ನವದೆಹಲಿ: ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಅವರ ಪತ್ನಿ ಗರಿಮಾ ಅಬ್ರೋಲ್ ಅವರು ಶನಿವಾರ ವಾಯುಪಡೆಯ ಅಕಾಡೆಮಿಯಿಂದ ತರಬೇತಿ ಪಡೆದು ಹೊರಬಂದಿದ್ದಾರೆ. ಫ್ಲೈಯಿಂಗ್ ಆಫೀಸರ್ ಹುದ್ದೆ ಪಡೆದುಕೊಂಡಿದ್ದಾರೆ.
ಫೆಬ್ರವರಿ 1, 2019 ರಂದು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಸಮಯದಲ್ಲಿ ಮಿರಾಜ್ ಯುದ್ಧ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದರು.
ಹಳೆಯ ವಿಮಾನ ನಿಲ್ದಾಣ ರಸ್ತೆಯ ಯಮಲೂರು ಬಳಿ ಈ ಘಟನೆ ನಡೆದಿದ್ದು, ಈ ವಿಮಾನವನ್ನು ಪರೀಕ್ಷಾರ್ಥ ಹಾರಾಟಕ್ಕೆ ಕೊಂಡೊಯ್ಯುತ್ತಿದ್ದ ವಾಯುಸೇನೆಯ ಇಬ್ಬರು ಪರೀಕ್ಷಾ ಪೈಲಟ್ಗಳಾಗಿದ್ದ ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ ನೇಗಿ ಮತ್ತು ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಅವರು ಘಟನೆಯಲ್ಲಿ ಹುತಾತ್ಮರಾದರು.
ಬಳಿಕ ಸಮೀರ್ ಅಬ್ರೋಲ್ ಅವರ ಪತ್ನಿ ಗರಿಮಾ ಅವರು ವಾಯುಸೇನೆಯ ಪೈಲೆಟ್ ತರಬೇತಿ ಪಡೆದುಕೊಂಡರು. ಇದೀಗ ಅವರು ವಾಯುಪಡೆಯ ಅಕಾಡೆಮಿಯಿಂದ ತರಬೇತಿ ಪಡೆದು ಹೊರಬಂದಿದ್ದಾರೆ. ವಾಯುಸೇನೆಯ ಫ್ಲೈಯಿಂಗ್ ಆಫೀಸರ್ ಆಗಿ ಹೊರಹೊಮ್ಮಿದ್ದಾರೆ.
Garima Abrol, now Flying Officer Garima Abrol, wife of late Squadron leader Samir Abrol, who lost his life in an air accident, passed out from Air Force Academy yesterday: Defence PRO, Shillong pic.twitter.com/8Dvc9uzanV
— ANI (@ANI) December 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.