡುವವರು, ವ್ಯಕ್ತಿಗಳು, ಈಗಾಗಲೇ ಗುರುತಿಸಿರುವ ವಲಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿರುವರು ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ಅರ್ಜಿಗಳನ್ನು ಸೂಕ್ತ ವಿಧಾನದಲ್ಲಿ ಭರ್ತಿ ಮಾಡಿರಬೇಕು. ನಿರ್ದಿಷ್ಟ ಮಾಹಿತಿಯನ್ನು ಉಲ್ಲೇಖಿಸಬೇಕು. 2018 ರ ಏಪ್ರಿಲ್ ನಿಂದ 2019 ರ ಮಾರ್ಚ್ ವರೆಗೆ ಕೈಗೊಂಡಿರುವ ಚಟುವಟಿಕೆಗಳು ಅಥವಾ ಪ್ರಶಸ್ತಿಗಳಿಗಾಗಿ ಸೂಕ್ತ ರೀತಿಯಲ್ಲಿ ನಮೂದು ಮಾಡಬೇಕು.
ಸಂಬಂಧಪಟ್ಟ ವಿಭಾಗಗಳಲ್ಲಿನ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು 2021 ರ ಆಗಸ್ಟ್ 10 ಕೊನೆಯ ದಿನವಾಗಿದೆ ಮತ್ತು ಅರ್ಜಿಗಳನ್ನು ಖುದ್ದಾಗಿ ಸಲ್ಲಿಸಬೇಕು ಹಾಗೂ ನಿರ್ದಿಷ್ಟವಾದ ಸ್ವರೂಪದಲ್ಲಿ ಕಟ್ಟುನಿಟ್ಟಾಗಿ ಸಲ್ಲಿಸಬೇಕು. 2018-19 ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳ ವಿವರ ಮತ್ತು ಮಾರ್ಗಸೂಚಿ ಪ್ರವಾಸೋದ್ಯಮ ಸಚಿವಾಲಯದ ವೆಬ್ಸೈಟ್ನಲ್ಲಿ tourism.gov.in ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.