ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆರ್ಥಿಕ ರಾಜತಾಂತ್ರಿಕ ವೆಬ್ಸೈಟ್ (Economic Diplomacy Websit) ಅನ್ನು ಪ್ರಾರಂಭಿಸಿದ್ದು, ಇದು ಭಾರತದ ಆರ್ಥಿಕ, ವಲಯ ಮತ್ತು ರಾಜ್ಯವಾರು ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ್, ವೆಬ್ಸೈಟ್ ಸುಲಲಿತ ಉದ್ಯಮ ಉಪಕ್ರಮಗಳು, ನೀತಿ ಸುಧಾರಣೆಗಳು ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಪ್ರೋತ್ಸಾಹಿಸುವ ಬಗ್ಗೆ ನಿರ್ದಿಷ್ಟ ಗಮನಹರಿಸುವ ಮೂಲಕ ವೆಬ್ಸೈಟ್ ಜಾಗತಿಕ ವ್ಯಾಪಾರ ಸಮುದಾಯಕ್ಕೆ ಬಹುಆಯಾಮದ ಮತ್ತು ಕ್ರಿಯಾತ್ಮಕ ಬ್ರ್ಯಾಂಡ್ ಇಂಡಿಯಾವನ್ನು ನೀಡುತ್ತದೆ ಎಂದಿದ್ದಾರೆ.
2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ವೆಬ್ಸೈಟ್ ವಿದೇಶದಲ್ಲಿ ದೇಶದ ಕೃಷಿ ರಫ್ತಿಗೆ ಅವಕಾಶಗಳನ್ನು ತೋರಿಸಿಕೊಡುತ್ತದೆ ಎಂದಿದ್ದಾರೆ.
ಆಕರ್ಷಕ ಆರ್ಥಿಕ ಸಹಭಾಗಿತ್ವವನ್ನು ಉಂಟುಮಾಡುವ ಭಾರತದ ಆರ್ಥಿಕ ವಲಯ ಮತ್ತು ರಾಜ್ಯವಾರು ಸಾಮರ್ಥ್ಯಗಳನ್ನು ವೆಬ್ಸೈಟ್ ಪ್ರದರ್ಶಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.