ನವದೆಹಲಿ: ಭಾರತೀಯ ಸೇನೆಯು ಇಂದು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಶಾರ್ಟ್ ಸ್ಪ್ಯಾನ್ ಬ್ರಿಡ್ಜಿಂಗ್ ವ್ಯವಸ್ಥೆಗಳ ಮೊದಲ ಬ್ಯಾಚ್ ಅನ್ನು ಕಾರ್ಪ್ಸ್ ಆಫ್ ಎಂಜಿನಿಯರ್ಗಳಿಗೆ ಸೇರ್ಪಡೆಗೊಳಿಸಿದೆ. ಒಟ್ಟು 12 ವ್ಯವಸ್ಥೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಈ ವ್ಯವಸ್ಥೆಯನ್ನು ಡಿಆರ್ಡಿಒ ವಿನ್ಯಾಸಗೊಳಿಸಿದ್ದು, ಎಲ್ ಅಂಡ್ ಟಿ ತಯಾರಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾಣೆ, 10 ಮೀಟರ್ ಸೇತುವೆಗಳ ಅವಶ್ಯಕತೆ ಹೆಚ್ಚಿರುವ ಕಾರಣ ಈ ಸೇತುವೆ ವ್ಯವಸ್ಥೆಯು ದೇಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಈ ಸೇತುವೆ ಭಾರತದಲ್ಲಿ ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ಅಭಿವೃದ್ಧಿಗೊಂಡಿದೆ ಮತ್ತು ಇದು ಆತ್ಮನಿರ್ಭರ ಭಾರತದೆಡೆಗೆ ಒಂದು ಹೆಜ್ಜೆಯಾಗಿದೆ. ವಿಶೇಷವಾಗಿ ಪಶ್ಚಿಮ ಗಡಿಗಳಲ್ಲಿನ ಕಾರ್ಯಾಚರಣೆಗಳ ಸಂದರ್ಭದಲ್ಲಿ ಈ ಸೇತುವೆಗಳು ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಅಂತರವನ್ನು ತ್ವರಿತವಾಗಿ ನಿವಾರಿಸುವ ಮೂಲಕ ಸೇನಾಪಡೆಗಳಿಗೆ ಚಲನಶೀಲತೆಯನ್ನು ಒದಗಿಸುವ ಪ್ರಮುಖ ಅವಶ್ಯಕತೆಗಳನ್ನು ಈ ಉಪಕರಣಗಳು ಪೂರೈಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.